ಪಿಎಂ ಕಿಸಾನ್ 14ನೇ ಕಂತು ಜಮೆಯಾಗಲು ಈ ಮಾಹಿತಿಗಳು ಸರಿಯಿರಬೇಕು : ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

ಪಿಎಂ ಕಿಸಾನ್  ಸ್ಟೇಟಸ್ ನಲ್ಲಿ ಯಾವ ಯಾವ ಮಾಹಿತಿಗಳಿದ್ದರೆ ರೈತರಿಗೆ ಪಿಎಂ ಕಿಸಾನ್ 14ನೇ ಕಂತು ಜಮೆಯಾಗುತ್ತದೆ? ಸ್ಟೇಟಸ್  ನಲ್ಲಿ ಏನೇನು ಮಾಹಿತಿಗಳಿರಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ.

ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಸಿಕೊಂಡ ಎಲ್ಲಾ ರೈತರಿಗೆ ಪಿಎಂ ಕಿಸಾನ್ ಹಣ ಈಗ ಜಮೆಯಾಗುತ್ತಿಲ್ಲ. ಕೆಲವು ರೈತರಿಗೆ ಎಲ್ಲಾ ಅರ್ಹತೆಗಳಿದ್ದರೂ ಸಹ ಜಮೆಯಾಗುತ್ತಿಲ್ಲ. ಆದರೆ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿದೆ ಎಂಬುದು ಬಹಳಷ್ಟು ರೈತರು ಇನ್ನೂ ಗೊಂದಲದಲ್ಲಿದ್ದಾರೆ.

ಹೌದು, ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ. ಹಾಗೂ ಆ ಕುಟುಂಬದಲ್ಲಿ ಸರ್ಕಾರಿ ನೌಕರರಿರಬಾರದು ಹಾಗೂ ಆ ಕುಟುಂಬದಲ್ಲಿ ಪಿಂಚಣಿ ಸೌಲಭ್ಯ ಪಡೆಯಬಾರದು. ಅಂತಹ ಕುಟುಂಬಕ್ಕೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ. ಆದರೆ ಕೆಲವು ಕುಟುಂಬಗಳಲ್ಲಿ ಒಬ್ಬರೇ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ್ದರೂ ಹಾಗೂ ಆ ಕುಟುಂಬದಲ್ಲಿ ಯಾರೂ ಪಿಂಚಣಿ ಸೌಲಭ್ಯ ಪಡೆಯುತ್ತಿಲ್ಲ ಮತ್ತು ಸರ್ಕಾರಿ ನೌಕರರಿಲ್ಲ ಆದರೂ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿದೆ. ಯಾವ ಕಾರಣಕ್ಕಾಗಿ ತಡೆ ಹಿಡಿಯಲಾಗಿದೆ ಹೀಗೆ ಚೆಕ್ ಮಾಡಿ..

ಪಿಎಂ ಕಿಸಾನ್ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ? ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಯಾವ ಕಾರಣಕ್ಕಾಗಿ ಹಣ ಜಮೆಯಾಗುವುದನ್ನು ತಡೆಹಿಡಿಯಲಾಗಿದೆ ಎಂಬುದನ್ನ ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ನಂತರ ಓಪನ್ ಆಗುವ ಪಿಎಂ ಕಿಸಾನ್ ಪೇಜ್ ನಲ್ಲಿ ಎಂಟರ್ ವ್ಯಾಲ್ಯು ಕೆಳಗಡೆ ನಿಮ್ಮ ಮೊಬೈಲ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ನಲ್ಲಿ ಅಲ್ಲಿ ಕಾಣುವ ಕೋಡ್ ಹಾಕಬೇಕು. ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಯಾವ ಯಾವ ಮಾಹಿತಿ ಇರಬೇಕು?

ಪಿಎಂ ಕಿಸಾನ್ ಸ್ಟೇಟಸ್ ಪೇಜ್ ನಲ್ಲಿನಿಮ್ಮ ಹೆಸರು ತಂದೆಯ ಹೆಸರು, ಊರು, ಜಿಲ್ಲೆ, ತಾಲೂಕಿನ ಮಾಹಿತಿ ಇರುತ್ತದೆ. ಇದು ಎಲ್ಲಾ ರೈತರಿಗಿದ್ದಂತೆ ಮಾಹಿತಿ ಇರುತ್ತದೆ. ಆದರೆ ರೈತರು ಈ ಕೆಳಗಿನ ಮಾಹಿತಿಯನ್ನು ಮೊದಲು ಚೆಕ್ ಮಾಡಬೇಕು.

 Aadhaar Demo Authentication status ನಲ್ಲಿ Success ಇರಬೇಕು.

Ekyc done ಎದುರುಗಡೆ Yes ಇರಬೇಕು.

Eligibility ಎದುರುಗಡೆ Yes ಇರಬೇಕು.

PFMS/Bank status ಎದುರುಗಡೆ Farmer record has been accepted by PFMS/Bank ಇರಬೇಕು.

Land Seeding ಎದುರುಗಡೆ Yes ಇರಬೇಕು.

ರೈತರು ಮೇಲೆ ತಿಳಿಸಿದ ಮಾಹಿತಿಗಳನ್ನು ಮೊದಲು ಚೆಕ್ ಮಾಡಬೇಕು. ಮೇಲೆ ತಿಳಿಸಿದಂತೆ ಮಾಹಿತಿಗಳು ಸರಿಯಿದ್ದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯಡಿ 14ನೇ ಕಂತು ಜಮೆಯಾಗುತ್ತದೆ. ಈ ಎಲ್ಲಾ ಮಾಹಿತಿಗಳು ಸರಿಯಿದ್ದರೂ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲವಾದರೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ದಾಖಲೆ ಪಹಣಿಗಳಲ್ಲಿ ಹೆಸರು ಒಮ್ಮೆ ಚೆಕ್ ಮಾಡಿಕೊಳ್ಳಬೇಕು. ಈ ಎಲ್ಲಾ ದಾಖಲೆಗಳಲ್ಲಿ ನಿಮ್ಮ ಹೆಸರು ಒಂದೇ ತರಹ ಇರಬೇಕು. ಹೆಸರು ವ್ಯತ್ಯಾಸವಿದ್ದರೂ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ. ಒಂದು ವೇಳೆ ಹೆಸರು ವ್ಯತ್ಯಾಸವಿದ್ದರೂ ಕೂಡಲೇ ನಿಮ್ಮ ಹೆಸರು ಸರಿಪಡಿಸಿಕೊಳ್ಳಬೇಕು.

Leave a comment