ರೈತರಿಗೆ ಸಬ್ಸಿಡಿಯಲ್ಲಿ ಟಾರ್ಪಲಿನ್ ಹಾಗೂ ಬಿತ್ತನೆ ಬೀಜ ವಿತರಿಸಲು ವಿವಿಧ ಜಿಲ್ಲೆಗಳಿಂದ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಎಲ್ಲಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮೇ 22 ರಿಂದ ರಿಯಾಯಿತಿ ದರದಲ್ಲಿ ಟಾರ್ಪಲಿನ್ ವಿತರಣೆ ಪ್ರಾರಂಭವಾಗಲಿದೆ.
ಗ್ರಾಮ ಪಂಚಾಯತ್ ಮರು ನಿಗದಿಪಡಿಸಿರುವ ಗುರಿ ಅನ್ವಯ ತಮ್ಮ ಹೋಬಳಿ ವ್ಯಾಪ್ತಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲು ಬಂದವರಿಗೆ ಆಧ್ಯತೆ ಅನುಸಾರ ಟಾರ್ಪಲಿನ್ ದಾಸ್ತಾನು ಮುಗಿಯುವವರಿಗೆ ವಿತರಿಸಲಾಗುವುದು. ಹಿಂದಿನ ಮೂರು ವರ್ಷಗಳಲ್ಲಿ ಟಾರ್ಪಲಿನ್ ಪಡೆದಿರಬಾರದೆಂದು ತಿಳಿಸಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಜಿಂಕ್ ಸಲ್ಫೆಟ್, ಬೋರಾಕ್ಸ್ ಹಾಗೂ ಲಘು ಪೋಷಕಾಂಶಗಳ ಮಿಶ್ರಣವೂ ಲಭ್ಯವಿದೆ. ಬಿತ್ತನೆಗೂ ಮುಂಚೆ, ಜಿಂಕ್ ಸಲ್ಫೇಟ್ ಎಕರೆಗೆ 5 ಕೆಜಿ ಹಾಗೂ ಬೋರಾಕ್ಸ್ ಎಕರೆಗೆ 2 ಕೆಜಿ ಭೂಮಿಗೆ ಹಾಕುವಂತೆ ತಿಳಿಸಿದ್ದಾರೆ.
ಹೆಸರು, ಅಲಸಂಧೆ, ತೊಗರಿ ಹಾಗೂ ಶೇಂಗಾ ಬೀಜ ರಿಯಾಯಿತಿ ದರದಲ್ಲಿ ಪಡೆಯಲು ಕೋರಿದ್ದಾರೆ. ಸಹಾಯಧನ ಅಡಿಯಲ್ಲಿ ಸ್ಪ್ರಿಂಕ್ಲರ್ ಘಟಕಗಳಿಗೆ ಆರ್.ಟಿ.ಜಿ.ಎಸ್ ಮಾಡಲು ಜೂನ್ 25 ಕೊನೆಯ ದಿನವಾಗಿದೆ. ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸ್ಪಿಂಕ್ಲರ್ ಘಟಕಗಳಿಗೆ ಆರ್.ಟಿ.ಜಿ.ಎಸ್. ಮಾಡಿಸಿ ಸೌಲಭ ಪಡೆಯಲು ತಿಳಿಸಿದ್ದಾರೆ.
ಸಿರವಾರ ತಾಲೂಕಿನ ರೈತರಿಂದಲೂ ಟಾರ್ಪಲಿನ್ ಪಡೆಯಲು ಅರ್ಜಿ ಆಹ್ವಾನ
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ ಒಳಪಡುವ ಎಸ್ಸಿ, ಎಸ್ಟಿಗೆ ಸೇರಿದ ರೈತರಿಗೆ ಟಾರ್ಪಲಿನ್ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 24 ರವರೆಗೆ ಕಾಲಾವಕಾಶವಿದೆ. ರೈತರು ಪಹಣಿ, ಬ್ಯಾಂಕ್ ಪಾಸ್ ಬುಕ್, ನವೀಕರಣಗೊಂಡ ಜಾತಿ ಪ್ರಮಾಣ ಪತ್ರಗಳ ನಕಲು ದಾಖಲೆಗಳನ್ನು ಸಲ್ಲಿಸಬೇಕು.
ಇದನ್ನೂ ಓದಿ : ಪಿಎಂ ಕಿಸಾನ್ ಹಣ ಜಮೆಯಾಗಲು ಇಕೆವೈಸಿ ಕಡ್ಡಾಯ- ಇಕೆವೈಸಿ ಆಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ
ಮೇ 26 ರಂು ಲಾಟರಿ ಮೂಲಕಆಯ್ಕೆ ಮಾಡಿ ಟಾರ್ಪಲಿನ್ ವಿತರಿಸಲಾಗುವುದು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ರೈತರು ಟಾರ್ಪಲನ್ ಹಾಗೂ ಬಿತ್ತನೆ ಬೀಜ ಪಡೆಯಲು ಬೇಕಾಗುವ ದಾಖಲೆಗಳು
ಸಬ್ಸಿಡಿಯಲ್ಲಿ ಬಿತ್ತನೆ ಬೀಜ ಹಾಗೂ ಟಾರ್ಪಲಿನ್ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ರೈತರು ಜಮೀನು ಹೊಂದಿರುವ ಪಹಣಿ (ಆರ್.ಟಿ,ಸಿ) ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಇತ್ತೀಚಿನ ಫೋಟೋ ಹೊಂದಿರಬೇಕು.
ಹಿರಿತನದ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಆದ್ಯತೆ ನೀಡಲಾಗುವುದು. ಹಾಗಾಗಿ ಅರ್ಜಿ ಸಲ್ಲಿಸಲು ತಡ ಮಾಡದೆ ಬೇಗನೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.
ತಾಡಪತ್ರಿಯಿಂದ ಲಾಭ
ಮಳೆಗಾಲದಲ್ಲಿ ಹಾಗೂ ರಾಶಿ ಸಮಯದಲ್ಲಿ ರೈತರಿಗೆ ತಾಡಪತ್ರಿಯ ಅವಶ್ಯಕತೆ ಹೆಚ್ಚಿರುತ್ತದೆ. ಮಳೆ ಗಾಳಿಯಿಂದ ತಮ್ಮ ಬೆಳೆ ರಕ್ಷಣೆಗೆ ತಾಡಪತ್ರಿಯ ಅವಶ್ಯಕತೆಯಿರುತ್ತದೆ.
ಸರ್ಕಾರದ ವತಿಯಿಂದ ಸಬ್ಸಿಡಿಯಲ್ಲಿ ತಾಡಪತ್ರಿಗಳನ್ನು ವಿತರಿಸಲಾಗುವುದು. ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಹೋದರೆ ರೈತರು ಹೆಚ್ಚಿನ ಬೆಲೆ ಕಟ್ಟಬೇಕಾಗುತ್ತದೆ. ಕಡಿಮೆ ದರದಲ್ಲಿ ಅಂದರೆ ಸಬ್ಸಿಡಿಯಲ್ಲಿ ಸಿಗುವ ತಾಡಪತ್ರಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಲು ಕೋರಲಾಗಿದೆ. ಇದೇ ರೀತಿ ಬೇರೆ ಬೇರೆ ಜಿಲ್ಲೆಗಳಿಂದಲೂ ಅರ್ಜಿ ಆಹ್ವಾನಿಸಲಾಗಿರುತ್ತದೆ. ಆಗ ರೈತರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಲು ಕೋರಲಾಗಿದೆ.