ರೈತರು ಯಾವ ಯಾವ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಆದರೆ ರೈತರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಹಲವಾರು ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ರೈತರು ವಿಫಲರಾಗುತ್ತದೆ. ಆದರೆ ಈಗ ರೈತರು ಚಿಂತೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಯಾವ ಯಾವ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸುವಿಧಾ ಪೋರ್ಟಲ್ ನಲ್ಲಿ ಮೊಬೈಲ್ ಮೂಲಕ ಚೆಕ್ ಮಾಡುವುದು ಹೇಗೆ?

ರೈತರಿಗೆ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆಂಬುದನ್ನು ಚೆಕ್ ಮಾಡಲು ಈ

https://suvidha.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸುವಿಧಾ ತಂತ್ರಾಂಶದ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರದ ಹಲವು ಯೋಜನೆಗಳಿಗ ಏಕ ವೇದಿಕೆ ಕೆಳಗಡೆ ಮೂರು ಆಯ್ಕೆಗಳು ಕಾಣಿಸುತ್ತವೆ.

  1. ಲಭ್ಯವಿರುವ ಸರ್ಕಾರಿ ಯೋಜನೆಗಳನ್ನು ಅರಿಯಲು ಇಲ್ಲಿ ಕ್ಲಿಕ್ ಮಾಡಿ (ಅರ್ಹತೆ ಅನ್ವೇಷಣೆ)
  2. ವಿವಿಧ ಯೋಜನೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
  3. ಸರ್ಕಾರಿ ಅಧಿಕಾರಿಗಳು ಲಾಗಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಇದರಲ್ಲಿ ನೀವು ಲಭ್ಯವಿರುವ ಸರ್ಕಾರಿ ಯೋಜನಗಳನ್ನು ಅರಿಯಲು ಇಲ್ಲಿ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಆಗ  ನೀವು ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತರ ನೀವು ಯಾವ ಯಾವ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ಯೋಜನೆಯಿಂದ ನಿಮಗೆಷ್ಟು ಸಾಲ ಸಬ್ಸಿಡಿ ಸಿಗುತ್ತದೆ ಎಂಬ ಮಾಹಿತಿ ಇರುತ್ತದೆ.

.ಅಲ್ಲಿ ಪುರುಷ ಲಿಂಗ ಆಯ್ಕೆ ಮಾಡಿಕೊಳ್ಳಬೇಕು. ನಂತರ ವಯಸ್ಸು ಆಯ್ಕೆ ಮಾಡಿಕೊಳ್ಳಬೇಕು. ಧರ್ಮ ಆಯ್ಕೆ ಮಾಡಿಕೊಂಡು ಜಾತಿ ಆಯ್ಕೆ ಮಾಡಿಕೊಳ್ಳಬೇಕು. ನೀವು ವಿಕಲಚೇತನರಾಗಿದ್ದರೆ ಹೌದು ಇಲ್ಲವೆಂದರೆ ಇಲ್ಲವೆಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಅರ್ಹತೆ ಆಯ್ಕೆ ಮಾಡಿಕೊಳ್ಳಬೇಕು. ಬಿಪಿಎಲ್ ಅಥವಾ ಎಪಿಲ್ ಆಯ್ಕೆ ಮಾಡಿಕೊಳ್ಳಬೇಕು.  ನೀವು ಗ್ರಾಮೀಣ ಅಭ್ಯರ್ಥಿಯಾಗಿದ್ದರೆ ಗ್ರಾಮೀಣ ನಗರವಾಸಿಯಾಗಿದ್ದರೆ ನಗರ ಆಯ್ಕೆ ಮಾಡಿಕೊಳ್ಳಬೇಕು. ಮಾಡಿಕೊಳ್ಳಬೇಕು.ಆಗ ಸರ್ಕಾರದ  ವಿವಿಧ ವರ್ಗಗಳ ಅಡಿಯಲ್ಲಿ ನಿಮಗೆ ಸಿಗುವಸೌಲಭ್ಯಗಳ ಮಾಹಿತಿ ಕಾಣುತ್ತದೆ. ಉದ್ಯೋಗ, ಕೃಷಿ,  ಸಾಮಾಜಿಕ ಸೇವೆಗಳು, ಆರೋಗ್ಯ ಮತ್ತು ವೈದ್ಯಕೀಯ, ವಸತಿ, ಶಿಕ್ಷಣ,ಪಿಂಚಣಿ, ಮೀನುಗಾರಿಕೆ, ಪ್ರಯಾಣ ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ನಿಮಗೆ ಯಾವ ಯಾವ ಸೌಲಭ್ಯಗಳು ಸಿಗುತ್ತವೆ ಎಂಬ ಪಟ್ಟಿ ಕಾಣುತ್ತದೆ.

ಇದನ್ನೂ ಓದಿ : ಈ ಪಟ್ಟಿಯಲ್ಲಿರುವ ರೈತರಿಗಷ್ಟೇ ಪಿಎಂ ಕಿಸಾನ್ ಹಣ ಜಮೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ನೀವು ಕೃಷಿಕರಾಗಿದ್ದರೆ ಕೃಷಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಕೃಷಿಕರಾಗಿದ್ದರಿಂದ ಹೌದು ಆಯ್ಕೆಮಾಡಿಕೊಳ್ಳಬೇಕು. ನಂತರ ವ್ಯವಸಾಯ, ರೇಷ್ಮೆ ವ್ಯವಸಾಯ, ಡೈರಿ, ಕೋಳಿ ಸಾಕಾಣಿಕೆ ಹಾಗೂ ಇತರೆ ಇದರಲ್ಲಿ ನೀವು ಯಾವ ರೈತರು ಎಂಬುದನ್ನು ಆಯ್ಕೆಮಾಡಿಕೊಳ್ಳಬೇಕು. ಉದಾಹರಣೆಗೆ ನೀವು ವ್ಯವಸಾಯ ಆಯ್ಕೆ ಮಾಡಿಕೊಂಡರೆ ನಂತರ ಸ್ವಂತ ಭೂಮಿ ಇದ್ದರೆ ಸ್ವಂತ ಭೂಮಿ ಆಯ್ಕೆ ಮಾಡಿಕೊಳ್ಳಬೇಕು. ಎಷ್ಟು ಎಕರೆ ಜಮೀನಿದೆ ಎಂಬುದನ್ನುಆಯ್ಕೆ ಮಾಡಿಕೊಳ್ಳಬೇಕು. ನೀರಾವರಿ ಮೇಲೆ ಕ್ಲಿಕ್ ಮಾಡಿದರೆ  ಯಾವ ಯಾವ ಯೋಜನೆಗಳಿಂದ ಎಷ್ಟು ಸಹಾಯಧನ ಸಿಗುತ್ತದೆ ಎಂಬ ಪಟ್ಟಿಯೇ ಕಾಣುತ್ತದೆ. ಅರ್ಜಿ ಸಲ್ಲಿಸುವಾಗ ಫೋಟೋ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಅಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಆನ್ಲೈನ್ ನಲ್ಲಿ ಅರ್ಜಿ ಹಾಕಬಹುದು..

Leave a Reply

Your email address will not be published. Required fields are marked *