ಕೊರೋನಾ ಸಂಕಷ್ಟದಲ್ಲಿ ಕೃಷಿ ವಲಯ ಬಿಟ್ಟರೆ ಉಳಿದೆಲ್ಲಾ ಚಟುವಟಿಕೆಗೆ ಭಾರಿ ಹೊಡೆತ ಬಿದ್ದಿದೆ. ಕೃಷಿ ವಲಯಕ್ಕೂ ಕೊರೋನಾ ಸಂಕಷ್ಟ ತಂದಿದೆ. ಆದರೆ ಇತರ ವಲಯಗಳಿಗೆ ಹೋಲಿಸಿದರೆ ಸ್ವಲ್ಪ ಕೃಷಿ ವಲಯ ಉಸಿರಾಡುತ್ತಿದೆ. ಹಾಗಾಗಿ ಕೃಷಿ ವಲಯವನ್ನು ಉತ್ತೇಜಿಸಲು ದೇಶದ ನೇಗಲಯೋಗಿಗೆ ಸಮಸ್ಯೆಯಾಗಬಾರದೆಂದು ಸರ್ಕಾರ ವಾರ್ ರೂಂ (War room) ಆರಂಭಿಸಿದೆ.
ರೈತರು ತಮ್ಮ ಬೆಳೆಗಳಿಗೆ ತಗಲುವ ರೋಗ, ಕೀಟನಾಶಕ, ಬೆಳೆಗಳ ತಳಿ, ಬೀಜ, ಸಸಿಗಳ ಲಭ್ಯತೆ ಸೇರಿದಂತೆ ಇನ್ನಿತರ ಮಾಹಿತಿ ಪಡೆಯರು ರೈತರು ಈಗ ಎಲ್ಲಿಗೂ ಹೋಗಬೇಕಿಲ್ಲ. ಈಗ ಯಾವ ಇಲಾಖೆಗೂ ಹೋಗಬೇಕಿಲ್ಲ. ಮನೆ, ಹೊಲದಲ್ಲಿಯೇ ಕುಳಿತು ತಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ.
ಕೊರೋನಾ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಚಟುವಟಿಕೆ ಮತ್ತು ಮಾರುಕಟ್ಟೆ ಕುರಿತು ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಹೆಸರುಘಟ್ಟದ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ವಾರ್ ರೂಂ ಆರಂಭಿಸಿದೆ.
ರೈತರು ಈ ವಾರ್ ರೂಂ ಸಹಾಯವಾಣಿಗೆ ಕರೆ ಮಾಡಿ ಅಥವಾ ವ್ಯಾಟ್ಸಪ್ ಮಾಡಿದರೆ ಸಾಕು ಬೆಳೆ ಉತ್ಪಾದನಾ ತಾಂತ್ರಿಕತೆ, ಕೀಟ ಮತ್ತು ರೋಗ ನಿರ್ವಹಣೆ, ಬೆಳೆಗ ಬೀಜ ಮತ್ತು ಸಸಿ ಲಭ್ಯತೆ ಸೇರಿದಂತೆ ಕ್ಷೇತ್ರಮಟ್ಟದ ಸಮಸ್ಯೆಗಳು, ಮಾರುಕಟ್ಟೆದರ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಅನುಭವಿ ಕೃಷಿಕರು, ಸಂಬಂದಿತ ಭಾಗಿದಾರರು ಆಯಾ ವಿಜ್ಞಾನಗಳ ಪರಿಣಿತರು ಈ ವಾರ್ ರೂಪಂ ತಂಡದಲ್ಲಿದ್ದಾರೆ.
ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ
ಡಾ. ಆರ್.ಸಿ ಜಗದೀಶ ಡೀನ್, ತೋಟಗಾರಿಕಾ ಮಹಾವಿದ್ಯಾಲಯ, 9449411434, ಡಾ. ಜೆಎಸ್. ಕೆ. ಸ್ವಾಮಿ ಪ್ರಾಧ್ಯಾಪಕರು, ಹಣ್ಣು ವಿಜ್ಞಾನ ವಿಭಾಗ, 9480222488, ಡಾ. ಸಿ.ಎಮ್. ಹಂಚಿನಮನಿ, ಪ್ರಾಧ್ಯಾಪಕರು, ತರಕಾರಿ ವಿಭಾಗ. 9480410721, ಡಾ. ಎಸ್.ಎಲ್. ಜಗದೀಶ, ಪ್ರಾಧ್ಯಾಪಕರು, ಕೊಯ್ಲೋತ್ತರ ತಂತ್ರಜ್ಞಾನ ವಿಭಾಗ-9448902428, ಡಾ. ಹರೀಶ ಬಿ.ಎಸ್. ತೋಟಪಟ್ಟಿ, ಸಾಂಬಾರ, ಔಷಧೀಯ ಸಸ್ಯಗಳ ವಿಭಾಗ, 9480557634, ಡಾ. ಅಮೃತಾ ಭಟ್ ಸಸ್ಯ ರೋಗಶಾಸ್ತ್ರ ವಿಭಾಗ 9481421166, ಡಾ. ರಾಮೇಗೌಡ ಜಿ.ಕೆ. ಸಸ್ಯ ಕೀಟಶಾಸ್ತ್ರ ವಿಭಾಗ 9483532730,
ಮಧ್ಯಾಹ್ನ 2 ರಿಂದ ರಾತ್ರಿ 8ರವರೆಗೆ
ಡಾ. ವಿಷ್ಣುವರ್ಧರ ಸಹ ಸಂಶೋಧನಾ ನಿರ್ದೇಶಕರು 9483560272, ಡಾ. ದೇವಪ್ಪ ವಿ. ಸಸ್ಯರೋಗ ಶಾಸ್ತ್ರ ವಿಭಾಗ 9972619448, ಡಾ. ಎಸ್.ವಿ. ಪಾಟೀಲ್, ಬೇಸಾಯಶಾಸ್ತ್ರ ವಿಭಾಗ-9964149903, ಡಾ. ರಘುನಾಥ ರೆಡ್ಡಿ, ಮಣ್ಣುವಿಜ್ಞಾನ ವಿಭಾಗ 9844497120, ಡಾ. ಗಂಗಾಧರ ನರಬೆಂಚಿ ಸಸ್ಯ ಕೀಟಶಾಸ್ತ್ರ ವಿಭಾಗ 9343056273, ಡಾ. ಶ್ವೇತಾ ಬಿ.ಎಸ್. ವಿಸ್ತರಣಾ ಮಂದಾಳು, ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ 8867574561