ಪಿಎಂ ಕಿಸಾನ್ ಹಣ ಜಮೆಯಾಗಿಲ್ಲವೇ? ಈ ನಂಬರಿಗೆ ಕರೆ ಮಾಡಿ

Written by Ramlinganna

Updated on:

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲವೇ? ನಿಮಗೇಕೆ ಜಮೆಯಾಗಿಲ್ಲ? ಕಾರಣವೇನು? ಎಂಬುದರ ಮಾಹಿತಿಯನ್ನು ರೈತರು ನೇರವಾಗಿ ಪಡೆಯಬಗಹುದು.

ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಿಂದ ಪಿಎಂ ಕಿಸಾನ್ ಹಣ ಏಕೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಸ್ಟೇಟಸ್ ಮೂಲಕ ಚೆಕ್ ಮಾಡಬಹುದು. ಒಂದು ವೇಳೆ ಜಮೆಯಾಗಿಲ್ಲವೆಂದರೆ ಏಕೆ ಜಮೆಯಾಗಿಲ್ಲ ಎಂಬುದನ್ನು ಉಚಿತ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಬಹುದು.

ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check pm kisan status)

ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ಈ

https://pmkisan.gov.in/beneficiarystatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರಿಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಮೊಬೈಲ್ ನಂಬರ್ ಹಾಗೂ ರೆಜಿಸ್ಟರ್ ನಂಬರ್. ರೈತರಿಗೆ ರೆಜಿಸ್ಟರ್ ನಂಬರ್ ಗೊತ್ತಿರುವುದಿಲ್ಲ ಹಾಗಾಗಿ ಮೊಬೈಲ್ ನಂಬರ್ ಮೂಲಕವೇ ಸ್ಟೇಟಸ್ ಚೆಕ್ ಮಾಡಬಹುದು. ಅಲ್ಲಿ ರೈತರು ಎಂಟರ್ ವ್ಯಾಲ್ಯು ಕಾಲಂ ನಲ್ಲಿ ಮೊಬೈಲ್ ನಂಬರ್ ಹಾಕಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಬಾಕ್ಸ್ ನಲ್ಲಿ ಹಾಕಬೇಕು. ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮಯಾಗಿದೆ. ಯಾವ ಯಾವ ತಿಂಗಳಲ್ಲಿಜಮೆಯಾಗಿದೆ ಎಂಬುದನ್ನುಚೆಕ್ ಮಾಡಬಹುದು.

ಪಿಎಂ ಕಿಸಾನ್ ಯೋಜನೆಯಡಿ ಇಲ್ಲಿಯವರೆಗೆ 13 ಕಂತುಗಳು ಜಮೆಯಾಗಿದೆ. ನೀವು ಯಾವಾಗ ನಿಮ್ಮ ಹೆಸರು ನೋಂದಣಿ ಮಾಡಿಸಿದ್ದೀರೋ ಅಲ್ಲಿಂದ ನಿಮಗೆ ಕಂತಿನ ಲೆಕ್ಕ ಹಾಕಲಾಗುವುದು. ಒಂದು ವೇಳೆ ನೀವು ಇದೇ ವರ್ಷ 2023 ರಲ್ಲಿ ನಿಮ್ಮ ಹೆಸರು ನೋಂದಣಿ ಮಾಡಿಸಿದ್ದರೆ ನೀವು ಮೊದಲನೇ ಕಂತು ಪಡೆಯಲಿದ್ದೀರಿ.ಆದರೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಗೆ 13ನೇ ಕಂತು ಆಗಿರುತ್ತದೆ.

ಪಿಎಂ ಕಿಸಾನ್ ಹಣ ಜಮೆಯಾಗದವರು ಯಾರಿಗೆ ಕರೆ ಮಾಡಬೇಕು? (pm kisan free toll free number)

ಪಿಎಂ ಕಿಸಾನ್ ಹಣ ಜಮೆಯಾಗದ ರೈತರು ಪಿಎಂ ಕಿಸಾನ್ ಯೋಜನೆಯ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಪಿಎಂ ಕಿಸಾನ್ ಸಹಾಯವಾಣಿ 155261  ಅಥವಾ 011-24300606 ಗೆ ಕರೆ ಮಾಡಿ ವಿಚಾರಿಸಬಹುದು.

ಇದನ್ನೂ ಓದಿ ಜಮೀನಿನ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲಿನಲ್ಲಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ

ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಈ ಸಲ ಕರ್ನಾಟಕದಿಂದಲೇ ಬಿಡುಗಡೆಯಾಗಿರುವುದು ಕರ್ನಾಟಕದ ರೈತರಿಗೆ ಸಂತಸದ ಸಂಗತಿಯಾಗಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನದಂದು 13ನೇ ಕಂತಿನ ಹಣ ಬಿಡುಗಡೆಯಾಯಿತು.

ಪಿಎಂ ಕಿಸಾನ್ ಯೋಜನೆಯ13ನೇ ಕಂತಿನ ಹಣ ಜಮೆ (pm kisan 13th installment released)

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷ ಮೂರು ಬಾರಿ 4 ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡಲಾಗುವುದು.ಈ ವರೆಗೆ 11 ಕೋಟಿ ರೂಪಾಯಿ ಹಣವನ್ನುರೈತರಿಗೆ 12 ಕಂತುಗಳಲ್ಲಿ 2.25 ಲಕ್ಷ ಕೋಟಿ ರೂಪಾಯಿ ಹಣವನ್ನು ವರ್ಗಾಯಿಸಲಾಗಿದೆ.

13ನೇ ಕಂತಿನ ಅವಧಿಯಲ್ಲಿ 8 ಕೋಟಿ ಫಲಾನುಭವಿಗಳಿಗೆ 16000 ಕೋಟಿಗೂ ಹೆಚ್ಚಿನ ಹಣವನ್ನು ರೈತರ ಖಾತೆಗೆ ಬೆಳಗಾವಿ ಜಿಲ್ಲೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ವರ್ಗಾಯಿಸಿದ್ದಾರೆ. ದೇಶದ ಎಲ್ಲಾ ರೈತರ ಖಾತೆಗೆ ಏಕಕಾಲದಲ್ಲಿ ಪಿಎಂ ಕಿಸಾನ್ ಹಣ ಜಮೆಯಾಗಿದೆ.

Leave a Comment