ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪಡೆಯಲು ಕಚೇರಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ಹೌದು, ಕಂದಾಯ ಇಲಾಖೆಯು ರೈತರಿಗೆ ತಮ್ಮ ಜಮೀನಿನ ದಾಖಲೆಗಳನ್ನು ಸುಲಭವಾಗಿ ಮೊಬೈಲ್ ನಲ್ಲೇ ಪಡೆಯಲು ಭೂಮಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಭೂಮಿ ತಂತ್ರಾಂಶದ ಆ್ಯಪ್ ನ್ನು ರೈತರು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ತಮಗೆ ಬೇಕಾದ ದಾಖಲೆಗಳನ್ನು ಚೆಕ್ ಮಾಡಿಕೊಳ್ಳಬಹುದು.
ಏನಿದು ಭೂಮಿ ಆ್ಯಪ್? (What is Bhoomi App)
ಕರ್ನಾಟಕ ರಾಜ್ಯ ಸರ್ಕಾರವು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿತು. 2000 ರಿಂದ ರೈತರಿಗೆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗುವಂತೆ ಭೂಮಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಯಿತು.
ಭೂಮಿ ಆ್ಯಪ್ ಇನಸ್ಟಾಲ್ ಮಾಡಿಕೊಳ್ಳುವುದು ಹೇಗೆ? (How to install Bhoomi App)
ರೈತರು ತಮ್ಮ ಮೊಬೈಲ್ ನಲ್ಲಿ ಭೂಮಿ ಆ್ಯಪ್ ಇನಸ್ಟಾಲ್ ಮಾಡಿಕೊಳ್ಳಲು ಈ
https://play.google.com/store/apps/details?id=app.bmc.com.BHOOMI_MRTC&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆ್ಯಪ್ ಓಪನ್ ಆಗುತ್ತದೆ. ನಂತರ install ಮೇಲೆ ಕ್ಲಿಕ್ ಮಾಡಬೇಕು. ನಂತರ ಆ್ಯಪ್ ನಿಮ್ಮ ಮೊಬೈಲಿನಲ್ಲಿ ಇನಸ್ಟಾಲ್ ಆಗುತ್ತದೆ. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.ಆಗ ಭೂಮಿ ಆ್ಯಪ್ ನಿಮ್ಮ ಮೊಬೈಲಿನಲ್ಲಿ ಕಾಣಿಸುತ್ತದೆ.
ಭೂಮಿ ಆ್ಯಪ್ ನಲ್ಲಿ ಯಾವ ಯಾವ ದಾಖಲೆ ಪಡೆಯಬಹುದು? (What are documents available in bhoomi app)
ರೈತರು ಭೂಮಿ ಆ್ಯಪ್ ನಲ್ಲಿ View RTC Information ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಹಾಕಿ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಿಸ್ಸಾ ನಂಬರ್ ನಮೂದಿಸಬೇಕು. ಹಿಸ್ಸಾ ನಂಬರ್ ನೆನಪಿಲ್ಲದಿದ್ದರೆ ಸ್ಟಾರ್ ಕಾಕಿ Fetch Details ಮೇಲೆ ಕ್ಲಿಕ್ ಮಾಡಬೇಕು.ಆಗ ನೀವು ನಮೂದಿಸಿ ಸರ್ವೆನಂಬರ್ ಮಾಹಿತಿ ತೆರೆದುಕೊಳ್ಳುತ್ತದೆ. ನೀವು ಹಾಕಿದ ಸರ್ವೆ ನಂಬರ್ ಎಷ್ಟು ಎಕರೆ ಹೊಂದಿದೆ.
ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಸರ್ವೆ ನಂಬರ್ ಏನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಮಣ್ಣಿನ ಪ್ರಕಾರ, ಜಮೀನು ಪಟ್ಟಾ ಆಗಿದೆಯೋ ಇಲ್ಲವೋ? ಮುಂದಿನ ಪುಟದಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರಿದ್ದಾರೆ. ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಯಾವ ಯಾವ ಬೆಳೆ ಹಾಕಲಾಗಿದೆ ಎಂಬ ಮಾಹಿತಿ ಇರುತ್ತದೆ.
ಜಮೀನಿನ ಮಾಲಿಕರ ಹೆಸರು ಹುಡುಕಿ
ಜಮೀನಿನ ಮಾಲಿಕರ ಹೆಸರಿನಿಂದ ಹುಡುಕಬೇಕಾದರೆ ನೀವು View RTC by Onwer Name ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ View Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಗ್ರಾಮದಲ್ಲಿ ಯಾವ ಯಾವ ರೈತರಿದ್ದಾರೆ ಎಂಬ ಪಟ್ಟಿ ಕಾಣಿಸುತ್ತದೆ. ಅದರ ಎದುರುಗಡೆ ಅವರ ಸರ್ವೆ ನಂಬರ್ ಕಾಣಿಸುತ್ತದೆ. ಅದರ ಎದುರುಗಡೆಯಿರುವ ಸರ್ಕಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಅ ಆ ರೈತರಿಗೆ ಎಷ್ಟು ಎಕರೆ ಜಮೀನಿದೆ? ಜಮೀನಿನ ಪ್ರಕಾರ ಅದರೆ ಮಣ್ಣಿನ ಬಣ್ಣ ಯಾವುದು ಎಂಬ ಮಾಹಿತಿ ಇರುತ್ತದೆ.
Search by Owner Name ಬಾಕ್ಸ್ ನಲ್ಲಿ ನೀವು ಯಾವ ರೈತರ ಜಮೀನು ಹುಡುಕಬೇಕೆಂದುಕೊಂಡಿದ್ದೀರೋ ಅವರ ಹೆಸರು ಕನ್ನಡದಲ್ಲಿ ಬರೆಯುವಾಗ ನೀವು ಹುಡುಕುತ್ತಿರುವ ಹೆಸರು ಕಾಣಿಸುತ್ತದೆ. ಅದರ ಎದುರುಗಡೆ ಕಾಣುವ ಸರ್ಕಲ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದಾಗ ಆ ರೈತರ ಹೆಸರಿಗಿರುವ ಜಮೀನಿನ ವಿವರ ಕಾಣಿಸುತ್ತದೆ. ಅದೇ ರೀತಿ ಮುಟೇಶನ್ ಇತಿಹಾಸ ಹಾಗೂ ಮುಟೇಶನ್ ವಿವರದ ಮಾಹಿತಿ ಪಡೆಯಬಹುದು.