ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ಫ್ರೂಟ್ಸ್ ಐಡಿ ಚೆಕ್ ಮಾಡಿ

Written by Ramlinganna

Published on:

Check farmers FID here ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೌದು, ಈಗ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ. ಬೆಳೆ ವಿಮೆಯಾಗಲಿ, ಬೆಳೆ ಹಾನಿ ಪರಿಹಾರವಾಗಲಿ, ಬರಗಾಲ ಪರಿಹಾರವಾಗಲಿ ಇದರೊಂದಿಗೆ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆಇಲಾಖೆ, ಹಾಗೂ ಕೃಷಿ ಇಲಾಖೆಯಿದ ವಿವಿಧ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ. ಬಿತ್ತನೆಯಿಂದ ಹಿಡಿದು ಕೊಯ್ಲುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳ ಖರೀದಿಗೂ ಫ್ರೂಟ್ಸ್ ಐಡಿಯನ್ನುಕಡ್ಡಾಯ ಮಾಡಲಾಗಿದೆ.

ಕೃಷಿ ಇಲಾಖೆಯಿಂದ ಈಗಾಗಲೆ ಕೆಲವು ರೈತರ ದಾಖಲೆಗಳಿಂದ ಫ್ರೂಟ್ಸ್ ಐಡಿಯನ್ನು ಮಾಡಲಾಗಿದೆ. ಆದರೆ ಇನ್ನೂ ಬಹಳಷ್ಟು ರೈತರ ಫ್ರೂಟ್ಸ್ ಐಡಿ ಆಗಿಲ್ಲ. ಯಾವ ಯಾವ ರೈತರ ಫ್ರೂಟ್ಸ್ ಐಡಿ ಆಗಿದೆ? ಯಾವ ಯಾವ ರೈತರ ಫ್ರೂಟ್ಸ್ ಐಡಿ ಆಗಿಲ್ಲ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿರೈತರು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

Check farmers FID here ಫ್ರೂಟ್ಸ್ ಐಡಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಆಧಾರ್ ನಂಬರ್ ನಮೂದಿಸಿ ಫ್ರೂಟ್ಸ್ ಐಡಿಯನ್ನು ಚೆಕ್ ಮಾಡಬಹುದು. ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಐಡಿ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹನ್ನೆರಡು ಅಂಕಿಗಳ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.

ಜಮೀನುಗಳ ವಿವರ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಗೆ ಸೂಚನೆ

ರೈತರ ಜಮೀನಿನ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಅಳವಡಿಸಿ ರೈತರ ನೋಂದಣಿ ಸಂಖ್ಯೆ (ಎಫ್ಐಡಿ) ಮಾಡಿಸಲು ಅಗತ್ಯ ಕ್ರಮವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ ಈ ಪಟ್ಟಿಯಲ್ಲಿದ್ದವರಿಗೆ ಮಾತ್ರ ಬರಗಾಲ ಹಣ ಜಮೆ- ಹೆಸರು ಇಲ್ಲೇ ಚೆಕ್ ಮಾಡಿ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೋಂದಣಿ ಮಾಡಿಕೊಳ್ಳದಿದ್ದರೆ ಬರ ಪರಿಹಾರ ಅಥವಾ ಸರ್ಕಾರದಿಂದ ಸಿಗುವ ಯಾವುದೇ ಸಹಾಯಧನದ ಸೌಲಭ್ಯ ಸಿಗುವುದಿಲ್ಲ. ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸುವಂತೆ ತಿಳಿಸಿದರು.

ಗ್ರಾಮೀಣ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಎಷ್ಟು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ.ನೋಂದಾಯಿಸದ ರೈತರನ್ನು ಗುರುತಿಸಿ ನೋಂದಣಿಗೆ ಕ್ರಮವಹಿಸಿ ಇದನ್ನು ವಿಶೇಷ ಆಂದೋಲನ ರೀತಿ ಮಾಡುವಂತೆ ಹೇಳಿದರು.

ಫ್ರೂಟ್ಸ್ ಐಡಿ ಮಾಡಿಸಲು ಯಾವ ಯಾವ ದಾಖಲೆ ಬೇಕು?

ರೈತರು ಫ್ರೂಟ್ಸ್ ಐಡಿ ಮಾಡಿಸಲು ಆಧಾರ್ ಕಾರ್ಡ್ ಬೇಕು. ಜಮೀನಿಗೆ ಸಂಬಂಧಿಸಿದ ಪಹಣಿ (ಆರ್.ಟಿ.ಸಿ) ಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಫೋಟೋ ಬೇಕಾಗುತ್ತದೆ. ಈ ದಾಖಲೆಗಳೊಂದಿಗೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಫ್ರೂಟ್ಸ್ ಐಡಿಗಾಗಿ ಅರ್ಜಿ ಸಲ್ಲಿಸಬಹುದು.

Leave a Comment