Annabhagya DBT Status: ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

Annabhagya DBT Status:  ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳು ಅನ್ನಭಾಗ್ಯ ಹಣ ಜಮೆಯಾಗಿರುವುದನ್ನು ಚೆಕ್ ಮಾಡಬಹುದು.

ಹೌದು, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಚುನಾವಣೆ ಪೂರ್ವದಲ್ಲಿ ನೀಡಿದ ವಾಗ್ದಾನದಂತೆ ಒಂದೊಂದಾಗಿ ಯೋಜನೆಗಳನ್ನು ಜಾರಿಗೆ ತರುತ್ತಾ ಬರುತ್ತಿದೆ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಗೃಹಲಕ್ಷೀ ಯೋಜನೆಯನ್ನು ಈಗಾಗಲೇ ಚಾಲನೆ ನೀಡಲಾಗಿದೆ. ಯೋಜನೆಯಡಿ ನೋಂದಣಿಯಾದ ಫಲಾನುಭವಿಗಳ ಖಾತೆಗೆ ಸಹಾಯಧನ ಸಹ ಜಮೆ ಮಾಡಲಾಗುತ್ತಿದೆ.

Annabhagya DBT Status:  ನಿಮಗೆ ಹಣ ಜಮೆಯಾಗಿದೆಯೋ ಇಲ್ಲವೋ? ಚೆಕ್ ಮಾಡಿ

ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳು ತಮ್ಮ ಯಾವ ಖಾತೆಗೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/lpg/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ರೇಶನ್ ಕಾರ್ಡ್ ನಮೂದಿಸಿ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಗಳು ಕಾಣಿಸುತ್ತವೆ. ನೀವು ಯಾವ ಜಿಲ್ಲೆಯವರಾಗಿದ್ದೀರೋ ಆ ಜಿಲ್ಲೆಯ ಮೇಲ್ಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಸ್ಟೇಟಸ್ ಆಫ್ ಡಿಬಿಟಿ ನೇರ ನಗದು ವರ್ಗಾವಣೆಯ ಸ್ಥಿತಿ ಪೇಜ್ ಕಾಣಿಸುತ್ತದೆ. ಅದ ಮೇಲೆಕ್ಲಿಕ್ ಮಾಡಿದ ನಂತರ   ತೆರೆದುಕೊಳ್ಳುವ ಪೇಜ್ ನಲ್ಲಿ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು.  ನಿಮ್ಮ ರೇಶನ್ ಕಾರ್ಡ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ  ಗೋ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

ಅನ್ನಭಾಗ್ಯ ಯೋಜನೆಯ ಹಣದೊಂದಿಗೆ 5 ಅಕ್ಕಿ ಉಚಿತ

ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಯ ಹೆಚ್ಚುವರಿ ಹಣದೊಂದಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತದೆ. ಪ್ರತಿ ತಿಂಗಳು 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಇದರೊಂದಿಗೆ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿಯ ಹೆಚ್ಚುವರಿ ಹಣವನ್ನು ಸಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಇದೇ ತಿಂಗಳು ಅಕ್ಟೋಬರ್ ತಿಂಗಳ ಅಕ್ಕಿಯ ಹಣ ಜಮೆಯಾಗುವ ಸಾಧ್ಯತೆಯಿದೆ.

ಗೃಹಲಕ್ಷ್ಮೀ ಯೋಜನೆಯಡಿ ನಿಮಗೆ ಹಣ ಜಮೆಯಾಗುತ್ತಿದೆಯೇ?

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡು ಫಲಾನುಭವಿಗಳ ಖಾತೆಗೆ ಇದೇ ತಿಂಗಳು 2 ಸಾವಿರ ರೂಪಾಯಿ ಜಮೆಯಾಗುವ ಸಾಧ್ಯತೆಯಿದೆ. ಈಗಾಗಲೇ ಒಂದು ತಿಂಗಳ ಹಣ ಬಹುತೇಕ ರೇಶನ್ ಕಾರ್ಡ್ ಮುಖ್ಯಸ್ಥ ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ. ಇದೇ ತಿಂಗಳು 2 ನೇ ಕಂತಿನ ಹಣ ಜಮೆಯಾಗಲಿದೆ.  ಹಾಗಾಗಿ ದೀಪಾವಳಿ ಹಬ್ಬಕ್ಕೆ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೋಂೋಂದ ಮಾಡಿಸಿಕೊಂಡವರಿಗೆ  ಸರ್ಕಾರ ಗಿಫ್ಟ್ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ Crop insurance ಹಣ ಈ ಜಿಲ್ಲೆಯ ರೈತರಿಗೆ ಜಮೆ: ನಿಮಗೂ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ

ದೀಪಾವಳಿ ಮೊದಲೇ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ ಜಮೆಯಾಗುವ ಸಾಧ್ಯತೆಯಿದೆ.  ಅವರು ಸಹ ತಮಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಶಕ್ತಿ ಯೋಜನೆಯಡಿಯಲ್ಲಿ ಈಗಾಗಲೇ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುವ ಸೌಲಭ್ಯ ನೀಡಲಾಗಿದೆ.ಇದರ ಸೌಲಭ್ಯವೂ ಕಳೆದ ನಾಲ್ಕು ತಿಂಗಳಿಂದ ರಾಜ್ಯ ಮಹಿಳೆಯರು ಸೌಲಭ್ಯ ಪಡೆಯುತ್ತಿದ್ದಾರೆ.

 

Leave a Comment