ಜಮೀನು ಯಾರ ಹೆಸರಿನಿಂದ ಯಾರಿಗೆ ವರ್ಗಾವಣೆಯಾಗಿದೆ?

Written by Ramlinganna

Updated on:

Check your land mutation history  ರೈತರು ತಮ್ಮ ಜಮೀನಿನ ಸರ್ವೆ ನಂಬರಿನ ಮುಟೇಶನ್ ಇತಿಹಾಸವನ್ನು ಮೊಬೈಲ್ನಲ್ಲೇ  ಚೆಕ್ ಮಾಡಬಹುದು. ಹೌದು, ರೈತರು ಮುಟೇಶನ್ ಇತಿಹಾಸವನ್ನು ತಿಳಿಯಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ನಲ್ಲೇ ಚೆಕ್ ಮಾಡಬಹುದು.

ಏನಿದು ಸರ್ವೆ ನಂಬರಿನ ಮುಟೇಶನ್ ಇತಿಹಾಸ?

ರೈತರ ಜಮೀನಿನ ಸರ್ವೆ ನಂಬರಿನ ಮುಟೇಶನ್ ಇತಿಹಾಸದಿಂದ ಇಲ್ಲಿಯವರೆಗೆ ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ. ಯಾರ ಹೆಸರಿನಲ್ಲಿ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು.  ಯಾವ ಸರ್ವೆ ನಂಬರಿನ ಹಿಸ್ಸಾ ನಂಬರಿಗೆ ಎಷ್ಟು ಸಾಲವಿದೆ?  ಹಿಸ್ಸಾ ನಂಬರ್ ಪಟ್ಟಾ ಆಗಿದೆಯೋ ಇಲ್ಲವೋ ಎಂಬುದನ್ನು ಸಹ ತಿಳಿದುಕೊಳ್ಳಬಹುದು. ಸರ್ವೆ ನಂಬರಿನಲ್ಲಿ ಯಾರು ಯಾರು ಸ್ವಾಧೀನರಾಗಿದ್ದಾರೆ? ಹಕ್ಕು ಬದಲಾವಣೆ ಯಾರ ಹೆಸರಿನಿಂದ ಯಾರ ಹೆಸರಿಗಾಗಿದೆ ಎಂಬುದನ್ನು ಚೆಕ್ ಮಾಡಬಹುದು.

Check your land mutation history  ಜಮೀನಿನ ಸರ್ವೆ ನಂಬರ್ ಮುಟೇಶನ್ ಇತಿಹಾಸ ತಿಳಿಯುವುದು ಹೇಗೆ?

ರೈತರು ತಮ್ಮ ಜಮೀನಿನ ಮುಟೇಶನ್ ಇತಿಹಾಸವನ್ನು ತಿಳಿಯಲು ಈ

https://landrecords.karnataka.gov.in/service40/PendcySurveyNoWiseRpt

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆರ್.ಟಿ.ಸಿ ಮುಟೇಶನ್ ರಿಪೋರ್ಟ್ ಇತಿಹಾಸ  ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದರೊಂದಿಗೆ ಗ್ರಾಮ ಆಯ್ಕೆ ಮಾಡಿಕೊಂಡ ನಂತರ ಸರ್ವೆ ನಂಬರ್ ನಮೂದಿಸಿದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ರಿಪೋರ್ಟ್ ಓಪನ್ ಆಗುತ್ತದೆ.

ಈ ರಿಪೋರ್ಟ್ ನಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಎಷ್ಟು ಹಿಸ್ಸಾಗಳಿವೆ. ಪ್ರತಿಯೊಂದು ಹಿಸ್ಸಾಗಳಲ್ಲಿ ಜಮೀನು ಕುರಿತಂತೆ ಮಾರ್ಪಾಡಾದ ದಿನಾಂಕ ಹಾಗೂ ಹಕ್ಕು ಬದಲಾವಣೆಯಾಗಿದೆಯೋ ಅಥವಾ ಪೋಡಿಯಾಗಿದೆಯೋ ಅಥವಾ ಪೌತಿ ಖಾತೆಯಲ್ಲಿ ಜಮೀನು ಬದಲಾವಣೆಯಾಗಿದೆ ಎಂಬುದರ ಕುರಿತು ಮಾಹಿತಿ ಕಾಣುತ್ತದೆ.

ಯಾವ ಸರ್ವೆ ನಂಬರ್ ಮತ್ತು ಹಿಸ್ಸಾದಲ್ಲಿ ಯಾರ ಹೆಸರಿಗೆ ಎಷ್ಟು ಬ್ಯಾಂಕಿನ ಸಾಲವಿದೆ ಎಂಬ ಮಾಹಿತಿಯೊಂದಿಗೆ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆದಿದ್ದಾರೆ ಮತ್ತು ಅವರ ಹೆಸರು ಕಾಣುತ್ತದೆ.  ಜಮೀನು ಜಂಟಿಯಾಗಿದ್ದರೆ ಜಂಟಿಯಾಗಿದೆ ಎಂಬ ಸಂದೇಶವೂ ಇರಲಿದೆ. ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರಿನಲ್ಲಿ ಒಟ್ಟು ಜಮೀನೆಷ್ಟು ಮತ್ತು ಖರಾಬ್ ಅ ಮತ್ತು ಖರಾಬ್ ಬ ಜಮೀನೆಷ್ಟು ಇದೆ ಎಂಬ ಮಾಹಿತಿಯೂ ಇರಲಿದೆ.

ನೀವು ನಮೂದಿಸಿದ ಜಮೀನಿ ಸರ್ವೆ ನಂಬರಿನಲ್ಲಿ ಸ್ವಾಧೀನದಾರರ ಹೆಸರು ಅಂದರೆ ಜಮೀನು ಮಾಲಿಕರ ಹೆಸರು ಕಾಣುವುದು. ಇದರೊಂದಿಗೆ ಅವರ ಹೆಸರಿಗೆ ಪ್ರತ್ಯೇಕವಾಗಿ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯೂ ಇರುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ ಗ್ರಾಮವಾರು ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಜಮೀನು ಪೌತಿ ಖಾತೆಯಲ್ಲಿ ಬದಲಾವಣೆಯಾಗಿದ್ದರೆ ಯಾರ ಹೆಸರಿನಿಂದ ಯಾರ ಹೆಸರಿಗೆ ಬದಲಾವಣೆಯಾಗಿದೆ. ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್, ಎಷ್ಟು ಎಕರೆ ಜಮೀನು ಬದಲಾವಣೆಯಾಗಿದೆ? ಯಾರ ಹೆಸರಿನಿಂದ ಯಾರ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ ಅಂದರೆ ಹಕ್ಕು ಬದಲಾವಣೆ ಮಾಡಿದವರು ಯಾರು ಹಕ್ಕು ಬದಲಾವಣೆ ಪಡೆದವರು ಯಾರು ಎಂಬ ಸಂಪೂರ್ಣ ಮಾಹಿತಿ ಈ ಮುಟೇಶನ್ ಇತಿಹಾಸದಲ್ಲಿರುತ್ತದೆ.

ಕೊನೆಯಲ್ಲಿ ಮುಟೇಶನ್ ಸ್ಥಿತಿ ಯಾರ ಹೆಸರಿಗೆ ಮುಟೇಶನ್ ಇದೆ ಜಮೀನು ವಿಸ್ತೀರ್ಣ ಎಷ್ಟಿದೆ  ಆ ಖಾತೆಯು ಜಂಟಿಯಾಗಿದಯೋ ಅಥವಾ ಪ್ರತ್ಯೇಕವಾಗಿದೆಯೋ ಜಂಟಿಯಾಗಿದ್ದರೆ ಯಾರ ಹೆಸರಿಗೆ ಅಂದರೆ ಸಂಬಧಿಕರು ಅಥವಾ ಮಗ, ಮಗಳೋ ಎಂಬ ಮಾಹಿತಿ ರೈತರಿಗೆ ಕಾಣಲಿದೆ. ಇದು ರೈತರಿಗೆ ತುಂಬಾ ಮಹತ್ವದ ಮಾಹಿತಿ ನೀಡುತ್ತದೆ.

Leave a Comment