ನಿಮ್ಮ ಹೆಸರಿಗೆ ಜಾಬ್ ಕಾರ್ಡ್ ಇದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

NREGA Jobcard ನರೇಗಾ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಪಡೆದವರು ತಮ್ಮ ಕಾರ್ಡ್ ಸಕ್ರಿಯವಾಗಿಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ತಮ್ಮ ಜಾಬ್ ಕಾರ್ಡ್ ನ ಮಾಹಿತಿಯನ್ನು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಅತೀ ಸುಲಭವಾಗಿ ಚೆಕ್ ಮಾಡಬಹುದು. ಇದರೊಂದಿಗೆ ಮನರೇಗಾ ಯೋಜನೆಯ ಉದ್ದೇಶ ಹಾಗೂ ಈ ಯೋಜನೆಯ ಕುರಿತಂತೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ಮನರೇಗಾ ಯೋಜನೆ (NREGA Jobcard) ?

ಗ್ರಾಮೀಣ ಭಾಗದಲ್ಲಿ ವಾಸಿಸುವ ಬಡ ಹಾಗೂ ದುರ್ಬಲ ಆಧಾಯದ ಗುಂಪಿನ ಕುಟುಂಬಗಳಿಗೆ 100 ದಿನಗಳ ಉದ್ಯೋಗವನ್ನು ಒದಗಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಪಡೆದವರು ತಮ್ಮ ಜೀವನೋಪಾಯಕ್ಕಾಗಿ ಆದಾಯ ಗಳಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಕಾರ್ಯಗಳ ಬದಲಾಗಿ ಆರ್ಥಿಕವಾಗಿ ಸಬಲಗೊಳಿಸುವುದಾಗಿದೆ.

ಗ್ರಾಮೀಣ ಪ್ರದೇಶಗಳ ಜನರು ಕೆಲಸ ಅರಸುತ್ತಾ ಬೇರೆ ಬೇರೆ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಈ ವಲಸೆ ಹೋಗುವುದನ್ನು ತಪ್ಪಿಸಲು ತಾವಿದ್ದ ಪ್ರದೇಶದಲ್ಲಿಯೇ ಕೆಲಸ ನೀಡವುದಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ.  ಮನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಲು ಜಾಬ್ ಕಾರ್ಡ್ ಸಹ ನೀಡಲಾಗುತ್ತಿದೆ.

NREGA Jobcard ಸಕ್ರಿಯವಾಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ಮನರೇಗಾ ಯೋಜನೆಯಡಿಯಲ್ಲಿ ಬಹುತೇಕ ಕಾರ್ಮಿಕರು ಜಾಬ್ ಕಾರ್ಡ್ ಪಡೆದಿರುತ್ತಾರೆ. ಆದರೆ ಆ ಕಾರ್ಡ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲೂ ಹೋಗುವುದಿಲ್ಲ. ನಿಮ್ಮ ಜಾಬ್ ಕಾರ್ಡ್ ಸಕ್ರೀಯವಾರುವುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/PTBank/NREGA?DepartmentID=1016&type=Swatch%20Bharat&ServiceID=1030

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಎಂಜಿಎನ್ಆರ್.ಇಜಿಎ ಫಲಾನುಭವಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.  ಅಲ್ಲಿ ನೀವು ಆಯ್ಕೆ ಮಾಡಿದ ತಾಲೂಕಿನಲ್ಲಿ ಬರುವ ಗ್ರಾಮ ಪಂಚಾಯತ್ ಗಳ ಹೆಸರು ಕಾಣಿಸುತ್ತದೆ. ನಿಮ್ಮ ಗ್ರಾಮ ಪಂಚಾಯತ್ ಎದುರಗಡೆ ಮನರೇಗಾ ಯೋಜನೆಯಡಿಯಲ್ಲಿ ಯಾವ ಯಾವ ಕಾಮಗಾರಿಗಳು ಪೂರ್ಣಗೊಂಡಿವೆ. ಯಾವ ಕಾಮಗಾರಿ ಪ್ರಗತಿಯಲ್ಲಿಯೆ ಹಾಗೂ ಸಕ್ರಿಯ ಜಾಬ್ ಕಾರ್ಡ್ ಗಳು ಹೀಗೆ ಮಾಹಿತಿಗಳು ಕಾಣಿಸುತ್ತದೆ.

ನಿಮ್ಮ ಗ್ರಾಮ ಪಂಚಾಯತ್ ಎದುರುಗಡೆ ಸಕ್ರಿಯಾ ಜಾಬ್ ಕಾರ್ಡ್ ಕೆಳಗಡೆ ಬ್ಲೂ ಕಲರ್ ನಲ್ಲಿ ಕಾಣುವ ನಂಬರ್ ಗಳ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನಲ್ಲಿ ಯಾರ ಯಾರ ಜಾಬ್ ಕಾರ್ಡ್ ಸಕ್ರೀಯವಾಗಿದೆಯೋ ಅವರ ಹೆಸರು ಕಾಣಿಸುತ್ತದೆ.  ನಿಮ್ಮಹೆಸರು ತಂದೆಯ ಹೆಸರು ಹಾಗೂ ಎಷ್ಟು ದಿನ ದಿನಗೂಲಿ ಮಾಡಿದ್ದಾರೆ ಎಂಬ ಮಾಹಿತಿಯೂ ಇರುತ್ತದೆ.

ಇದನ್ನೂ ಓದಿ ಈ ಬೆಳೆಗಳಿಗೆ ವಿಮೆ ಮಾಡಿಸಿದರೆ ಮಾತ್ರ ನಿಮಗೆ ಬೆಳೆ ವಿಮೆ ಹಣ ಜಮೆ- ಯಾವ ಬೆಳೆಗೆ ಎಷ್ಟು ಜಮೆ? ಇಲ್ಲಿದೆ ಮಾಹಿತಿ

ಮಸ್ಟರ್ ರೋಲ್ ಪಾವತಿಸಲಾಗಿದೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮ ಪಂಚಾಯತ್ ನಲ್ಲಿ ಯಾವ ಯಾವ ಕಾಮಗಾರಿಗಳು ಎಲ್ಲಿಂದ ಎಲ್ಲಿಯವರೆಗೆ ಯಾವಾಗ ಮುಗಿದಿದೆ? ಎಂಬುದರ ಕುರಿತು ಮಾಹಿತಿ ಇರುತ್ತದೆ.

ಮನರೇಗಾ ಯೋಜನೆಯಡಿಯಲ್ಲಿ ನೀಡುವ ದಿನಗೂಲಿ ಎಷ್ಟಿದೆ?

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದೈಹಿಕ ಕೆಲಸ ಮಾಡಲು ಇಚ್ಚಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಕಾಲ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡುವುದು ಈ ಯೋಜನೆಯ ಉದ್ದೇಶವೂ ಆಗಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕಾರ್ಯನಿರ್ವಹಿಸುವವರಿಗೆ 1-4-2023 ರಿಂದ ಅನ್ವಯವಾಗುವಂತೆ ದಿನಗೂಲಿ 309 ರೂಪಾಯಿಗಳಿಂದ 316 ರೂಪಾಯಿಗಳಿಗೆ ಏರಿಸಲಾಗಿದೆ.

Leave a Comment