ಜಮೀನಿನ ಮೇಲೆ ಯಾವ ಬ್ಯಾಂಕಿನಿಂದ ಎಷ್ಟು ಸಾಲವಿದೆ? ಚೆಕ್ ಮಾಡಿ

Written by Ramlinganna

Updated on:

how much crop loan you have taken ರೈತರು ತಮ್ಮ ಜಮೀನಿನ ಸರ್ವೆ ನಂಬರಿನ ಮೇಲೆ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆದಿದ್ದಾರೆಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲಿ ತಮ್ಮ ಸರ್ವೆ ನಂಬರಿನಲ್ಲಿ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಯಾರ ಸಹಾಯವೂ ಇಲ್ಲದೆ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ರೈತರು ಬ್ಯಾಂಕಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಏಕೆಂದರೆ ರೈತರು ಬ್ಯಾಂಕಿನಲ್ಲಿ ಜಮೀನಿನ ಪಹಣಿ ನೀಡಿ ಸಾಲ ಪಡೆದಿರುತ್ತಾರೆ. ಕೆಲವು ಸಲ ಸಾಲಮನ್ನಾ ಆಗಿರಬಹುದೆಂದುಕೊಂಡಿರುತ್ತಾರೆ. ಆದರೆ ಅವರ ಹೆಸರಿನಲ್ಲಿ ಸಾಲ ಹಾಗೆಯೇ ಉಳಿದಿರುತ್ತದೆ.  ಸಾಲ ಮರುಪಾವತಿಸಿದ್ದರೂ ತಾಂತ್ರಿಕ ದೋಶದಿಂದಾಗಿ ಸಾಲ ಹಾಗೆಯೇ ಉಳಿದಿರುತ್ತದೆ. ಇದನ್ನು ರೈತರು ಚೆಕ್ ಮಾಡಬಹುದು.

how much crop loan you have taken ಮೊಬೈಲ್ ನಲ್ಲೇ ಸರ್ವೆ ನಂಬರಿನ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಚೆಕ್ ಮಾಡಿ

ರೈತರು ತಮ್ಮಲ್ಲಿರುವ ಸ್ಮಾರ್ಟ್ ಫೋನ್ ನಲ್ಲಿ ತಮ್ಮ ಸರ್ವೆ ನಂಬರಿನಲ್ಲಿ ಯಾವುದಾದರೂ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಅದನ್ನು ಚೆಕ್ ಮಾಡಲು ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಮುಟೇಶನ್ ಎಕ್ಸಟ್ರ್ಯಾಕ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ಜಮೀನು ಯಾವ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ನಮೂದಿಸಬೇಕು.  ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ನಮೂದಿಸಿದ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ನೊಂದಿಗೆ ಇಲ್ಲಿಯವರೆಗೆ ನಡೆದ ಜಮೀನು ವರ್ಗಾವಣೆಯಾಗಿರುವ ಮಾಹಿತಿ ಕಾಣುತ್ತದೆ. ಹಿಸ್ಸಾ ನಂಬರಿನಲ್ಲಿ ಜಮೀನು ಪೋಡಿಯಾಗಿದೆಯೇ, ಖಾತೆ ಬದಲಾವಣೆಯಾಗಿದೆಯೋ ಹಾಗೂ ಹಕ್ಕು ಮತ್ತು ಋಣ ಎಂಬ ಮಾಹಿತಿಗಳು ಕಾಣುತ್ತದೆ.ರೈತರು ಹಕ್ಕು ಮತ್ತು ಋಣ ಇರುವ ಕಾಲಂ ಹಿಂದುಗಡೆ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ Preview ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇದನ್ನು ಓದಿ ನಿಮಗೆ ಎಷ್ಟು ಎಕರೆಗೆ ಯಾವ ಬೆಳೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ಹಾಗೂ ಅಕ್ಕಪಕ್ಕದ ಸರ್ವೆ ನಂಬರಿನ ಮಾಲಿಕರು ಯಾವ ಬ್ಯಾಂಕಿನಿಂದ  ಸಾಲ ಪಡೆದಿದ್ದಾರೆ? ಹಾಗೂ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇರುತ್ತದೆ. ಇಲ್ಲಿ ರೈತರ ಹೆಸರು, ತಂದೆಯ ಹೆಸರು ಕಾಣುತ್ತದೆ. ಈ ಮಾಹಿತಿ ಆಧಾರದ ಮೇಲೆ ರೈತರು ಯಾವ ಸರ್ವೆ ನಂಬರ್  ಹಿಸ್ಸಾ ನಂಬರ್ ನಲ್ಲಿ ಸಾಲ ಪಡೆದಿದ್ದಾರೆಂಬುದನ್ನು ಚೆಕ್ ಮಾಡಿಕೊಳ್ಳಬಹುದು. ವಾಣಿಜ್ಯ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಬ್ಯಾಂಕ್ ಹೆಸರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯಾವ ಶಾಖೆಯಲ್ಲಿ ಸಾಲ ಪಡೆದಿದ್ದೀರಿ ಹಾಗೂ ನೀವು ಸಾಲ ಪಡೆದು ಮರುಪಾವತಿಸಿದ್ದರೆ ನಿಮ್ಮ ಹೆಸರಿನ ಮುಂದೆ ಸಾಲದ ಯಾವುದೇ ಮಾಹಿತಿ ಇರುವುದಿಲ್ಲ.

ಒಂದು ವೇಳೆ ನೀವು ಸಾಲ ಮರುಪಾವತಿಸಿದರೂ ಸಾಲದ ಮಾಹಿತಿ ತೋರಿಸುತ್ತಿದ್ದರೆ, ನಿಮ್ಮ ಹೆಸರಿಗೆ  ಇರುವ ಪಹಣಿಯನ್ನು ನಾಡಕಚೇರಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಪ್ರಿಂಟ್ ತೆಗೆದುಕೊಂಡು ನೋಡಬೇಕು. ಒಂದು ವೇಳೆ ನಿಮ್ಮ ಹೆಸರಿಗೆ ಅಲ್ಲಿಯೂ ಸಾಲ ತೀರಿಸಿದ ನಂತರ ಸಾಲ ಮತ್ತೆ ತೋರಿಸುತ್ತಿದ್ದರೆ ನೀವು ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದೀರಿ ಆ ಬ್ಯಾಂಕಿನ ಮ್ಯಾನೇಜರ್ ಗೆ ಭೇಟಿ ನೀಡಿ ಪಹಣಿಯಲ್ಲಿ ಸಾಲ ತೋರಿಸುತ್ತಿರುವ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

Leave a Comment