ಜೂನ್ 30 ರೊಳಗೆ ಆದಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ (Aadhar pandcard link) ಮಾಡದಿದ್ದರೆ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ಹೌದು, ಲಿಂಕ್ ಮಾಡದಿದ್ದರೆ ಕೇವಲ ದಂಡವಷ್ಟೇ ಅಲ್ಲ, ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಳಿಸಲಾಗುವುದು. ಕೂಡಲೇ ಜೂನ್ 30 ರೊಳಗೆ ಲಿಂಕ್ ಮಾಡಿಸಿಕೊಳ್ಳಿ. ಒಂದು ವೇಳೆ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದರೆ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲಿನಲ್ಲಿಯೇ ಸ್ಟೇಟಸ್ (Aadhaar pan link status) ಒಂದೇ ನಿಮಿಷದಲ್ಲಿ ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಲು ನೀವು ಕೊಟ್ಟಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದ್ದನ್ನು ಈ ಲಿಂಕ್ಡಿ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.
www.incometaxindiaefiling.gov.in/aadhaarstatus ಈ ಲಿಂಕ್ ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ಲಿಂಕ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ನಮೂದಿಸಿ ವೀವ್ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಬಹುದು. ಲಿಂಕ್ ಆಗಿದ್ದರೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬ ಸಂದೇಶ ಕಾಣುತ್ತದೆ.
ಜೂನ್ 30 ರೊಳಗೆ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ 1000 ರೂಪಾಯಿ ದಂಡ
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈ ಹಿಂದೆ ಹಲವು ಬಾರಿ ಸರ್ಕಾರ ಗಡವು ನೀಡಿತ್ತು. ಮಾರ್ಚ್ 30 ರಿಂದ ಜೂನ್ 30ರವರೆಗೆ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಗಡವು ನೀಡಲಾಗಿತ್ತು ಈಗಾಗಲೇ ಹಲವು ಬಾರಿ ಗಡವು ಸಹ ನೀಡಲಾಗಿದೆ. ಇನ್ನೂ 17 ದಿನ ಬಾಕಿಯಿದೆ. ಕೂಡಲೇ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದರೆ ಲಿಂಕ್ ಮಾಡಿಸಿಕೊಳ್ಳಿ.
ದೇಶಾದ್ಯಂತ ಇನ್ನೂ 18 ಕೋಟಿ ಜನ ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್ ಗೆ ಲಿಂಕ್ ಮಾಡಿಲ್ಲವೆಂದು ಸರ್ಕಾರ ಮಾಹಿತಿ ನೀಡಿತ್ತು. ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದ್ದರಿಂದ ಕೊನೆಯ ದಿನದವರೆಗೆ ಕಾಯಬೇಡಿ.