ಕುರಿ, ಕೋಳಿ, ಮೇಕೆ ಸಾಕಾಣಿಕೆ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

Written by Ramlinganna

Updated on:

ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲೆಯ ರೈತರಿಗೆ ವಿವಿಧ ತರಬೇತಿಗಳನ್ನು ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಪಶು ಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತ ಕೇಂದ್ರ ಹಾಸನ ವತಿಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಏರ್ಪಡಿಸಲಾಗಿದೆ.

ತರಬೇತಿಯಲ್ಲಿ ಹಾಸನ ಜಿಲ್ಲೆಯ ರೈತರು ಭಾಗವಹಿಸಬೇಕು. ತರಬೇತಿಯಲ್ಲಿಭಾಗವಹಿಸುವ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ ಇರುವುದಿಲ್ಲ.  ಯಾವುದೇ ಪ್ರಮಾಣದ ಭತ್ಯೆ ಅಥವಾ ಸ್ಟೈಫೆಂಡ್ ನೀಡಲಾಗುವುದಿಲ್ಲ.

ಆಸಕ್ತಿಯುಳ್ಳವರು ಆಧಾರ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಯೊಂದಿಗೆ ತರಬೇತಿ ಪ್ರಾರಂಭವಾಗುವ ದಿನಾಂಕದಂದು ಬೆಳಗ್ಗೆ 10.30 ಗಂಟೆಗೆ ಉಫ ನಿರ್ದೇಶಕರ ಕಚೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಸಂತೇಪಟೆ, ಹಾಸನದಲ್ಲಿ ಹಾಜರಾಗಲು ತಿಳಿಸಿದೆ.

5 ರಿಂದ 6 ಎರಡು ದಿನವರೆಗೆ ಕುರಿ ಮತ್ತುಮೇಕೆ ಸಾಕಾಣಿಕೆ ತರಬೇತಿ, 7 ರಿಂದ 8 ರವರೆಗೆ ಎರಡು ದಿನ ಆಧುನಿಕ ಕೋಳಿ ಸಾಕಾಣಿಕೆ ತರಬೇತಿ, 19 ರಿಂದ 20 ರವರೆಗೆ ಎರಡು ದಿನ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನೀಡಲಾಗುವುದು. 21 ರಿಂದ 22 ರವರೆಗೆ ಆಧುನಿಕ ಹೈನುಗಾರಿಕೆ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ ಗೃಹಲಕ್ಷ್ಮೀ ಹಣ ಈ ದಿನ ಈ ಮಹಿಳೆಯರಿಗೆ 6 ಸಾವಿರ ಜಮೆ ನಿಮ್ಮೆ ಹೆಸರು ಚೆಕ್ ಮಾಡಿ

ಈ ತರಬೇತಿಗಳು ಕೇವಲ ಹಾಸನ, ಚಿಕ್ಕಮಗಳೂಕು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ರೈತರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಕಚೇರಿ ವೇಳೆಯಲ್ಲಿ (ಬೆಳಗ್ಗೆ 10 ರಿಂದ 5.30) ದೂರವಾಣಿ ಮೂಲಕ ಸಂಪರ್ಕಿಸಿ ಆಸಕ್ತ ರೈತರು ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172 235226 ಗೆ ಸಂಪರ್ಕಿಸಲು ಕೋರಲಾಗಿದೆ.

ರೈತರಿಗೆ ಮೂರು ದಿನಗಳ ತರಬೇತಿ

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನವೆಂಬರ್ 27 ರಿಂದ 29 ರವರೆಗೆ ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸಲು ಸೂಕ್ಷ್ಮ ನೀರಾವರಿ ಪದ್ಧತಿಗಳ ಅಳವಡಿಕೆ, ರಸಾವರಿ, ನಿರ್ವಹಣೆ ಮತ್ತುಇಲಾಖಾ ಸೌಲಭ್ಯಗಳು ಎಂಬ ವಿಷಯದ ಬಗ್ಗೆ ರೈತರು, ರೈತ ಮಹಿಳೆಯರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ತರಬೇತಿಯಲ್ಲಿ ಭಾಗವಹಿಸುವ ರೈತರು, ರೈತ ಮಹಿಳೆಯರಿಗೆ ಊಟದ ವ್ಯವಸ್ಥೆಯನ್ನು ಒದಗಿಸಲಾಗುವುದು. ಆಸಕ್ತ ರೈತರು, ರೈತ ಮಹಿಳೆಯರು ತಮ್ಮ ಹೆಸರನ್ನು ಈ ತರಬೇತಿ ಕೇಂದ್ರದ ಕೃಷಿ ಅಧಿಕಾರಿಗಳ ಮೊಬೈಲ್ ಸಂಖ್ಯೆ 8277933116 ಗೆ ಕರೆ ಮಾಡಿ ನೋಂದಾಯಿಸಬೇಕು. ಕೇವಲ ಮೈಸೂರು ಜಿಲ್ಲೆಯ 30 ರೈತರು, ರೈತ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಣಿ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಉಪ ನಿರ್ದೇಶಕ ಯೋಗೇಶೇ ತಿಳಿಸಿದ್ದಾರೆ.

ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯು 2023-24ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೋಟಗಾರಿಕೆ ವಿಸ್ತರಣೆಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣ ಯುವಕರಿಗೆ ನವೆಂಬರ್ 27 ರಿಂದ ಡಿಸೆಂಬರ್ 2 ರವರೆಗೆ 6 ದಿನಗಳ ಕಾಲ ತರೇಬಕಿ ಕಾರ್ಯಕ್ರಮವನ್ನು ಪುಷ್ಪ ಬೆಳೆ ಉತ್ಕಷ್ಟ ಕೇಂದ್ರ, ತುಂಗಾ ತೋಟಗಾರಿಕೆ ಕ್ಷೇತ್ರ, ಶಿವಮೊಗ್ಗ ಇಲ್ಲಿ ಹಮ್ಮಿಕೊಂಡಿದ್ದು, ಕನಿಷ್ಠ 5ನೇ ತರಗತಿ ಪಾಸಾಗಿರುವ 18 ರಿಂದ 33 ವರ್ಷದೊಳಗಿನ ಆಸಕ್ತ ಗ್ರಾಮೀಮ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ತೋಟಗಾರಿಕೆ ಉಪನಿರ್ದೇಶಕರು, ಪ್ರಾಜೆಕ್ಟ್ ಆಫೀಸರ್, ಪುಷ್ಪ ಬೆಳೆ ಉತ್ಕೃಷ್ಟ ಕೇಂದ್ರ, ಕಂಟ್ರಿ ಕ್ಲಬ್ ರಸ್ತೆ, ಶಿವಮೊಗ್ಗ ಇಲ್ಲಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ 08182 295428 ಅನ್ನು ಸಂಪರ್ಕಿಸಬಹುದು.

1 thought on “ಕುರಿ, ಕೋಳಿ, ಮೇಕೆ ಸಾಕಾಣಿಕೆ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ”

Leave a Comment