Bara Parihara: ಈ ರೈತರಿಗೆ 2 ಸಾವಿರ ರೂಪಾಯಿ ಬರ ಪರಿಹಾರ ಜಮೆ

Written by Ramlinganna

Published on:

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಹಂತದ 2000 ರೂಪಾಯಿ Baragala parihara amount jame ಈವರೆಗೆ 33 ಲಕ್ಷ ರೈತರಿಗೆ ನೀಡಲಾಗಿದೆ. ದಾಖಲೆಗಳ ಸಮಸ್ಯೆಯಿಂದಾಗಿ ಇನ್ನೂ 1.66 ಲಕ್ಷ ರೈತರಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು ಒಟ್ಟು 628 ಕೋಟಿ ರೂಪಾಯಿ ಬರ ಪರಿಹಾರ ಹಣ ಸಂದಾಯವಾಗಿದೆ. ಇನ್ನೂಳಿದ 1.66 ಲಕ್ಷ ರೈತರಿಗೆ ಸುಮಾರು 30 ಕೋಟಿ ರೂಪಾಯಿ ನಷ್ಟು ಪರಿಹಾರ ಮೊತ್ತ ತಲುಪಬೇಕಿದೆ. ಸರಿಯಾದ ದಾಖಲೆ ಪಡೆದು ಸಂದಾಯ ಮಾಡಲಾಗುವುದು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಪರಿಹಾರ ಪಡೆದಿರುವ ರೈತರ ಪಟ್ಟಿ ಪ್ರಕಟಿಸಲು ಸೂಚಿಸಲಾಗಿದೆ.

ಯಾವುದೇ ರೈತರ ಹೆಸರು ಕೈಬಿಟ್ಟು ಹೋಗಿದ್ದರೆ ಕೂಡಲೇ ಸ್ಥಳೀಯ ಕೃಷಿ ಇಲಾಖೆ, ಕಂದಾಯ ಇಲಾಖೆಗೆ ಸಂಪರ್ಕಿಸಬಹುದುಎಂದರು.

ಇದನ್ನೂ ಓದಿ Gruha lakshmi scheme 6 ನೇ ಕಂತಿನ ಹಣ ಜಮೆ: ಇಲ್ಲೇ ಚೆಕ್ ಮಾಡಿ 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರ ಪರಿಹಾರ ನೀಡಿಕೆಯಲ್ಲಿ ದುರುಪಯೋಗವಾಗಿದೆ. ರೈತರ ಹೆಸರಿನಲ್ಲಿ ನೈಜ ಫಲಾನುಭವಿ ಅಲ್ಲದವರಿಗೂ ಸ್ಥಳೀಯ ಅಧಿಕಾರಿಗಳು ಬರ ಪರಿಹಾರದ ಹಣ ನೀಡಿ ಲೂಟಿ ಹೊಡೆದಿದ್ದಾರೆ. ಆದರೆ ಯಾವುದೇ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪರಿಶೀಲಿಸಿ ಕ್ರಮ ಕೈಗಳ್ಳಲು ಸೂಚಿಸಿದೆ. ಜೊತೆಗೆ ಈಗ ನೀಡುತ್ತಿರುವ ಬರ ಪರಿಹಾರದಲ್ಲಿ ಅಂತಹ ಯಾವುದೇ ದುರುಪಯೋಗಕ್ಕೆ ಅವಕಾಶವಾಗದಂತೆ ನೇರ ರೈತರ ರೈತರ ಖಾತೆಗೆ ಹಣ ವರ್ಗಾವಣೆಯಾಗುವಂತೆ ನೋಡಿಕೊಂಡಿದೆ ಎಂದು ತಿಳಿಸಿದರು.

ಬರ ನಿರ್ವಹಣೆಗೆ ಕ್ರಮ

ರಾಜ್ಯದ 234 ಬರ ತಾಲೂಕುಗಳು ಬರಪೀಡಿತವಾಗಿದೆ. ಬರ ನಿರ್ವಹಣೆಗೆ ಸರ್ಕಾರ 870 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅನುದಾನದಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಅಗತ್ಯ ಕ್ರಮ ವಹಿಸುತ್ತಿದ್ದಾರೆ ಎಂದು ಕೃಷಿ ಭೈರೇಗೌಡ ಅವರು ತಿಳಿಸಿದ್ದಾರೆ.

Baragala parihara amount jame ನಿಮಗೆಷ್ಟು ಬರ ಪರಿಹಾರ ಜಮೆ ಆಗಿದೆ? ಚೆಕ್ ಮಾಡಿ

ಬರ ಪರಿಹಾರ ಹಣ ಯಾವ ಯಾವ ರೈತರಿಗೆ  ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಅಥವಾ ಡ್ರಾಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2023ನೇ  ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

ಇಲ್ಲಿ ನಿಮಗೆ ಯಾವ ಬೆಳೆಗೆ ಬರ ಪರಿಹಾರ ಹಣ ಜಮೆಯಾಗಿದೆ. ಎಷ್ಟು ಹಣ ಜಮೆಯಾಗಿದೆ? ಯಾವ ದಿನಾಂಕದಂದು ಬೆಳೆ ಹಾನಿ ಪರಿಹಾರಹಣ ಜಮೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ.

ರೈತರಿಗೆ ಆರ್ಥಿಕ ಅಲ್ಪ ಸಹಾಯವಾಗಲೆಂದು ರಾಜ್ಯಸರ್ಕಾರವು ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ಪರಿಹಾರ ಹಣವನ್ನು ಜಮೆ ಮಾಡುತ್ತಿದೆ. ಈಗಾಗಲೇ ಬಹುತೇಕ ರೈತರಿಗೆ ಹಣ ಜಮೆಯಾಗಿದೆ. ಇನ್ನೂ ಯಾರಿಗೆ ಹಣ ಜಮೆಯಾಗಿಲ್ಲವೋ ಅವರ ಖಾತೆಗೂ ಅತೀ ಶೀಘ್ರದಲ್ಲಿ ಹಣ ಜಮೆಯಾಗಲಿದೆ. ರೈತರು ತಮಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Leave a Comment