ರೈತರ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ- ಲಿಂಕ್ ಆಗದಿದ್ದರೆ ಸಬ್ಸಿಡಿ ಕಡಿತ ಏನಿದು ಆಧಾರ್ ಲಿಂಕ್? ಇಲ್ಲಿದೆ ಮಾಹಿತಿ

Written by Ramlinganna

Published on:

ರಾಜ್ಯದಲ್ಲಿ ನೀರಾವರಿ ಕೃಷಿ ಪಂಪ್ ಸೆಟ್ಗಳ ಆರ್.ಆರ್. ಸಂಖ್ಯೆಗಳನ್ನು ಸಂಬಂಧಿಸಿದ ಗ್ರಾಹಕರ ಆಧಾರ್ ನಂಬರ್ ಜೊತೆಗೆ ಆರು ತಿಂಗಳೊಳಗಾಗಿ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಅಂತಹ ಆರ್. ಆರ್. ಸಂಖ್ಯೆಗಳಿಗೆ ಸಹಾಯಧನ ಬಿಡುಗಡೆ ಮಾಡುವುದಿಲ್ಲ ಎಂದು ಕೆಇಆರ್ಸಿ ಶ್ರಕ್ರವಾರ ಆದೇಶ ಹೊರಡಿಸಿದೆ. ಇದು ರೈತ  ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಶುಕ್ರವಾರ ಪ್ರಕಟಿಸಿರುವ ವಿದ್ಯುತ್ ದರ ಪರಿಷ್ಕರಣೆ ಆದೇಶದಲ್ಲಿ ಈ ಷರತ್ತನ್ನು ವಿಧಿಸಿದ್ದು, ಎಸ್ಕಾಂಗಳು ಕಡ್ಡಾಯವಾಗಿ ಕೃಷಿ ಪಂಪ್ ಸೆಟ್ ಗಳ ಗ್ರಾಹಕರಾಗಿರುವ ರೈತರ ಆಧಾರ್ ಸಂಖ್ಯೆಯನ್ನು ಸಂಬಂಧಪಟ್ಟ ಕೃಷಿ ಪಂಪ್ ಸೆಟ್ ಆರ್.ಆರ್. ಸಂಖ್ಯೆಗೆ ಲಿಂಕ್ ಮಾಡಬೇಕು. ಇದನ್ನು ಆರು ತಿಂಗಳ ಒಳಗಾಗಿ ಲಿಂಕ್ ಮಾಡದಿದ್ದರೆ ಅಂತಹ ಆರ್.ಆರ್. ಸಂಖ್ಯೆಯ ಸಹಾಯಧನ ಸರ್ಕಾರದಿಂದ ಎಸ್ಕಾಂಗಳಿಗೆ ಬಿಡುಗಡೆಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಇದು ಕೃಷಿ ಪಂಪ್ ಸೆಟ್ಗಗಳಿಗೆ ಇರುವ ಉಚಿತ ವಿದ್ಯುತ್ ಸೌಲಭ್ಯಗಳನ್ನು ಕಸಿದುಕೊಳ್ಳುವ  ಹುನ್ನಾರವಾಗಿದೆ.ಯಾವುದೇ ಕಾರಣಕ್ಕೂ ರೈತರ ಆಧಾರ್ ಸಂಖ್ಯೆಯನ್ನು ಆರ್.ಆರ್. ಸಂಖ್ಯೆಗೆ ಲಿಂಕ್ ಮಾಡುವುದನ್ನು ಒಪ್ಪುವುದಿಲ್ಲ. ಒಂದು ವೇಳೆ ಬಲವಂತವಾಗಿ ಲಿಂಕ್ ಮಾಡಲು ಮುಂದಾದರೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿವೆ.

ಕೇಂದ್ರ ಹೊಸ ವಿದ್ಯುತ್ ನೀತಿ ಅನ್ವಯ ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡಬೇಕು. ಮೊದಲು ಪಂಪ್ ಸೆಟ್ಗಳ ವಿದ್ಯುತ್ ಶುಲ್ಕವನ್ನು ರೈತರು  ಪಾವತಿಸಿದರೆ ಬಳಿಕ ಸರ್ಕಾರದ ಸಬ್ಸಿಡಿ ಹಣವನ್ನು ಸರ್ಕಾರ ಪಾವತಿಸಬೇಕು ಎಂದು ಹೇಳಲಾಗಿದೆ. ಇದಕ್ಕೆ ದೇಶಾದ್ಯಂತ ರೈತ ವಲಯದಿಂದ ಈಗಾಗಲೇ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ :  ಪಿಎಂ ಕಿಸಾನ್ ಹಣ ಯಾರ ರೈತರಿಗೆ ಜಮೆ ಯಾವ ರೈತರಿಗೆ ಜಮೆಯಾಗಲ್ಲ ಮೊಬೈಲ್ ನಲ್ಲೇ ಚೆಕ್ ಮಾಡಿ

ಇದೇ ರೀತಿ ಹಿಂದೆ ಅಡುಗೆ ಕ್ಯಾಸ್ ಬೆಲೆಯನ್ನು ಇಧೇ ರೀತಿ ಮಾಡಿದ್ದರು. ಮೊದಲು ಗ್ರಾಹಕರು ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕು. ಬಳಿಕ ಸರ್ಕಾರ ಗ್ರಾಹಕರ ಖಾತೆಗೆ ಸಬ್ಸಿಡಿಹಣ ವಾಪಸ್ಸು ಮಾಡುತ್ತದೆ ಎಂದರು. ಎರಡು ತಿಂಗಳು ಹಾಕಿ ಏಕಾಏಕಿ ಸಬ್ಸಿಡಿ ನೀಲ್ಲಿಸಿಬಿಟ್ಟರು. ಜನ ಸಾಮಾನ್ಯರಿಗೆ ಧ್ವನಿ ಇಲ್ಲದಂತೆ ಮಾಡಿದ ಅವರ ಸೌಲಭ್ಯಗಳನ್ನುಕಸಿದುಕೊಳ್ಳುವ ನೀತಿ ಇದಾಗಿದೆ. ಈಗ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮುಂದೆ ಕೃಷಿ ಪಂಪ್ ಸೆಟ್ಗಳಿಗೆ  ಮೀಟರ್ ಅಳವಡಿಸುತ್ತಾರೆ. ಮೀಟರ್ ಅಳವಡಿಸಿದ ಬಳಿಕ ರೈತರು ಶುಲ್ಕ ಪಾವತಿಸಬೇಕು. ಬಳಿಕ ಸರ್ಕಾರ ವಾಪಸ್ಸು ಕೊಡುತ್ತದೆ ಎನ್ನುತ್ತಾರೆ.ನಂತರ ಪಾವಸ್ಸು ಕೊಡುವುದನ್ನು ನಿಲ್ಲಿಸಿ ವಿದ್ಯುತ್ ರೈತರು ಶುಲ್ಕ ಭರಿಸುವಂತೆ ಮಾಡುತ್ತಾರೆ. ಈ ಬಗ್ಗೆ ಮುಂದೆ ಹೋರಾಟ ಮಾಡಲಾಗುವುದು ಎಂದು ರಾಜ್ಮ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಪ್ರತಿ ಯೂನಿಟ್ ಗೆ 70 ಪೈಸೆ ಹೆಚ್ಚಳ

ರಾಜ್ಯದಲ್ಲಿ ವಿಧಾನಸಭಗೆ ಮತದಾನ ನಡೆದು ಮತ ಎಣಿಕೆಯ ಹಂತದಲ್ಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ಗ್ರಾಹಕರಿಗೆ ಸದ್ದಿಲ್ಲದೆ ಶಾಕ್ ನೀಡಿದೆ. ಹೌದು ಏಪ್ರೀಲ್ ಒಂದರಿಂದಲೇ ಪೂರ್ವಾನ್ವಯ ಆಗುವಂತೆ ಪ್ತತಿ ಯೂನಿಟ್ ಗೆ 70 ಪೈಸೆ ವಿದ್ಯುತ್ ದರ ಹೆ್ಚಿಸಿದೆ. ಇದರಲ್ಲಿ ಗ್ರಾಹಕರು ಪ್ರತಿ ಯೂನಿಟ್ ಗೆ 55 ಪೈಸೆಯನ್ನು ವಿದ್ಯುತ್ ಬಳಸದೆ ಇದ್ದರೂ ನಿಗದಿತ ಶುಲ್ಕವನ್ನುನೀಡಬೇಕು. ಪ್ರತಿ ಯೂನಿಟ್ ಗೆ 15 ಪೈಸೆ ಬಳಕೆಯ ಮೇಲೆ ಅನ್ವಯವಾಗುತ್ತದೆ.

ರಾಜ್ಯದಲ್ಲಿ  ಎಲ್ಲಾ ವಿದ್ಯುತ್ ವಿತರಣ ಕಂಪನಿಗಳಉ ರಅಜ್ ಸಲ್ಲಿಸಿ ಪ್ರತಿ ಯೂನಿಟಗಳಿಗೆ 185 ಪೈಸೆ ಹೆಚ್ಚಿಸುವಂತೆ ಕೇಳಿದ್ದವು. ಇದನ್ನು ಪರಿಶೀಲಿಸಿದ ಕೆಇಆರ್.ಸಿ ಪ್ರತಿ ಯೂನಿಟ್ಗೆ 70 ಪೈಸೆ ಹೆಚ್ಚಿಸಲು ಅನುಮೋದನೆ ನೀಡಿದೆ.

Leave a comment