Bele vime status 2023 ನ್ನು ರೈತರು ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಬಹುದು.
ಹೌದು, ರೈತ ಮಿತ್ರರೇ, ನೀವು ಯಾರ ಬಳಿಯೂ ಹೋಗದೆ ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಅತೀ ಸುಲಭವಾಗಿ ಬೆಳೆ ವಿಮೆ ಸ್ಟೇಟಸನ್ನು ಚೆಕ್ ಮಾಡಬಹುದು.ಬೆಳೆ ವಿಮೆ ಸ್ಟೇಟಸ್ ಹೇಗೆ ಚೆಕ್ ಮಾಡಬೇಕು ಇದರೊಂದಿಗೆ ರೈತರು ಬೆಳೆ ವಿಮೆ ಕುರಿತಂತೆ ಯಾರಿಗೆ ಕರೆ ಮಾಡಬೇಕು? ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದರ ಮಾಹಿತಿ ತಿಳಿದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಪಾವತಿಸಿದ ರೈತರು ತಮ್ಮ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಮೊದಲು ಚೆಕ್ ಮಾಡಿಕೊಂಡು ನಂತರ ತಮಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಹೌದು ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಮೊಬೈಲ್ ನಲ್ಲೇ Bele vime status 2023 ಚೆಕ್ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸಿದೆ.
Bele vime status 2023 ಚೆಕ್ ಮಾಡುವುದು ಹೇಗೆ?
2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು Bele vime status ನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಸ್ಟೇಟಸ್ ಚೆಕ್ ಮಾಡಲುಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು 2023-24 ರ ಕೆಳಗಡೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಫಾರ್ಮರ್ಸ್ ಕಾಲಂ ಕೆಳಗಡೆ Check Status ಮೇಲೆ ಕ್ಲಿಕ್ ಮಾಡಬೇಕು.
ರೈತರು ಇಲ್ಲಿ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಒಂದು ವೇಳೆ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ ರಿಫ್ರೆಶ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಕ್ಯಾಪ್ಚ್ಯಾ ಕೋಡ್ ಅಪ್ಡೇಟ್ ಆಗುತ್ತದೆ. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Bele vime status 2023 ಪೇಜ್ ನಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?
ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ನಿಮ್ಮ ಮೊಬೈಲ್ ನಂಬರ್ ಕೊನೆಯ ಮೂರು ಅಂಕಿ ಅದರ ಮುಂದುಗಡೆ ನಿಮ್ಮಹೆಸರು ಕಾಣುತ್ತದೆ. ಸ್ಟೇಟಸ್ ಬಾಕ್ಸ್ ನಲ್ಲಿ ವಿಮಾ ಕಂಪನಿಯಿಂದ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋಎಂಬುದು ಕಾಣುತ್ತದೆ. ಅದರ ಮುಂದುಗಡೆ ಅರ್ಜಿ ಎಲ್ಲಿ ಸಲ್ಲಿಸಿದ್ದೀರಿ ಗ್ರಾಮ ಒನ್ ಕೇಂದ್ರದಲ್ಲಿಯೇ ಅಥವಾ ಸಿಎಸ್ಸಿ ಕೇಂದ್ರದಲ್ಲಿ ಸಲ್ಲಿಸಿದ್ದೀರೋ ಎಂಬುದು ಕಾಣುತ್ತದೆ. ಸೆಲೆಕ್ಟ್ಮೇಲೆ ಕ್ಲಿಕ್ ಮಾಡಿದ ಮೇಲೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಯಾವ ದಿನಾಂಕದಂದು ನಿಮ್ಮ ಅರ್ಜಿ ಸಲ್ಲಿಸಲಾಗಿದೆ. ಬೆಳೆ ವಿಮೆ ಹಣ ಪಾವತಿಸಲಾಗಿದೆಯೋ ಇಲ್ಲವೋ ಎಂಬುದು ಕಾಣುತ್ತದೆ. ಬೆಳೆ ವಿಮೆ ಹಣ ಪಾವತಿಸಿದ್ದರೆ ಯಾವ ದಿನಾಂಕದಂದು ಪೇಮೆಂಟ್ ಸಕ್ಸೆಸಫುಲ್ ಆಗಿದೆ ಎಂಬುದು ಕಾಣುತ್ತದೆ. ಬ್ಯಾಂಕಿನಿಂದ ಅಪ್ರೂವ್ ಆಗಿ ಬೆಳೆ ವಿಮೆ ಮಾಡಿಸಿದ ಕಂಪನಿಗೆ ಅರ್ಜಿ ಕಳಿಸಿದ್ದರೆ ಯಾವ ದಿನಾಂಕದಂದು ಅರ್ಜಿ ಕಳಿಸಲಾಗಿದೆ ಎಂಬುದು ಕಾಣುತ್ತದೆ. ಈ ಆಧಾರದ ಮೇಲೆ ಅರ್ಜಿ ಸ್ವೀಕೃತವಾಗಿ ಯಾವ ಹಂತದಲ್ಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಇದನ್ನೂ ಓದಿ : PMkisan Eligible ineligible list ನಿಮ್ಮ ಹೆಸರು ಚೆಕ್ ಮಾಡಿ
ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕೇವಲ ಮೊಬೈಲ್ ನಂಬರ್ ನಮೂದಿಸಿ ಬೆಳೆ ವಿಮೆ ಅರ್ಜಿಯ ಸ್ಟೇಟಸ್ ನ್ನು ರೈತರು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಇದು 2022-23ನೇ ಸಾಲಿನ ಮುಂಗಾರು ಹಂಗಾಮಿನ ಸ್ಟೇಟಸ್ ಮಾತ್ರ ಚೆಕ್ ಮಾಡುವ ವಿಧಾನವಾಗಿದೆ.
ಬೆಳೆ ವಿಮೆ ಕುರಿತಂತೆ ಯಾರಿಗೆ ಸಂಪರ್ಕಿಸಬೇಕು?
ಬೆಳೆ ವಿುಮೆ ಕುರಿತಂತೆ ಹಾಗೂ ವಿಮಾ ಕಂಪನಿ ಸಿಬ್ಬಂದಿ ನಂಬರ್ ಗೊತ್ತಿರದಿದ್ದರೆ ಈ 1800 180 1551 ಉಚಿತ ಸಹಾಯವಾಣಿಗೆ ಕರೆ ಮಾಡಿ ಮೊಬೈಲ್ ನಂಬರ್ ಪಡೆಯಬಹುದು.