ಯಾವ ಬೆಳೆಗೆ ಎಷ್ಟು ಬೆಳೆ ಹಾನಿ ಪರಿಹಾರ ಜಮೆ

Written by Ramlinganna

Updated on:

check crop damage compensation ರೈತರು ಮನೆಯಲ್ಲಿಯೇ ಕುಳಿತು ಈಗ ಬೆಳೆ ಹಾನಿ ಪರಿಹಾರದ ಸ್ಟೇಟಸ್ ಅಂದರೆ ಯಾವ ಬೆಳೆಗೆ ಪರಿಹಾರ ಜಮೆಯಾಗಿದೆ ಎಂಬುದರ ತಮ್ಮಲ್ಲಿರುವ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

ಇದೇನು ಬೆಳೆ ಹಾನಯಾಗಿರುವ ಕುರಿತು ಅದರಲ್ಲಿ ಯಾವ ಬೆಳೆಗೆ ಬೆಳೆ ಹಾನಿ ಪರಿಹಾರ ಆಗಿರುವ ಕುರಿತು ಮೊಬೈಲ್ ನಲ್ಲೇ ಹೇಗಪ್ಪಾ ಚೆಕ್ ಮಾಡುವುದು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿದ್ದರೆ ನಿಮ್ಮ ಪ್ರಶ್ನೆಗೆ ಉತ್ತರ ಹೌದಾಗಿರುತ್ತದೆ. ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲಿ ಬೆಳೆ ಹಾನಿ ಪರಿಹಾರ ಹಣ ಜಮೆಯ ಕುರಿತು ಪರಿಶೀಲಿಸಬಹುದು.

check crop damage compensation ಮೊಬೈಲ್ ನಲ್ಲಿ ಬೆಳೆ ಹಾನಿ ಪರಿಹಾರ ಚೆಕ್ ಮಾಡಿ

ರೈತರು ಯಯಾವ ಬೆಳೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿರುವ ಕುರಿತು ಪರಿಶೀಲಿಸಲು  ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆಗ ನಿಮಗೆ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ರೈತರು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಸೆಲೆಕ್ಟ್ ಕಾಲಾಮಿಟಿ ಟೈಪ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಫ್ಲಡ್ ಆಯ್ಕೆ ಮಾಡಬೇಕು. ಇದಾದಮೇಲೆ  ಸೆಲೆಕ್ಟ್ ಇಯರ್ ಟೈಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ 2022-23 ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಬೇಕಾಗುತ್ತದೆ. ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು  ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರಿಗೆ  ಯಾವ ಬೆಳೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿರುವ ಪೇಜ್ ತೆರೆದುಕೊಳ್ಳುತ್ತದೆ. ರೈತರ ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು ರೈತರಿಗೆ ಎಷ್ಟು ಹಣ ಜಮೆಯಾಗಿದೆ ಎಂಬ ಮೆಸೆಜ್ ಇರುತ್ತದೆ.  ರೈತರ ಜಿಲ್ಲೆ ಕಾಣಿಸುತ್ತದೆ. ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್  ಇರುತ್ತದೆ.  ಅದರ ಎದುರುಗಡೆ ಯಾವ ಬೆಳೆಗೆ ಬೆಳೆಹಾನಿ ಪರಿಹಾರ ಜಿಮೆಯಾಗಿದೆ ಎಷ್ಟು ಎಕರೆಗೆ ಜಮೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ಇರುತ್ತದೆ. ಎಕರೆ ಹಾಗೂ ಗುಂಟೆಯನ್ನು ಸಹ ನಮೂದಿಸಲಾಗಿರುತ್ತದೆ.

ರೈತರಿಗೆ ಈಗಾಗಲೇ ಎಲ್ಲಾ ಜಿಲ್ಲೆಗಳ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಇದರಲ್ಲಿಯೂ ಸಹ ಹಂತ ಹಂತವಾಗಿ ಜಮೆ ಮಾಡಲಾಗುತ್ತಿದೆ. ಮೊದಲ ಕಂತು, ಎರಡನೇ ಕಂತು, ಮೂರನೇ ಕಂತು ಹೀಗೆ ಕಂತುಗಳ ರೂಪದಲ್ಲಿರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಹಾಗಾಗಿ ಇನ್ನೂಜಮೆಯಾಗದ ರೈತರಿಗೆ ಮುಂದಿನ ಕಂತಿನ ಹಣ ಜಮೆಯಾಗುವ ಸಾಧ್ಯತೆಯಿರುತ್ತದೆ.

ಇದನ್ನೂ ಓದಿ : ಖಾತಾ ನಂಬರ್ ಪ್ರಕಾರ ನಿಮ್ಮೆಸರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ ಸರ್ವೆ ನಂಬರ್ ಹಾಕಿ

ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗದಿದ್ದರೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ವಿಚಾರಿಸಬಹುದು. ಏಕೆಂದರೆ ಬೆಳೆ ಹಾನಿ ಪರಿಹಾರಕ್ಕೆ ರೈತರ ಮಾಹಿತಿಗಳನ್ನು ಪರಿಹಾರ ಪೇಮೆಂಟ್ ರಿಪೋರ್ಟ್ ತಂತ್ರಾಶದಲ್ಲಿ ಪಂಚಾಯತಿ ಅಧಿಕಾರಿಗಳು ಅಪ್ಲೋಡ್ ಮಾಡುತ್ತಾರೆ. ರೈತರ ದಾಖಲೆ ಅಪ್ಲೋಡ್ ಮಾಡಿದ ನಂತರ ಅವರ ದಾಖಲೆಗಳನ್ನುಪರಿಶೀಲಿಸಿ ನೇರವಾಗಿ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುವುದು. ಹಾಗಾಗಿ ರೈತರು ಕೂಡಲೇ ಎಫ್ಐಡಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಹಣ ಜಮೆಯಾಗಲ್ಲ.

Leave a Comment