Anganawadi job ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Written by Ramlinganna

Published on:

Anganawadi job apply online ಅಂಗನವಾಡಿ ಹುದ್ದೆಗಳಿಗಾಗಿ ಕಾಯುತ್ತಿರುವ ಮಹಿಳೆಯರಿಗೆ ಇಲ್ಲಿದೆ ಸಂತಸದ ಸುದ್ದಿ. ಹೌದು, ಅಂಗನವಾಡಿ ಸಹಾಯಕ ಹಾಗೂ ಕಾರ್ಯಕರ್ತೆಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮಹಿಳೆಯರು ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಅರ್ಜಿ ಎಲ್ಲಿ ಸಲ್ಲಿಸಬೇಕು? ಇದಕ್ಕೆ ಬೇಕಾಗುವ ಅರ್ಹತೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

ತಮಗೆಲ್ಲಾ ಗೊತ್ತಿದ್ದ ಹಾಗೆ,ಇತರ ಜಿಲ್ಲೆಯಂತೆ ಈಗ ಕೋಲಾರ ಜಿಲ್ಲೆಯಿಂದಲೂ ವಿವಿಧ ಕಡೆ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದಗಳ ಸಂಖ್ಯೆ

ಕೋಲಾರ ಜಿಲ್ಲೆಯ ವಿವಿಧ ಕಡೆ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಒಟ್ಟು ಹುದ್ದೆಗಳ ಸಂಖ್ಯೆ 500ಕ್ಕೂ ಹೆಚ್ಚು ಇವೆ. ಈ ಹುದ್ದೆಗಳ ಭರ್ತಿಗಾಗಿ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

Anganawadi job  ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗ ಅರ್ಜಿ ಸಲ್ಲಿಸಲು ಮಹಿಳೆಯರು 10ನೇ ತರಗತಿ ಉತ್ತೀರ್ಣರಾಗಿರಬೇಕು. ಮಹಿಳೆಯರು ಆಧಾರ್ ಕಾರ್ಡ್ ಹೊಂದಿರಬೇಕು. ವಾಸಸ್ಥಳ ಪ್ರಮಾಣಪತ್ರ ಇರಬೇಕು. ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.  ಇತ್ತೀಚಿನ ಫೋಟೋ ಲಗತ್ತಿಸಬೇಕಾಗುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

Anganawadi job ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕೇ?

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ

https://karnemakaone.kar.nic.in/abcd/ApplicationForm_JA_org.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಅಂಗನವಾಡಿ ಕಾರ್ಯಕರ್ತೆ, ಮಿನಿ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಅರ್ಜಿ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆಮಾಡಿಕೊಳ್ಳಬೇಕು. ನಂತರ  ಸೆಲೆಕ್ಟ್ ನೋಟಿಫಿಕೇಶನ ನಲ್ಲಿ 03ಹೆಚ್ ಆಯ್ಕೆ ಮಾಡಿಕೊಳ್ಳಬೇಕು.

ನೀವು ಪರಿಶಿಷ್ಟ ಜಾತಿಯವರಾಗಿದ್ದರೆ ಅದು ಅಲ್ಲಿ ಆಯ್ಕೆಮಾಡಿಕೊಳ್ಳಬೇಕು. ಪರಿಶಿಷ್ಟ ಪಂಗಡದವರಾಗಿದ್ದರೆ  ಆಯ್ಕೆ ಮಾಡಿಕೊಳ್ಳಬೇಕು. ಓಬಿಸಿ ದವರರಾಗಿದ್ದರೆ ಇತರರು ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಗ್ರಾಮ ಪಂಚಾಯತ್ ಎದುರುಗಡೆ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ಹೆಸರು, ಹುಟ್ಟಿದ ದಿನಾಂಕ, ವಯಸ್ಸು, ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರ, ತಂದೆಯ ಹೆಸರು ನಮೂದಿಸಬೇಕು. ನಂತರ ದ್ವಿತೀಯ ಪಿಯುಸಿ ಪಾಸ ಆಗಿದ್ದರೆ ಅಲ್ಲಿ ನಿಮ್ಮ ಅಂಕಪಟ್ಟಿಯಲ್ಲಿರುವ ನೋಂದಣಿ ಸಂಖ್ಯೆ, ಗಳಿಸಿದ ಅಂಕ, ಗರಿಷ್ಠಅಂಕ ನಮೂದಿಸಬೇಕು. ಇದಾದ ನಂತರ ಶೇಕಡವಾರು ಅಂಕ ನಮೂದಿಸಬೇಕು.

ಇದನ್ನೂ ಓದಿ :ಪಿಎಂ ಕಿಸಾನ್ ಜಮೆ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ನಿಮ್ಮ ವಿಳಾಸ ನಮೂದಿಸುವುದನ್ನು ಮರೆಯಬಾರದು.  ನಿಮ್ಮ ಜಿಲ್ಲೆ, ತಾಲೂಕು, ಪಿನ್ ಕೋಡ್ ನಂಬರ್, ಮೊಬೈಲ್ ನಂಬರ್, ವಿಳಾಸ  ಹೀಗೆ ಅಲ್ಲಿ ಕೇಳಲಾದ ಎಲ್ಲಾಮಾಹಿತಿಗಳನ್ನು ಸರಿಯಾಗಿ ಆಯ್ಕೆ ಮಾಡಿಕೊಂಡು ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು.

ಇನ್ನೇಕೆ ತಡ ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವಾಗ ನಿಮ್ಮ ಎಲ್ಲಾ ದಾಖಲೆ ಅಂದರೆ ಎಸ್.ಎಸ್.ಎಲ್.ಸಿ, ಮಾರ್ಕ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು. ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ಹತ್ತಿರದ ನೆಟ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು.

Leave a Comment