ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ಎಫ್ಐಡಿ ಕಡ್ಡಾಯ

Written by Ramlinganna

Updated on:

Check FID in mobile ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಂದಾಯ, ಮೀನುಗಾರಿಕೆ, ರೇಷ್ಮೆ ಇಲಾಖೆಗಳಿಂದ ವಿವಿಧ ಸೌಲಭ್ಯ ಪಡೆಯಲು ಹಾಗೂ ಬೆಳೆ ಸಾಲ ಪಡೆಯಲು ರೈತಬಾಂಧವರಿಗೆ ಎಫ್ಐಡಿ ಇರುವುದು ಕಡ್ಡಾಯವಾಗಿದೆ.

ಹೌದು, ಸರ್ಕಾರದ ವತಿಯಿಂದ ವಿವಿಧ ಇಲಾಖೆಗಳಿಂದ ನೀಡಲಾಗುವ ಸೌಲಭ್ಯ ಅಂದರೆ ಸಬ್ಸಿಡಿ ಪಡೆಯಲು ಎಫ್ಐಡಿ ಇರುವುದು ಕಡ್ಡಾಯವಾಗಿದೆ.  ರೈತರು ಎಫ್ಐಡಿ ಎಲ್ಲಿ ಪಡೆಯಬೇಕು? ಎಫ್ಐಡಿ ಪಡೆಯಲು ಯಾವ ಯಾವ ದಾಖಲೆಗಳು ಬೇಕು? ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Check FID in mobile ರೈತರ ಹೆಸರಿನಲ್ಲಿ ಎಫ್ಐಡಿ ಆಗಿದೆಯೋ ಇಲ್ಲವೋ?  ಚೆಕ್ ಮಾಡಿ

ರೈತರು ತಮ್ಮ ಹೆಸರಿಗೆ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಫ್ರೂಟ್ಸ್ ಐಡಿ ಕಾಣಿಸುತ್ತದೆ. ಅದರ ಮುಂದುಗಡೆ ಪಿಎಂಕೆಐಡಿ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಹೆಸರು ಇರುತ್ತದೆ. ಈ ಫ್ರೂಟ್ಸ್ ಐಡಿ ರೈತರಿಗೆ ಅತೀ ಮುಖ್ಯವಾಗಿದೆ. ಮುಂದೆ ಸರ್ಕಾರದ ಸೌಲಭ್ಯ ಪಡೆಯಲು ಇಲಾಖೆಯ ವತಿಯಿಂದ ಫ್ರೂಟ್ಸ್ ಐಡಿ ಕೇಳಲಾಗುವುದು. ಆಧಾರ್ ಕಾರ್ಡ್ ನಂತೆ ಫ್ರೂಟ್ಸ್ ಐಡಿ ಸಹ ರೈತರಿಗೆ ಬೇಕಾಗುವ ಅತೀ ಮುಖ್ಯವಾದ ದಾಖಲೆಯಾಗಿದೆ.

ಫ್ರೂಟ್ಸ್ ಐಡಿ ಮಾಡಿಸಲು ಬೇಕಾಗುವ ದಾಖಲೆಗಳು ಯಾವುವು?

ಫ್ರೂಟ್ಸ್ ಐಡಿ ಮಾಡಿಸಬೇಕಾದರೆ ರೈತರಿಗೆ ಅತೀ ಮುಖ್ಯವಾಗಿ ಬೇಕಾಗಿರುವ ದಾಖಲೆ ಆಧಾರ್ ಕಾರ್ಡ್ ಆಗಿದೆ. ಇದರೊಂದಿಗೆ ಜಮೀನಿನ ಪಹಣಿ (ಆರ್.ಟ.ಸಿ)  ಬೇಕಾಗುತ್ತದೆ. ಬ್ಯಾಂಕ್ ಪಾಸ್ ಬುಕ್ ಪ್ರತಿ ಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು.  ಇತ್ತೀಚಿನ ಭಾವಚಿತ್ರ ಸಲ್ಲಿಸಬೇಕು.

ಇದನ್ನೂ ಓದಿ ನಿಮ್ಮ ಜಮೀನಿನ ಹಳೆಯ ಪಹಣಿ ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ಎಫ್ಐಡಿ ಗಾಗಿ ಅರ್ಜಿ ಎಲ್ಲಿ ಸಲ್ಲಿಸಬೇಕು?

ರೈತರು ಎಫ್ಐಡಿಗಾಗಿ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಅಥವಾ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮೇಲಿನ ದಾಖಲೆಗಳನ್ನು ಸಲ್ಲಿಸಿ ಎಫ್ಐಡಿ ಪಡೆದುಕೊಳ್ಳಬಹುದು. ಒಂದುವೇಳೆ ಎಫ್ಐಡಿ ರಚನೆಯಾಗಿ ಕೆಲವೊಂದು ಖಾತಾ ಸಂಖ್ಯೆಗಳು ಎಫ್ಐಡಿಯಲ್ಲಿ ಸೇರ್ಪಡೆಯಾಗದಿದ್ದಲ್ಲಿಸಂಬಂಧಿಸಿದ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಬೇಕು.

Check FID in mobile ಎಫ್ಐಡಿಯನ್ನುಪಡೆಯಲು ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಎಫ್ಐಡಿಗೆ ಅರ್ಜಿ ಸಲ್ಲಿಸಬೇಕಾದರೆ ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು citizen Registration ಮೇಲೆ ಕ್ಲಿಕ್ ಮಾಡಬೇಕು.ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ ನೀವು ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ನಮೂದಿಸಬೇಕು.ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು. ನಂತರ I agree to share my Aadhaar details ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ ಓಟಿಪಿ ಬರುತ್ತದೆ. ಆ ಓಟಿಪಿ  ನಮೂದಿಸಿ ಮುಂದೆ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮೊಬೈಲ್ ನಲ್ಲೇ ಅರ್ಜಿಸಲ್ಲಿಸಬಹುದು. ಇನ್ನೈೇಕೆ ತಡ ಈಗಲೇ ಅರ್ಜಿ ಸಲ್ಲಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ಸರ್ಕಾರಿ ಸೌಲಭ್ಯ ಪಡೆಯಲುವಲ್ಲಿ ವಂಚಿತರಾಗುವ ಸಾಧ್ಯತೆಯಿದೆ.

Leave a Comment