ಎಂಎಲ್ಎ ಎಲೆಕ್ಷನ್ ಲೀಡಿಂಗ್ ಮಾಹಿತಿ ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Karnataka election result in mobile ಕರ್ನಾಟಕ ಎಂಎಲ್ಎ ಚುನಾವಣೆಯ ನಿಮ್ಮತಾಲೂಕಿನ ಅಭ್ಯರ್ಥಿಯ ಕ್ಷಣ ಕ್ಷಣದ ಲೀಡಿಂಗ್ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಈಗ ತಂತ್ರಜ್ಞಾನ ಎಷ್ಟು ಬೆಳೆದಿದೆಯೆಂದರೆ, ಕ್ಷಣಮಾತ್ರದಲ್ಲಿ ಮೊಬೈಲ್ ನಲ್ಲೇ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ನೀವು ಈಗ ಚುನಾವಣೆಯ ರಿಸಲ್ಟ್ ಮಾಹಿತಿ ಪಡೆಯಲು ಟಿವಿ ಮುಂದುಗಡೆ ಕುಳಿತುಕೊಳ್ಳುವ ಅಗತ್ಯವೂ ಇಲ್ಲ. ಯಾವ ಪಕ್ಷ ಎಷ್ಟು ಲೀಡ್ ಹೊಂದಿದೆ. ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾ್ಡಬಹುದು.

 Karnataka election result in mobile ಮೊಬೈಲ್ ನಲ್ಲೇ ರಿಸಲ್ಟ್ ಚೆಕ್ ಮಾಡುವುದು ಹೇಗೆ?

ಕರ್ನಾಟಕದ ಎಂಎಲ್ಎ ಎಲೆಕ್ಷನ್ ಕ್ಷಣ ಕ್ಷಣದ ಮಾಹಿತಿ ಅಂದರೆ ಯಾವ ಪಕ್ಷ ಎ ಷ್ಟು ಮತಗಳ ಅಂತರದಲ್ಲಿದೆ ಎಂಬುದನ್ನು ಚೆಕ್ ಮಾಡಲು ಈ

https://results.eci.gov.in/ResultAcGenMay2023/ConstituencywiseS1040.htm?ac=40

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಎಲೆಕ್ಷನ್ ಕಮಿಶನ್ ಆಫ್ ಇಂಡಿಯಾ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಪಾರ್ಟಿ ವೈಸ್, ಕಾನ್ಸಿಟಿಟ್ಯೂನ್ಸಿ ಪೈಸ್ ಹಾಗೂ ಕಾನ್ಸಿಟುನ್ಸಿ ವೈಸ್ ಟ್ರೆಂಡ್ ಎಂಬ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು  constituencywise All candidates ಮೇಲೆ ಕ್ಲಿಕ್ ಮಾಡಬೇಕು.  ನಂತರ Select Constituency  ನಲ್ಲಿ ನಿಮ್ಮ ಕ್ಷೇತ್ರ ಅಂದರೆ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ತಾಲೂಕಿನ ಅಭ್ಯರ್ಥಿಗಳ ಹೆಸರು ಕಾಣಿಸುತ್ತದೆ. ಅದರ ಮುಂದುಗಡೆ ಯಾವ ಅಭ್ಯರ್ಥಿ ಎಷ್ಟು ಅಭ್ಯರ್ಥಿಗಳು ನಿಂತಿದ್ದಾರೆ. ಅವರಿಗೆ ಎ ಷ್ಟು ಮತಗಳು ಬಂದಿವೆ ಎಂಬ ಮಾಹಿತಿ ಕಾಣಿಸುತ್ತದೆ. ನೀವು  constituencywise All candidates ಮೇಲೆ ಕ್ಲಿಕ್ ಮಾಡಿದರೆ ಸಾಕು, ಅಪಡೇಟ್ ಆಗುತ್ತದೆ.

ಅಲ್ಲಿ ಪಕ್ಷದ ಅಭ್ಯರ್ಥಿಯ ಹೆಸರು, ಪಕ್ಷದ ಹೆಸರು ಹಾಗೂ ಅವರು ಪಡೆದು ಮತಗಳ ಮಾಹಿತಿ ಕಾಣಿಸುತ್ತದೆ. ಒಟ್ಟು ಮತಗಳು ಸಹ ಇಲ್ಲಿ ಕಾಣಿಸುತ್ತವೆ. ಕೇವಲ ಬಿಜೆಪಿ ಕಾಂಗ್ರೆಸ್ ಅಷ್ಟೇ ಅಲ್ಲ ಜೆಡಿಎಸ್, ಆಮ್ಮ ಆದ್ಮಿ ಪಕ್ಷದೊಂದಿಗೆ ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತಗಳು ಮಾಹಿತಿ ಸಹ ಇಲ್ಲಿ ಸಿಗುತ್ತದೆ.

ಸದ್ಯ ಅಂದರೆ ಬೆಳಗ್ಗೆ 9.50 ರವರೆಗೆ ಬಂದಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಪಕ್ಷ 106 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಗಿದೆ. ಅದೇ ರೀತಿ ಬಿಜೆಪಿ ಪಕ್ಷವು 80 ಕ್ಷೇತ್ರಗಳಲ್ಲಿ ಲೀಡ್ ಹೊಂದಿದೆ. ಜೆಡಿಎಸ್ ಪಕ್ಷವು 33 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಗಿದೆ. ಅದೇ ರೀತಿ ಸ್ವತಂತ್ರ ಪಕ್ಷಗಳು 4 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಗಿದೆ.

ಇದನ್ನೂ ಓದಿ ಪಿಎಂ ಕಿಸಾನ್ ಹಣ ಯಾರ ರೈತರಿಗೆ ಜಮೆ ಯಾವ ರೈತರಿಗೆ ಜಮೆಯಾಗಲ್ಲ ಮೊಬೈಲ್ ನಲ್ಲೇ ಚೆಕ್ ಮಾಡಿ

ಕರ್ನಾಟಕದ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಮಹತ್ವದಾಗಿದೆ. ಇದರೊಂದಿಗೆ ಪ್ರತಿಸ್ಟೆಯಾಗಿದೆ. ಏಕೆಂದರೆ ಸೌತ್ ಇಂಡಿಯಾದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬಾವುಟ ಹಾರಿಸಲು ಹಾತೊರೆಯುತ್ತಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷವು ಸಹ ಜಯಬೇರಿ ಬಾರಿಸಿ ಇತಿಹಾಸ ಸೃಷ್ಟಿಸಲು ಕಾದಿದೆ. ಏನೇ ಆಗಲಿ ಈ ಸಲ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೋ ಅಥವಾ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುತ್ತದೆಯೋ ಎಂಬುದು ಇನ್ನೂ ಗೊತ್ತಾಗುತ್ತಿಲ್ಲ. ಇಲ್ಲಿಯವರೆಗೆ  ಬಂದ ಮಾಹಿತಿ ಪ್ರಕಾರ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ಕಾಂದ್ರೆ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆಗುತ್ತಾರೋ ಅಥವಾ ಡಿ.ಕೆ. ಶಿವಕುಮಾರ ಸಿಎಂ ಆಗುತ್ತಾರೋ ಎಂಬ ಚರ್ಚೆಗಳು ಜೋರಾಗಿಯೇ ಸಾಗುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ ರಿಸಲ್ಟ್ ಗೊತ್ತಾಗುತ್ತದೆ.

Leave a Comment