Bele vime ಯಾರಿಗೆ ಎಷ್ಟು ಜಮೆಯಾಗಲಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Calculate your crop insurance ಮುಂಗಾರುಬೆಳೆ ವಿಮೆ  ಪಾವತಿಸಿದ ರೈತರು ತಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದರೊಂದಿಗೆ ಹಿಂಗಾರು ಹಂಗಾಮಿನ ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಸಹ ಚೆಕ್ ಮಾಡಬಹುದು.

ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಯಾವ ಬೆಳೆಗೆ ಒಂದು ಎಕರೆಗೆ ಎಷ್ಟು ಬೆಳೆ ವಿಮೆ ಹಣ ಪಾವತಿಸಬೇಕು? ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಎಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದನ್ನು ರೈತರು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Calculate your crop insurance ಯಾರಿಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗಲಿದೆ? 

ಬೆಳೆ ವಿಮೆ ಹಣ ಯಾರಿಗೆ ಎಷ್ಟು ಹಣ ಜಮೆಯಾಗುತ್ತದೆ? ಎಷ್ಟು ಹಣ ರೈತರು ಪಾವತಿಸಬೇಕು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/Premium/Premium_Chart.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ crop wise Premium Calculator ಪೇಜ್ ತೆರೆದುಕೊಳ್ಳುತ್ತದೆ. ಈ ಮೇಲಿನ ಲಿಂಕ್ ಲಿಂಕ್ ಓಪನ್ ಆಗದಿದ್ದರೆ ಈ  https://samrakshane.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಪ್ರಸಕ್ತ ಸಾಲಿನ ಹಿಂಗಾರು ಬೆಳೆ ವಿಮೆ ಪಾವತಿಸುವವರಾಗಿದ್ದರೆ ಎಷ್ಟು ವಿಮೆ ಹಣ ಕಟ್ಟಬೇಕು ಹಾಗೂ ತಮಗೆ ಷ್ಟು ಹಣ ಜಮೆಯಾಗಬಹುದು ಎಂಬುದನ್ನು ಚೆಕ್ ಮಾಡಬೇಕಾದರೆಮುಂದೆ ಮೇಲೆ ಕ್ಲಿಕ್ ಮಾಡಬೇಕು.

ಒಂದು ವೇಳೆ ನೀವು ಮುಂಗಾರು ಹಂಗಾಮಿನ ಬೆಳೆ ವಿಮೆ ಹಣ ತಮಗೆಷ್ಟು ಹಣ ಜಮೆಯಾಗಬಹುದು ಎಂಬುದನ್ನುಚೆಕ್ ಮಾಡಬೇಕಾದರೆ Kharif ಆಯ್ಕೆ ಮಾಡಿ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ Premium Calculator ಮೇಲೆ ಕ್ಲಿಕ್ ಮಾಡಿದಾಗ Crop wise Premium calculator  ಕಾಣಿಸುತ್ತದೆ.

ಇದನ್ನೂ ಓದಿ ಬರಗಾಲ ಹಣ ಯಾವ ಯಾವ ರೈತರಿಗೆ ಜಮೆಯಾಗುತ್ತದೆ? ಇಲ್ಲೇ ಚೆಕ್ ಮಾಡಿ

ಅಲ್ಲಿ ನಿಮಗೆ 2023-24 ಹಾಗೂ Season ನಲ್ಲಿಮುಂಗಾರು ಆಯ್ಕೆ ಮಾಡಿಕೊಂಡರೆ ಖಾರೀಫ್ ಹಾಗೂ ಹಿಂಗಾರು ಆಯ್ಕೆ ಮಾಡಿಕೊಂಡರೆ Rabi ಕಾಣಿಸುತ್ತದೆ. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ಎಕರೆ ನಮೂದಿಸಬೇಕು. ಗುಂಟಾ ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ಹಿಂಗಾರು ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಬಹುದು.

ಕಡಲೆ ಬೆಳೆ ಎಕರೆಗೆ ರೈತರು ಕೇವಲ 210 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದರೆ 14 ಸಾವಿರ ರೂಪಾಯಿಯವರೆಗೆ ಜಮೆಯಾಗುವ ಸಾಧ್ಯತೆಯಿದೆ.

ಜೋಳ ಬೆಳೆಗೆ ಒಂದು ಎಕರೆಗೆ ರೈತರು 232 ರೂಪಾಯಿ ಪಾವತಿಸಬೇಕು. ಬೆಳೆ ಹಾನಿಯಾದರೆ ನಿಮಗೆ 15 ಸಾವಿರ ರೂಪಾಯಿಯವರೆಗೆ ಜಮೆಯಾಗುವ ಸಾಧ್ಯತೆಯಿದೆ.

ಭತ್ತ ಬೆಳೆಗೆ ಒಂದು ಎಕರೆಗೆ 566 ರೂಪಾಯಿ ಪಾವತಿಸಬೇಕು. ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ನಿಮಗೆ ಎಕರೆಗೆ 37 ಸಾವಿರ ರೂಪಾಯಿಯವರೆಗೆ ಜಮೆಯಾಗುವ ಸಾಧ್ಯತೆಯಿದೆ.

ಕುಸುಮೆ ಬೆಳೆಗೆ ಒಂದು ಎಕರೆಗೆ ರೈತರು ಕೇವಲ 188 ರೂಪಾಯಿ ಪಾವತಿಸಬೇಕು. ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ 12 ಸಾವಿರ ರೂಪಾಯಿಯವರೆಗೆ ನಿಮಗೆ ಹಣ ಜಮೆಯಾಗುವ ಸಾಧ್ಯತೆಯಿದೆ.

ಬೆಳೆ ಹಾನಿಯಾದರೆ ಯಾರಿಗೆ ದೂರು ನೀಡಬೇಕು?

ಪ್ರಾಕೃತಿಕ ವಿಕೋಪದಿಂದಾಗಿ ರೈತರ ಬೆಳೆ ಹಾನಿಯಾದರೆ ಕೂಡಲೇ ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ಅಂದರೆ 72 ಗಂಟೆಯೊಳಗೆ ತಿಳಿಸಬೇಕು. ಆಗ ನಿಮ್ಮ ದೂರು ದಾಖಲು ಮಾಡಿಕೊಳ್ಳುತ್ತಾರೆ. ನಂತರ ಸಂಬಂಧಿಸಿದ ಅಧಿಕಾರಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡಿ ಬೆಳೆ ವಿಮೆ ಪರಿಹಾರಕ್ಕೆ ವರದಿ ಸಲ್ಲಿಸುತ್ತಾರೆ. ಬೆಳೆ ಹಾನಿಯಾದ ರೈತರೂ ತಮ್ಮ ಬೆೆಳೆ ಹಾಳಾಗಿರುವ ಕುರಿತು ಈಗಲೂ ದೂರು ಸಲ್ಲಿಸಬಹುದು.

Leave a Comment