ಈ ಪಟ್ಟಿಯಲ್ಲಿದ್ದವರಿಗೆ ಅನ್ನಭಾಗ್ಯ ಗೃಹಲಕ್ಷ್ಮೀ ಹಣ ಜಮೆ

Written by Ramlinganna

Updated on:

gruahalakshmi annabhagya beneficiary list : ಸರ್ಕಾರದ ಜಾರಿಗೆ ತಂದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗಳು ಪ್ರಮುಖವಾಗಿವೆ. ಆದರೆ ಈ ಕೆಳಗಿನ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಹಣ ಸಿಗುವುದು. ಹಾಗಾದರೆ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡುವುದು ಹೇಗೆ? ಇಲ್ಲಿದೆ  ನೋಡಿ ಸಂಪೂರ್ಣ ಮಾಹಿತಿ.

ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಹೌದು, ಶಕ್ತಿ, ಗೃಹಜ್ಯೋತಿ,  ಗೃಹಲಕ್ಷ್ಮೀ, ಅನ್ನಭಾಗ್ಯ ಹಾಗೂ ಯುವ ನಿಧಿ ಎಂಬ ಐದು ಯೋಜನೆಗಳನ್ನು ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಬಂದ ನಂತರ ಯುವನಿಧಿ ಯೋಜನೆಯೊಂದನ್ನು ಬಿಟ್ಟರೆ ಉಳಿದ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದೆ.  ಸರ್ಕಾರದ ಷರತ್ತುಗಳ ಪ್ರಕಾರ ಶಕ್ತಿ, ಹಾಗೂ ಗೃಹಜ್ಯೋತಿ ಯೋಜನೆಗಳ ಸೌಲಭ್ಯವು ಫಲಾನಭವಿಗಳಿಗೆ ಸಿಗುತ್ತಿದೆ. ಆದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀಯೋಜನೆಯಿಂದ ಕೆಲವು ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಕೆಲವರು ಅರ್ಜಿ ಸಲ್ಲಿಸಿದರೂ ಅವರಿಗೂ ಹಣ ಜಮೆಯಾಗಿಲ್ಲ. ಇನ್ನೂ ಕೆಲವರು ಹೊಸದಾಗಿ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆಯಾಗುತ್ತಿದೆ.

gruahalakshmi annabhagya beneficiary list ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಪಟ್ಟಿ ಚೆಕ್ ಮಾಡುವುದು ಹೇಗೆ?

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಇ ರೇಶನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ ಶೋ ವಿಲೇಜ್ ಲಿಸ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್, ಗ್ರಾಮ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು.  ಆಗ ರೇಶನ್ ಕಾರ್ಡ್ ಹೊಂದಿರುವವ ಪಟ್ಟಿಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರು ಇರಬೇಕು.ಹಾಗೂ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಬಿಪಿಎಲ್ ಕಾರ್ಡ್ ಇದ್ದರೆ ಮಾತ್ರ ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗುವುದು. ಇಲ್ಲದಿದ್ದರೆ ಜಮೆಯಾಗುವುದಿಲ್ಲ.

ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಿದೆಯೋ ಇಲ್ಲವೋ? ಚೆಕ್ ಮಾಡುವುದು ಹೇಗೆ?

ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಿರುವುದನ್ನು ಚೆಕ್ ಮಾಡಲು ಈ

https://ahara.kar.nic.in/lpg/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ ಯಾವುದೋ ಆ ಜಿಲ್ಲೆಯ ಮೇಲ್ಗಡೆಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಆರ್.ಸಿ. ನಂಬರ್ (ರೇಶನ್ ಕಾರ್ಡ್ ನಂಬರ್) ನಮೂದಿಸಬೇಕು. ತಿಂಗಳು ಆಯ್ಕೆ ಮಾಡಿಕೊಂಡು ನಿಮಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ನೀವು ಎಲ್ಲಾ ಅರ್ಹತೆ ಹೊಂದಿದ್ದರೂ ನಿಮಗೇಕೆ ಹಣ ಜಮೆಯಾಗುತ್ತಿಲ್ಲ?

ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳು ಎಲ್ಲಾ ಅರ್ಹತೆ ಹೊಂದಿದ್ದರೂ ಸಹ ಕೆಲವರಿಗೆ ಹಣ ಜಮಯಾಗುತ್ತಿಲ್ಲ. ಏಕೆಂದರೆ  ರೇಶನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ಒಂದೇ ರೀತಿಯಾಗಿರುವುದಿಲ್ಲ.

ಇದನ್ನೂ ಓದಿ ಎಫ್ಐಡಿ ಆಗಿರುವ ಈ ರೈತರಿಗೆ ಮಾತ್ರ ಬರ ಪರಿಹಾರ ಜಮೆ- ನಿಮ್ಮ ಎಫ್ಐಡಿ ಆಗಿದೆಯೇ? ಇಲ್ಲೇ ಚೆಕ್ ಮಾಡಿ

ಹೆಸರು ತಂದೆಯ ಹೆಸರು ಅಥವಾ ಪತಿಯ ಹೆಸರು ವ್ಯತ್ಯಾಸವಾಗಿದ್ದರೂ ಸಹ ಹಣ ಜಮಯಾಗುವುದಿಲ್ಲ.

ಗೃಹಲಕ್ಷ್ಮೀ ಯೋಜನೆಯ ಹಣ ಯಾರಿಗೆ ಜಮೆಯಾಗುತ್ತದೆ?

ಗೃಹಲಕ್ಷ್ಮೀ ಯೋಜನೆಯ ಹಣ ಅರ್ಜಿ ಸಲ್ಲಿಸಿದ ಮಹಿಳೆಯು ಕುಟುಂಬದ ಮುಖ್ಯಸ್ಥರಾಗಿರಬೇಕು. ಅಂದರೆ ರೇಶನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರು ಮೊದಲು ಇರಬೇಕು. ಮಹಿಳೆಯ ಹೆಸರು ಕುಟುಂಬದ ಮುಖ್ಯಸ್ಥರೆಂದು ನಮೂದಿಸಿದ್ದರೆ ಮಾತ್ರ ಅವರಿಗೆ ಹಣ ಜಮೆಯಾಗುವುದು. ಇದರೊಂದಿಗೆ ಗೃಹಲಕ್ಷ್ಮೀ ಯೋಜನೆಗೆ ಎಲ್ಲಾ ಅರ್ಹತೆ ಪಡೆದಿರಬೇಕು.  ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆ ಅಥವಾ ಅವರ ಪತಿ ತೆರಿಗೆ ಪಾವತಿಸುವವರು, ಟಿಡಿಎಸ್ ಕಟ್ಟುತ್ತಿರುವವರಾಗಿದ್ದರೆ  ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುವುದಿಲ್ಲ.

Leave a Comment