ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

Written by Ramlinganna

Updated on:

Anganawadi jobs for women ಮಹಿಳೆಯರಿಗಿಲ್ಲಿದೆ ಸಂತಸದ ಸುದ್ದಿ, ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಹಾಗೂ ಮಹಿಳೆಯರಿಗೆ ಉಚಿತ ಟೆಲರಿಂಗ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಸಮರ್ಥ್ ಫೌಂಡೇಶನ್ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯು 17-42 ವರ್ಷ ವಯಸ್ಸಿನ ಎಲ್ಲಾ ವರ್ಗದ ನಿರುದ್ಯೋಗಿ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಮತ್ತು ಸೀರೆಗೆ ಕುಚ್ಚು ಹಾಕುವ ತರಬೇತಿಯನ್ನು ನೀಡಲು ಅರ್ಜಿನ್ನು ಆಹ್ವಾನಿಸಲಾಗಿದೆ.

ಇದಕ್ಕೆ ಯಾವುದೇ ವಿದ್ಯಾಭ್ಯಾಸದ ನಿರ್ಬಂಧವಿಲ್ಲ. 17-42 ವರ್ಷದ 10ನೇ ತರಗತಿ ಪಾಸಾದ ತುಮಕೂರು ಜಿಲ್ಲೆಯ ಮಹಿಳೆಯರಿರಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಟಿ, ಎಸ್.ಸಿ ಮಹಿಳೆಯರಿಗೆ ಕಂಪ್ಯೂಟರ್ ಟೈಲರಿಂಗ್, ಸೀರೆಗೆ ಕುಚ್ಚು ಹಾಕುವ ಮೂರು ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

ತರಬೇತಿಯ ಅವಧಿ 2 ತಿಂಗಳಾಗಿರುತ್ತದೆ. ತರಬೇತಿಯನ್ನು ಮುಗಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಉದ್ಯೋಗ ಮಾಡಲು ಮಾರ್ಗದರ್ಶನ ಸಹ ನೀಡಲಾಗುವುದು. ಆಸಕ್ತರು ಈ ಕೂಡಲೇ ಕೆಳಗೆ ನೀಡಲಾದ ವಿಳಾಸಕ್ಕೆಸಂಪರ್ಕಿಸಲು ಕೋರಲಾಗಿದೆ.

ಸಮರ್ಥ್ ಫೌಂಡೇಶನ್, ಎಂ.ಜಿ. ರೋಡ್, ತುಮಕೂರು, ದೂರವಾಣಿ ಸಂಖ್ಯೆ, 9986824210 ಸಂಪರ್ಕಿಸಲು ಕೋರಲಾಗಿದೆ.

Anganawadi jobs for women ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ 8 ಅಂಗನವಾಡಿ ಕಾರ್ಯಕರ್ತೆ, 5 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 39 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಸ್ಥಳೀಯ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 5 ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಇದನ್ನೂ ಓದಿ ನಿಮ್ಮ Survey Numberನಲ್ಲಿ ಯಾವ ರೈತರ ಹೆಸರಿದೆ? Mobileನಲ್ಲೇ ಚೆಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ಅಂಗನವಾಡಿ ಕೇಂದ್ರಗಳಾದ ನಗರಸಭೆ ವ್ಯಾಪ್ತಿಯ ಚಿನ್ಮಯಿ ವಾರ್ಡ್, ಅರಳಿಕಟ್ಟೆ, ವಿದ್ಯಾನಗರ, ಕೆಂಪಾಂಬನಗರ, ಸಿಡ್ಲೇಹಳ್ಳಿ ಆಶ್ರಮ, ಮಾರುತಿನಗರ, ಗಾಂಧಿನಗರ, ಚಾಮುಂಡೇಶ್ವರಿ ಬಡಾವಣೆ, ಭೋವಿ ಕಾಲೋನಿ, ಸಿದ್ದರಾಮೇಶ್ವರ ನಗರ, ಕೆಎಚ್.ಡಿಸಿ  ಕಾಲೋನಿ, ಶಂಕರ ನಗರ, ತಾಲೂಕಿನ ಹಿಂಡಸ್ಕೆರೆ, ಬಿಳಿಗೆರೆ, ಕಿಬ್ಬನಹಳ್ಳಿ ಕಾಲೋನಿ, ಕಿಬ್ಬನಹಳ್ಳಿ ಪಾಳ್ಯ, ರಂಗಾಪುರ, ರಾಮಡಿಹಳ್ಳಿ, ಭೋವಿ ಕಾಲೋನಿ, ಸೂಗೂರು, ಗುರುಗದಹಳ್ಳಿ, ಶಿವನಗರ, ಬ್ಯಾಡರಹಳ್ಳಿ, ಮಣಕಿಕೆರೆ, ಎನ್.ಮೇಲನಹಳ್ಳಿ, ಕನ್ನುಘಟ್ಟ ಗೋ. ಹಟ್ಟಿ, ಕರಿಕೇರೆ, ಚಿಗ್ಗಾವೆ, ಹನುಮಂತಪುರ, ರಾಮನಹಳ್ಳಿ, ಕಬ್ಬಿನಕೆರೆ, ರಾಮನಪಾಳ್ಯ ಭೋವಿ ಕಾಲೋನಿ, ಬೆನ್ನಾಯಕನಹಳ್ಳಿ ಗೋ ಹಟ್ಟಿ, ಕೋಟನಾಯಕನಹಳ್ಳಿ, ಈಡೇನಹಳ್ಳಿ ಪಾಳ್ಯ, ಹರಚನಹಳ್ಳಿ ಕಾಲೋನಿ, ಮಾರಗೊಂಡನಹಳ್ಳಿ, ರಂಗನಾಥಪುರ, ಮಲ್ಲಿಪಟ್ಟಣ, ಟಿ.ಎಂ. ಮಂಜುನಾಥ ನಗರ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಾಗಿ  ಹರಿಸಮುದ್ರ, ಚೌಲಹಳ್ಳಿ ಎಕೆ ಕಾಲೋನಿ, ಮಾಚಕಟ್ಟೆತಾಂಡ್ಯ, ಬಿ. ರಂಗಾಪುರ, ತಿಮ್ಮಾಪುರ, ನ್ಯಾಕೇನಹಳ್ಳಿ, ಮಾದಿಹಳ್ಳಿ, ಮಂಜುನಾಥ ಬಡಾವಣೆಯಲ್ಲಿ ಅರ್ಜಿ ಸಲ್ಲಿಸಬಹುದು.

ಮಿನಿ ಅಂಗನವಾಡಿ ಕೇಂದ್ರಗಳಾದ ಮಾದಿಹಳ್ಳಿ ಗೋ. ಹಟ್ಟಿ, ಮಣಕೀಕೆರೆ ಹೊಸಹಳ್ಳಿ, ದಾಸನಕಟ್ಟೆ, ಮಸವನಘಟ್ಟ ಕಾಲೋನಿ, ಹಾರನಕಟ್ಟೆ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, ವ್ಯಾಸಂಗ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಅರ್ಜಿಯೊಂದಿಗೆ ಸಲ್ಲಿಸಬೇಕು.

Leave a Comment