2020-21ನೇ ಸಾಲಿನ ಕೃಷಿ ಸಂಸ್ಕರಣಾ ಘಟಕದ ವತಿಯಿಂದ ರೈತರಿಗೆ ತಾಡಪತ್ರಿ ಹಾಗೂ ಪಿವಿಸಿ ಪೈಪ್ ಹಂಚಲು ರೈತರಿಂದ (Application invited for distribution Tarpaulin and PVC pipe, Tarpaulin)  ಅರ್ಜಿ ಆಹ್ವಾನಿಸಲಾಗಿದೆ. ಹೌದು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಎರಡು ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ತಾಡಪತ್ರಿ (ತಾಡಪಾಲ) ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ವಿಜಯಪುರ ಜಿಲ್ಲೆಯ ಆಲಮೇಲ ರೈತ ಸಂಪರ್ಕ ಕೇಂದ್ರದಿಂದ ತಾಡಪತ್ರಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ರೈತರು ಪಹಣಿ/ಉತಾರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಝರಾಕ್ಸ್, ಭಾವಚಿತ್ರ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಮಾರ್ಚ್ 15 ರೊಳಗೆ ಅರ್ಜಿ ಸಲ್ಲಿಸಬೇಕು.

ಕಳೆದ ವರ್ಷ ತಾಡಪಾಲ ಪಡೆದುಕೊಂಡ ರೈತರು ಈ ವರ್ಷ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಕೃಷಿ ಅಧಿಕಾರಿ ಯಾಸ್ಮೀನ್ ಮೋಕಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಕ್ಕೇರಾದಲ್ಲಿ ತಾಡಪತ್ರಿ ಹಾಗೂ ಪಿವಿಸಿ ಪೈಪ್ ವಿತರಿಸಲು ಅರ್ಜಿ ಆಹ್ವಾನ

ಯಾದಗಿರಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ 37 ಗ್ರಾಮಗಳ ತರಿಗೆ ತಾಡಪತ್ರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ರೈತರು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಜಾತಿಪ್ರಮಾಣಪತ್ರ, ಪಹಣಿ, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಇತರ ಅಗತ್ಯ ದಾಖಲಾತಿಗಳನ್ನು ಇದೇ ತಿಂಗಳ ಮಾರ್ಚ್ 15 ರೊಳಗೆ ಸಲ್ಲಿಸಲು ಕೋರಲಾಗಿದೆ.

2.5 ಇಂಚಿನ ಪಿವಿಸಿ ಪೈಪಗಳು ಸಹಾಯಧನದಡಿಯಲ್ಲಿ ಲಭ್ಯವಿದ್ದು, ಆಸಕ್ತ ರೈತರು ಆಧಾರ್ ಕಾರ್ಡ್ ಹಾಗೂ ಪಹಣಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರದ ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಸ್ಥಳೀಯ ಕೇಂದ್ರದ ಅಧಿಕಾರಿ ಪರಶುನಾಥ ತಿಳಿಸಿದ್ದಾರೆ.

Leave a Reply

Your email address will not be published. Required fields are marked *