Baragala parihara ಹಣ ಜಮೆಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

ರಾಜ್ಯದಲ್ಲಿ 195 ತಾಲೂಕುಗಳು  ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದರಿಂದ ಈ ತಾಲೂಕಿನ ರೈತರು ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು,  ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ರಾಜ್ಯದ ಬಹುತೇಕ ಕಡೆ ಫಸಲು ಕೈಗೆ ಬರಲಿಲ್ಲ. ಇದರಿಂದಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದರು. ರೈತರ ಬವಣೆ ಕಂಡು ರಾಜ್ಯ ಸರ್ಕಾರವು ಎಲ್ಲಿ ಮಳೆಯಾಗಿಲ್ಲವೋ ಆ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.

ಈಗಾಗಲೇ ಬೆಳೆ ಸಮೀಕ್ಷೆ ಪ್ರಕ್ರಿಯೆ ಆರಂಭವಾಗಿದೆ. ಬೆಳೆ ಸಮೀಕ್ಷೆ ಆಧಾರದ ಮೇಲೆ ರೈತರಿಗೆ ಬರಗಾಲ ಪರಿಹಾರ ಹಣ ಜಮೆ ಮಾಡಲಾಗುವುದು. ಆದರೆ ರೈತರು ಬರಗಾಲ ಪರಿಹಾರದ ಹಣ ಜಮೆಯಾಗುವ ಕುರಿತು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಬರಗಾಲ ಪರಿಹಾರ ಹಣ ಜಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಬರಗಾಲ ಪರಿಹಾರ ಹಣ ಜಮೆಯ ಸ್ಟೇಟಸ್ ಚೆಕ್ ಮಾಡಲು ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಹಾಗ ಪರಿಹಾರ ಹಣ ಸಂದಾಯ ವರದಿ ಓಪನ್ ಆಗುತ್ತದೆ ಅಲ್ಲಿ ನಿಮಗೆ ಸ್ಟೇಟಸ್ ಚೆಕ್ ಮಾಡುವ ಎರಡು ಆಯ್ಕೆಗಳು ಕಾಣಿಸುತ್ತವೆ. ಹೌದು, ಪರಿಹಾರ ನಮೂದು ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಇವೆರಡು ಆಯ್ಕೆಗಳ ಮೂಲಕ ಸ್ಟೇಟಸ್ ಚೆಕ್ ಮಾಡಬಹುದು.

ನೀವು ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ Select calamity type ನಲ್ಲಿ Drought (ಬರಗಾಲ) ಆಯ್ಕೆ ಮಾಡಿಕೊಳ್ಳಬೇಕು. Select Year Type  ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಕೆಳಗಡೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು.ನಂತರ ಕ್ಯಾಪ್ಚ್ಯಾ ಕೋಡ್ ಹಾಕಬೇಕು.

ಇದಾದನಂತರ ವಿವರಗಳ್ನು ಪಡೆಯಲು / Fetch Details  ಮೇಲೆ ಕ್ಲಿಕರ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ಕ್ರಮ ಸಂಖ್ಯೆ, ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು, ಮೊತ್ತ, ಖಾತೆದಾರರ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯ ಸ್ಥಿತಿ, ಸಂದಾಯ ದಿನಾಂಕ ಕಾಣಿಸುತ್ತದೆ.

ಅದರ ಕೆಳಗಡೆ ಆಧಾರ್ ನಂಬರ್, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಬೆಳೆಯ ಹೆಸರು, ಬೆಳೆಯ ವಿಧ ಹಾಗೂ ಎಷ್ಟು ಎಕರೆಗೆ  ಜಮೆ ಮಾಡಲಾಗಿದೆ ಎಂಬ ಮಾಹಿತಿ ಇರುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ ಅನರ್ಹ ರೈತರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿರುವವರಿಗೆ ಹಣ ಜಮೆಯಾಗಲ್ಲ

ರೈತರು ಬರಗಾಲ ಪರಿಹಾರ ಸ್ಟೇಟಸ್ ನೊಂದಿಗೆ ಕಳೆದ ವರ್ಷ ಅಂದರೆ 2022-23 ಹಾಗೂ 2021-22 ನೇ ಸಾಲಿನಲ್ಲಿ ತಮಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಸಹ ಚೆಕ್ ಮಾಡಬಹುದು.  ಸ್ಟೇಟಸ್ ಪೇಜ್ ನಲ್ಲಿ Drought ಬದಲು  Flood ಆಯ್ಕೆ ಮಾಡಿಕೊಳ್ಳಬೇಕು.  ನಂತರ ನೀವು ವರ್ಷ  ಆಯ್ಕೆ ಮಾಡಿಕೊಂಡು ಸ್ಟೇಟಸ್ ಚೆಕ್ ಮಾಡಬಹುದು.

ಮಳೆಯಾಶ್ರೀತ ಬೆಳೆಗಳಿಗೆ 2 ಹೆಕ್ಟೇರ್ ಗೆ ಸೀಮಿತವಾಗಿ ಪ್ರತಿ ಹೆಕ್ಟೇರಿಗೆ 8500 ರೂಪಾಯಿಗಳ ಪರಿಹಾರ ಮೊತ್ತವನ್ನು ನೀಡಲಾಗುವುದು. ಇದರೊಂದಿಗೆ  ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 17000 ರೂಪಾಯಿ ಪರಿಹಾರ ಮೊತ್ತ ನೀಡಲಾಗುವುದು. ಇದರೊಂದಿಗೆ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರಿಗೆ 22500 ರೂಪಾಯಿ ಪರಿಹಾರ ಮೊತ್ತವನ್ನು ನೀಡಲಾಗುವುದು. ಎಕರೆವಾರು ಅಂದರೆ ಸಮೀಕ್ಷೆ ವೇಳೆ ಎಷ್ಟು ಎಕರೆ ನಮೂದಿಸಲಾಗಿದೆ.  ಹಾಗೂ ಯಾವ ಬೆಳೆ ನಮೂದಿಸಲಾಗಿದೆ ಎಂಬುದರ ಆಧಾರದ ಮೇಲೆ ಬರ ಪರಿಹಾರ ಹಣ ಜಮೆ ಮಾಡಲಿದೆ.

1 thought on “Baragala parihara ಹಣ ಜಮೆಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ”

Leave a comment