ಮೊಬೈಲ್ ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಿರಿ? ಇಲ್ಲಿದೆ ಮಾಹಿತಿ

Written by Ramlinganna

Published on:

Caste income certificate check : ಸಾರ್ವಜನಿಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಈಗ ಸಾರ್ವಜನಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಆನ್ಲೈನ್ ನಲ್ಲೇ ಪಡೆಯಬಹುದು. ಕಚೇರಿಗೆಳ ಎದುರುಗಡೆ ಹೋಗಿ ಉದ್ದ ಸರತಿಯಲ್ಲಿ ನಿಲ್ಲಬೇಕಿಲ್ಲ. ಒಂದೆರಡು ದಿನ ಕಾಯಬೇಕಿಲ್ಲ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ರೇಶನ್ ಕಾರ್ಡ್ ನಂಬರ್ ಸಹಾಯದಿಂದ ಈ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಸಮಯದ ಉಳಿತಾಯವಾಗಲಿದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಈ ಪ್ರಮಾಣ ಪತ್ರ ಪಡೆಯಲು ಕೇವಲ 25 ರೂಪಾಯಿ ಮಾತ್ರ ಪಾವತಿಸಬೇಕಾಗುತ್ತದೆ.

Caste income certificate check ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮೊಬೈಲ್ ನಲ್ಲಿ ಪಡೆಯಲು ಈ

https://nadakacheri.karnataka.gov.in/ajsk

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಾಡಕಚೇರಿಯ ಪೇಜ್ ತೆರೆದುಕೊಳ್ಳುತ್ತದೆ. Home  ಪಕ್ಕದಲ್ಲಿರುವ  Online Application ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ  Apply Online ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಲಾಗಿನ್ ಮಾಡಬೇಕು.  ಇದಾದ ನಂತರ New Request ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದದಾ ನಂತರ ನಿಮಗೆ ಯಾವ ದಾಖಲೆ ಬೇಕು ಎಂಬುದರ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ರೇಶನ್ ಕಾರ್ಡ್ ಹಾಕಬೇಕು.  ಅರ್ಜಿದಾರರ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಖಾಯಂ ವಿಳಾಸ, ಕುಟುಂಬದ ವಾರ್ಶಿಕ ಆದಾಯ, ಆದಾಯದ ಮೂಲ, ಕುಟುಂಬದಲ್ಲಿ ಆದಾಯ ಗಳಿಸುತ್ತಿರುವವರ ಸದಸ್ಯರ ವಿವರಗಳು, ನಂತರ ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಂತರ ನೀವು ಮೊಬೈಲ್ ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು Pay service fee ಮೇಲೆ ಕ್ಲಿಕ್ ಮಾಡಿ ಆನ್ಲೈನ್ ನಲ್ಲಿ  ಪಡೆಯಬಹುದು.ನಂತರ ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಬೇಕಾಗುವ ಅರ್ಹತೆಗಳು

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು. ಯಾವುದೇ ವಯಸ್ಸಿನ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ವಿಳಾಸದ ಪುರಾವಯಾಗಿ ಆಧಾರ್ ಕಾರ್ಡ್, ಅಥವಾ ವೋಟರ್ ಐಡಿ ಕಾರ್ಡ್ ಹೊಂದಿರಬೇಕು. ವಯಸ್ಸಿನ ಪುರಾವೆಗಾಗಿ ಜನನ ಪ್ರಮಾಣ ಪತ್ರ ಸಲ್ಲಿಸಬಹುದು. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಯಿತ್ರ ಹೊಂದಿರಬೇಕು.

ಇದನ್ನೂ ಓದಿ ಬೆಳೆ ಸಮೀಕ್ಷೆ ಹೀಗೆ ಮಾಡಿ ಬೆಳೆ ವಿಮೆ ಪರಿಹಾರ ಪಡೆಯಿರಿ ಇಲ್ಲಿದೆ ಮಾಹಿತಿ

ಆದಾಯ ಪ್ರಮಾಣ ಪತ್ರವು ಸಾಮಾನ್ಯವಾಗಿ ನೀಡಿದ ದಿನಾಂಕದಿಂದ ಒಂದು ವರ್ಷದವರೆಗೆ ಇರುತ್ತದೆ. ಒಂದು ವರ್ಷದ ನಂತರ ಆದಾಯವನ್ನು ಮರು ದೃಢೀಕರಿಸಬೇಕಾದರೆ ಹೊಸ ಪ್ರಮಾಣ ಪತ್ರಕ್ಕಾಗಿ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಸಮಸ್ಯೆಯಾದರೆ 080 22214556, 080 22214552 ಅಥವಾ 080 22214551 ಗೆ ಸಂಪರ್ಕಿಸಬಹುದು.

ಪ್ರಮಾಣ ಪತ್ರ ಪಡೆಯಲು ಎಷ್ಟು ದಿನ ಬೇಕು

ಸಂಬಂಧಪಟ್ಟ ಪ್ರಾಧಿಕಾರವು ಅರ್ಜಿಯನ್ನು ಸಲ್ಲಿಸಿದ 7 ದಿನಗಳಲ್ಲಿ ಆದಾಯ ಪ್ರಮಾಣ ಪತ್ರವನ್ನು ನೀಡುತ್ತದೆ. ಅರ್ಜಿದಾರರು ಸಂಬಧಪಟ್ಟ ನಾಡಕಚೇರಿ ಕೇಂದ್ರಕ್ಕೆ ಭೇಟಿ ನೀಡಿ ಅಂತಿಮ ಪ್ರಮಾಣ ಪತ್ರವನ್ನು ಪಡೆಯಬಹುದು.

Leave a Comment