ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Written by Ramlinganna

Updated on:

Anganawadi workers jobs ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ 8 ಅಂಗನವಾಡಿ ಕಾರ್ಯಕರ್ತೆ, 5 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 39 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಸ್ಥಳೀಯ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 5 ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಇದನ್ನೂ ಓದಿ :  ಪಿಎಂ ಕಿಸಾನ್ ಹಣ ಜಮೆಯಾಗಲು Moibleನಲ್ಲಿ ಹೀಗೆ ಇ-ಕೆವೈಸಿ ಮಾಡಿ

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ಅಂಗನವಾಡಿ ಕೇಂದ್ರಗಳಾದ ನಗರಸಭೆ ವ್ಯಾಪ್ತಿಯ ಚಿನ್ಮಯಿ ವಾರ್ಡ್, ಅರಳಿಕಟ್ಟೆ, ವಿದ್ಯಾನಗರ, ಕೆಂಪಾಂಬನಗರ, ಸಿಡ್ಲೇಹಳ್ಳಿ ಆಶ್ರಮ, ಮಾರುತಿನಗರ, ಗಾಂಧಿನಗರ, ಚಾಮುಂಡೇಶ್ವರಿ ಬಡಾವಣೆ, ಭೋವಿ ಕಾಲೋನಿ, ಸಿದ್ದರಾಮೇಶ್ವರ ನಗರ, ಕೆಎಚ್.ಡಿಸಿ  ಕಾಲೋನಿ, ಶಂಕರ ನಗರ, ತಾಲೂಕಿನ ಹಿಂಡಸ್ಕೆರೆ, ಬಿಳಿಗೆರೆ, ಕಿಬ್ಬನಹಳ್ಳಿ ಕಾಲೋನಿ, ಕಿಬ್ಬನಹಳ್ಳಿ ಪಾಳ್ಯ, ರಂಗಾಪುರ, ರಾಮಡಿಹಳ್ಳಿ, ಭೋವಿ ಕಾಲೋನಿ, ಸೂಗೂರು, ಗುರುಗದಹಳ್ಳಿ, ಶಿವನಗರ, ಬ್ಯಾಡರಹಳ್ಳಿ, ಮಣಕಿಕೆರೆ, ಎನ್.ಮೇಲನಹಳ್ಳಿ, ಕನ್ನುಘಟ್ಟ ಗೋ. ಹಟ್ಟಿ, ಕರಿಕೇರೆ, ಚಿಗ್ಗಾವೆ, ಹನುಮಂತಪುರ, ರಾಮನಹಳ್ಳಿ, ಕಬ್ಬಿನಕೆರೆ, ರಾಮನಪಾಳ್ಯ ಭೋವಿ ಕಾಲೋನಿ, ಬೆನ್ನಾಯಕನಹಳ್ಳಿ ಗೋ ಹಟ್ಟಿ, ಕೋಟನಾಯಕನಹಳ್ಳಿ, ಈಡೇನಹಳ್ಳಿ ಪಾಳ್ಯ, ಹರಚನಹಳ್ಳಿ ಕಾಲೋನಿ, ಮಾರಗೊಂಡನಹಳ್ಳಿ, ರಂಗನಾಥಪುರ, ಮಲ್ಲಿಪಟ್ಟಣ, ಟಿ.ಎಂ. ಮಂಜುನಾಥ ನಗರ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಾಗಿ  ಹರಿಸಮುದ್ರ, ಚೌಲಹಳ್ಳಿ ಎಕೆ ಕಾಲೋನಿ, ಮಾಚಕಟ್ಟೆತಾಂಡ್ಯ, ಬಿ. ರಂಗಾಪುರ, ತಿಮ್ಮಾಪುರ, ನ್ಯಾಕೇನಹಳ್ಳಿ, ಮಾದಿಹಳ್ಳಿ, ಮಂಜುನಾಥ ಬಡಾವಣೆಯಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ Ration card ನಂಬರ್ ಹಾಕಿ ನಿಮಗೆಷ್ಟು ಹಣ ಜಮೆ Mobileನಲ್ಲೇ ಚೆಕ್ ಮಾಡಿ

ಮಿನಿ ಅಂಗನವಾಡಿ ಕೇಂದ್ರಗಳಾದ ಮಾದಿಹಳ್ಳಿ ಗೋ. ಹಟ್ಟಿ, ಮಣಕೀಕೆರೆ ಹೊಸಹಳ್ಳಿ, ದಾಸನಕಟ್ಟೆ, ಮಸವನಘಟ್ಟ ಕಾಲೋನಿ, ಹಾರನಕಟ್ಟೆ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Anganawadi workers jobs ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, ವ್ಯಾಸಂಗ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಅರ್ಜಿಯೊಂದಿಗೆ ಸಲ್ಲಿಸಬೇಕು.

ಆಸಕ್ತ ಮಹಿಳೆಯರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಅರ್ಜಿ ಸಲ್ಲಿಸಿ ಹುದ್ದೆ ಪಡೆಯಬಹುದು. ಏಕೆಂದರೆ ತಡವಾಗಿ ಬಂದ ಅರ್ಜಿ ಗಳನ್ನು ಸ್ವೀಕರಿಸಲಾಗುವುದಿಲ್ಲ.  ಹಾಗಾಗಿ ಕೂಡಲೇ ನಿಮ್ಮ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಬಹುದು. ಯಾವ ಯಾವ ದಾಖಲೆ ಬೇಕು? ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.

Leave a Comment