2.23 ಕೋಟಿ ರೂಪಾಯಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆ

Written by Ramlinganna

Published on:

Belevime credit these farmer : ಬೆಳೆ ವಿಮೆ ಪಾವತಿಸಿದ  ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು ಬೆಳೆ ವಿಮೆ ಪಾವತಿಸಿದ ಯಾವ ರೈತರಿಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಬೆಳೆ ವಿಮೆ ಜಮೆಯಾಗಿದೆಯೋ ಇಲ್ಲವೋ ಎಂಬ ಸ್ಟೇಟಸನ್ನು ಹೇಗೆ ಚೆಕ್ ಮಾಡಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ ತಾಲೂಕಿಗೆ 2 ಕೋಟಿ 23 ಲಕ್ಷದ 93 ಸಾವಿರರೂಪಾಯಿ ಹವಾಮಾನ ಆಧಾರಿತ ಬೆಳೆ ವಿಮೆ ಹಣ ಮಂಜೂರಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದೆ.

ಹೌದು, ತಾಲೂಕಿನಲ್ಲಿ ಒಟ್ಟು 324.41 ಹೆಕ್ಟೇರ್ ಕೃಷಿ ಭೂಮಿಗೆ ಸಂಬಂಧಿಸಿದಂತೆ 1329 ರೈತರು ಬೆಳೆ ವಿಮೆ ಪಾವತಿಸಿದ್ದರು.

ಬೈಲೂರು ಗ್ರಾಮಕ್ಕೆ 28 ಸಾವಿರ ಲಕ್ಷ, ಬೆಳಕೆಗೆ 21.69 ಲಕ್ಷ, ಬೇಂಗ್ರೆಗೆ 69 ಸಾವರ, ಭಟ್ಕಳ ಪಟ್ಟಣಕ್ಕೆ 20 ಸಾವಿರ, ಹಾಡವಳ್ಳಿ ಗೆ 77 ಲಕ್ಷ, ಹೆಬಳೆಗೆ 35,ಸಾವಿರ, ಜಾಲಿ 76 ಸಾವಿರ, ಕಾಯ್ಕಿಣಿ 3.36 ಲಕ್ಷ, ಕೋಣಾರ 28 ಲಕ್ಷ, ಕೊಪ್ಪ 25.92 ಲಕ್ಷ, ಮಾರುಕೇರಿ 32.46 ಲಕ್ಷ, ಮಾವಳ್ಳಿ 24 ಸಾವಿರ, ಮಾವಳ್ಳಿ -2  ಗ್ರಾಪಂ ವ್ಯಾಪ್ತಿಯಲ್ಲಿ 1.07 ಲಕ್ಷ, ಮಾವಿನಕುರ್ವೆಗೆ 80 ಸಾವಿರ, ಮುಂಡಳ್ಳಿ 2.47 ಲಕ್ಷ, ಮುಟ್ಟಲ್ಳಿ 9.86 ಲಕ್ಷ ಶಿರಾಲಿ 3.09 ಲಕ್ಷ, ಯಲ್ವಡಿಕವೂರ 15.58 ಲಕ್ಷ ಮಂಜೂರಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಭಟ್ಕಳ ತಾಲೂಕಿಗೆ ಬೆಳೆವಿಮೆ ಮಂಜೂರು ಆಗಿರುವುದಕ್ಕೆ ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಎಲೆಚುಕ್ಕೆ ರೋಗ, ಕೊಳೆ ರೋಗದಿಂದ ಅಡಕೆ ಬೆಳೆ ನೆಲಕಚ್ಚಿದ್ದು, ಇಳುವರಿಗೆ ತೀರ ಕಡಿಮೆ ಆಗಿತ್ತು. ಅಡಕೆ ಮರಕ್ಕೂ ಹಾನಿಯಾಗಿತ್ತು. ರೈತರಿಗೆ ಸಂಕಷ್ಟ ಕಾಲದಲ್ಲಿ ಬೆಳೆ ವಿಮೆ ಮಂಜೂರಿಯಾಗಿ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

ಭಾರತೀ ಕಿಸಾನ್ ಸಂಘದ ನಾರಾಯಣ ಭಟ್ಟ ಉತ್ತರಕೊಪ್ಪ, ಬಿಜೆಪಿ ರೈತ ಮೋರ್ಚಾದ ಪ್ರಮುಖರಾದ ವಿಷ್ಣು ಮೂರ್ತಿ ಹೆಗಡೆ ಹೆಗ್ಗದ್ದೆ, ನಾರಾಯಣ ಭಟ್ಟ ಮಾರಕೇರಿ ಮುಂತಾದವರು ಬೆಳೆ ವಿಮೆ ಮಂಜೂರಿ ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಅದಕ್ಕೆ ಪ್ರಯತ್ನಿಸಿದ ಸಂಸದ ಕಾಗೇರಿಯವರನ್ನು ಅಭಿನಂದಿಸಿದ್ದಾರೆ.

Belevime credit these farmer ಮೊಬೈಲ್ ನಂಬರ್  ಹಾಕಿ ಬೆಳೆ ವಿಮೆ ಸ್ಟೇಟಸ್  ಚೆಕ್ ಮಾಡುವುದು ಹೇಗೆ?

ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಪೇಜ್ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ 2025-2026ರ ಕೆಳಗಡೆ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಕಳೆದ ವರ್ಷದ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕಾದರೆ 2024-2025 ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂಗಾರು ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕಾದರೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ಹಿಂಗಾರು ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಬೇಕಾದರೆ ರಾಬಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ ಪಿಎಂ ಕಿಸಾನ್ ಮಾನಧನ್ ಯೋಜನೆಯಡಿ ರೈತರಿಗೆ ತಿಂಗಳಿಗೆ 3 ಸಾವಿರ ಹೀಗೆ ಸಿಗಲಿದೆ

ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು  Check status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Captha ಕೋಡ್ ನಮೂದಿಸಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಅದರ ಮುಂದೆ ನೀವು ಅರ್ಜಿ ಎಲ್ಲಿ ಸಲ್ಲಿಸಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಅದಾದನಂತರ ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಅಥವಾ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಮಾಹಿತಿ ಕಾಣಿಸುತ್ತದೆ.

View Details ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ನಿಮ್ಮ ಊರು ಕಾಣಿಸುತ್ತದೆ. ಅಲ್ಲಿ ಹೋಬಳಿ, ನಿಮ್ಮ ಊರು ಸರ್ವೆ ನಂಬರ್, ಹಿಸ್ಸಾ ನಬರ್ ಕಾಣುಸುತ್ತದೆ. ನೀವು ಯಾವ ಬೆಳೆ ಹಾಕಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದೆ ನಿಮಗೆ ಬೆಳೆ ವಿಮೆ ಹಣ ಎಷ್ಟು ಹಣ ಜಮೆಯಾಗುತ್ತದೆ ಎಂಬ ಮಾಹಿತಿ ಕಾಣಿಸುತ್ತದೆ. ನೀವು ಎಷ್ಟು ಎಕರೆಗೆ ಬೆಳೆ ವಿಮೆ ಮಾಡಿಸಿದ್ದೀರಿ ಎಂಬ ಮಾಹಿತಿಯೂ ಕಾಣಿಸುತ್ತದೆ.

Leave a Comment