ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನ

Written by Ramlinganna

Updated on:

Before 7 insure crops ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಕೆಲವು ಬೆಳೆಗಳಿಗೆ ವಿಮೆ ಮಾಡಿಸಲು ಮೂರು ದಿನ ಬಾಕಿಯಿದ್ದರೆ ಇನ್ನೂ ಕೆಲವು ಬೆಳಗಳಿಗೆ 12 ದಿನ ಬಾಕಿಯಿದೆ. ಯಾವ್ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? ಮೊಬೈಲ್ ನಲ್ಲೆ ಚೆಕ್ ಮಾಡಿ.

ಮುಂಗಾರು ಹಂಗಾಮಿನ ಕೆಲವು ಜಿಲ್ಲೆಗಳಲ್ಲಿ ದ್ರಾಕ್ಷಿ, ದಾಳೆಂಬೆ, ಮಾವು ಸೇರಿದಂತೆ ಇತರ ಬೆಳೆಗಳಿಗೆ ಆಘಸ್ಟ್ 7 ರವರೆಗೆ ಬೆಳೆ ವಿಮೆ ಮಾಡಿಸಬಹುದು. ಇದರೊಂದಿಗೆ ರಾಗಿ, ಹುರುಳಿ, ಭತ್ತ ಈರುಳ್ಳಿ. ಸೂರ್ಯಕಾಂತಿ, ಕೆಂಪು ಮೆಣಸಿನ ಕಾಯಿ ಸೇರಿದಂತೆ ಇತರ ಬೆಳೆಗಳಿಗೆ ಆಗಸ್ಟ್ 16 ರವರೆಗೆ ವಿಮೆ ಮಾಡಿಸಬಹುದು. ಹೌದು, ರೈತರು ಈ ಬೆಳೆಗಳನ್ನು ಮೇಲೆ ನೀಡಿದ ಕಾಲಾವಕಾಶದೊಳಗೆ ಬೆಳೆ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆಯಬಹುದು.

ಮುಂಗಾರು ಹಂಗಾಮಿನ ತರಕಾರಿ, ತೋಟಗಾರಿಕೆ ಬೆಳೆಗಳನ್ನು ವಿಮೆ ಮಾಡಿಸಲು ಎಲ್ಲಾ ಜಿಲ್ಲೆಯ ರೈತರಿಗೆ ಅವಕಾಶವಿಲ್ಲ. ಆಯಾ ಜಿಲ್ಲೆಗಳಲ್ಲಿ ಹೆಚ್ಚು ಬೆಳೆಯುವ ಬೆಳೆಗಳಿಗೆ ಆದ್ಯತೆ ಮೇರೆಗೆ ಜಿಲ್ಲಾವಾರು ಬೆಳೆಗಳಾಗಿ ವಿಂಗಡಿಸಲಾಗಿದೆ.

ಉದಾಹರಣೆಗೆ ಕಲಬುರಗಿ ಜಿಲ್ಲೆಯಲ್ಲಿ ಕೆಲವು ಟೊಮ್ಯಾಟೋ, ಪಪ್ಪಾಯ, ಹಸಿ ಮೆಣಸಿನ ಕಾಯಿಗೆ ಆಗಸ್ಟ್ 7 ಕೊನೆ ದಿನವಾಗಿದೆ. ಅದೇ ರೀತಿ ಭತ್ತ, ಸೂರ್ಯಕಾಂತಿ, ಈರುಳ್ಳಿ ಹಾಗೂ ಕೆಂಪು ಮೆಣಸಿನ ಕಾಯಿಗೆ ಆಗಸ್ಟ್ 16 ರವರೆಗೆ ವಿಮೆ ಮಾಡಿಸಲು ಅವಕಾಶವಿದೆ.  ಆದರೆ ಬೀದರ್ ಜಿಲ್ಲೆಗೆ ಶುಂಠಿ, ಹಸಿ ಮೆಣಸಿನ ಕಾಯಿ, ಹೂಕೂಸು ಮಾವು ಬೆಳೆಗಳಿಗೆ ವಿಮೆ ಮಾಡಿಸುಲ ಆಗಸ್ಟ್ 7 ಕೊನೆಯ ದಿನವಾಗಿದೆ.

ಇದನ್ನೂ ಓದಿGruha jyothi status ಗೃಹ ಜ್ಯೋತಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಅದೇ ರೀತಿ ಸೂರ್ಯಕಾಂತಿ ಒಂದೇ ಬೆಳೆಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ. ಹಾಗಾಗಿ ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ 4 ಹಾಗೂ ಆಗಸ್ಟ್ 16 ಕೊನೆಯ ದಿನವಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Before 7 insure crops ಯಾವ ಯಾವ ಬೆಳೆಗಳಿಗೆವಿಮೆ ಮಾಡಿಸಲು ಆಗಸ್ಟ್ 7 ಕೊನೆಯ ದಿನವಾಗಿದೆ? ಚೆಕ್ ಮಾಡಿ

ರೈತರು ತಮ್ಮ ಜಿಲ್ಲೆಯಲ್ಲಿ ಯಾವ್ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಯಾವ ದಿನಾಂಕ ಕೊನೆಯದಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಓಪನ್ ಆಗುವ ಪೇಜ್ ನಲ್ಲಿ ಕೇವಲ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ಒಂದು ಪಟ್ಟಿ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯಲ್ಲಿ ಯಾವ್ಯಾವ ಬೆಳೆಗಳನ್ನು ಆಗಸ್ಟ್ 6 ಹಾಗೂ ಆಗಸ್ಟ್ 16 ರೊಳಗಾಗಿ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಬಹುದು.

ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ಹಾಳಾಗಿದೆಯೇ?

ಬೆಳೆ ವಿಮೆ ಮಾಡಿಸಿದ ನಂತರ ಮಳೆಯಿಂದಾಗಿ ನಿಮ್ಮ ಬೆಳೆ ಜಲಾವೃತವಾಗಿದ್ದರೆ ಅಥವಾ ಕೊಚ್ಚಿಕೊಂಡು ಹೋಗಿದ್ದರೆ ನೀವು ಕೂಡಲೇ 72 ಗಂಟೆಯೊಳಗೆ ನಿಮ್ಮ ವಿಮಾ ಕಂಪನಿಗೆ ದೂರು ನೀಡಬೇಕಾಗುತ್ತದೆ. ಅದಕ್ಕಿಂತ ಮುಂಚಿತವಾಗಿ ನೀವು ಬೆಳೆ ಸಮೀಕ್ಷೆ ಮಾಡಿಸಿರಬೇಕು. ಬೆಳೆ ಸಮೀಕ್ಷೆಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಮಾಡಬಹುದು. ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುತ್ತದೆ. ರೈತರು ತಮ್ಮ ಬೆಳೆ ಹಾಳಾದ ನಂತರ ಆಯಾ ಜಿಲ್ಲೆಯಲ್ಲಿ ನಿಯೋಜಿಸಲಾದ ವಿಮಾ ಕಂಪನಿಯ ಸಿಬ್ಬಂದಿಗಳಿಗೆ ದೂರು ನೀಡಿದರೆ ಮಾತ್ರ ಮುಂದೆ ನಿಮಗೆ ಬೆಳೆ ವಿಮೆ ಜಮೆಯಾಗುತ್ತದೆ. ವಿಮಾ ಸಿಬ್ಬಂದಿಗಳು ನಿಮ್ಮ ಜಮೀನಿಗೆ ಭೇಟಿ ನೀಡಿ ವರದಿ ಸಲ್ಲಿಸುತ್ತಾರೆ. ಹಾಗಾಗಿ  ದೂರು ನೀಡಬೇಕಾಗುತ್ತದೆ.

Leave a Comment