Crop loan wavier ಬೆಳೆ ಸಾಲಮನ್ನಾ ಸ್ಟೇಟಸನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಯಾವ ಯಾವ ರೈತರಿಗೆ ಎಷ್ಟೆಷ್ಟು ಬೆಳೆ ಸಾಲಮನ್ನಾಆಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
2018 ರಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 1 ಲಕ್ಷ ರೂಪಾಯಿಯವರೆಗೆ ಬೆಳೆ ಸಾಲಮನ್ನಾ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಲಮನ್ನಾ ಘೋಷಣೆಯಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ರಾಜ್ಯದಲ್ಲಿ ಯಾವುದೇ ರೈತರ ಬೆಳೆ ಸಾಲಮನ್ನಾ ಆಗಿಲ್ಲ. ಪ್ರಸ್ತುತ ರಾಜ್ಯ ಸರ್ಕಾರವು ಯಾವುದೇ ಬೆಳೆ ಸಾಲಮನ್ನಾಘೋಷಣೆ ಮಾಡಿಲ್ಲ.
Crop loan wavier 2018 ರಲ್ಲಿ ಯಾರು ಯಾರಿಗೆ ಬೆಳೆ ಸಾಲಮನ್ನಾ ಆಗಿದೆ? ಮೊಬೈಲ್ ನಲ್ಲಿ ಚೆಕ್ ಮಾಡಿ
2018 ರಲ್ಲಿ ಯಾವ ಯಾವ ರೈತರ ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ರೈತರು ಚೆಕ್ ಮಾಡಲು ಈ
https://clws.karnataka.gov.in/clws/pacs/citizenreport/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆಧಾರ್ ಕಾರ್ಡ್ ನಂಬರ್, ರೇಶನ್ ಕಾರ್ಡ್ ನಂಬರ್ ಹೀಗೆ ಎರಡು ಆ?್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ Fetch Report ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ರಿಪೋರ್ಟ್ ಓಪನ್ ಆಗುತ್ತದೆ.
ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ನೀವು ಯಾವ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆದಿದ್ದೀರಿ? ಯಾವ ಬ್ರ್ಯಾಂಚ್ ನಲ್ಲಿ ಬೆಳೆ ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ನಂತರ ನಿಮ್ಮ ಹೆಸರು, ತಂದೆಯಹೆಸರು ಕಾಣಿಸುತ್ತದೆ. ನಂತರ ನಿಮ್ಮ ಬ್ಯಾಂಕಿನ ಅಕೌಂಟ್ ನಂಬರ್ ಕಾಣಿಸುತ್ತದೆ. 31-12-2017 ರವರೆಗೆ ನಿಮ್ಮ ಹೆಸರಿಗೆ ಎಷ್ಟು ಬೆಳೆ ಸಾಲವಿತ್ತು ಎಂಬುದು ಕಾಣಿಸುತ್ತದೆ. ನಂತರ ನಿಮಗೆ ಎಷ್ಟು ಕಂತುಗಳಲ್ಲಿಬೆಳೆ ಸಾಲಮನ್ನಾ ಆಗಿದೆ ಅಂದರ ನಿಮಗೆ ಎಷ್ಟು ಕಂತುಗಳಲ್ಲಿ ಹಣ ಬಿಡುಗಡೆಯಾಗಿದೆ? ಎಷ್ಟುಹಣ ನಿಮ್ಮ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಯಾವ ದಿನಾಂಕದಂದು ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ಇರುತ್ತದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಬಾರದೆ ರೈತರ ಅಪಾರ ಬೆಳೆಗೆ ಹಾನಿಯಾಯಿತು. ಕೆಲವು ರೈತರಬೆಳೆ ಮೊಳಕೆ ಒಡೆಯದೆ ಭೂಮಿಯಲ್ಲಿ ಉಳಿಯಿತು.ಇನ್ನೂ ಕೆಲವು ರೈತರ ಬೆಳೆ ಕಟಾವಿನ ಹಂತದಲ್ಲಿ ಹಾನಿಯಾಯಿತು.
ಇದನ್ನೂ ಓದಿ : ನಿಮ್ಮ ಜಮೀನು ಯಾರಿಂದ ಯಾರ ಹೆಸರಿಗೆ ಬದಲಾಗಿದೆ? ಇಲ್ಲೇ ಚೆಕ್ ಮಾಡಿ
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸರ್ಕಾರವು ರಾಜ್ಯದ 216 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ತಾಲೂಕುಗಳೆಂದು ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದಿಂದ ಬರಗಾಲ ಪರಿಹಾರ ಹಣ ಇನ್ನೂ ಬಿಡುಗಡೆಯಾಗಿಲ್ಲ. ಹಾಗಾಗಿ ರಾಜ್ಯ ಸರ್ಕಾರವು ರೈತರಿಗೆ ಅಲ್ಪ ಸಹಾಯವಾಗಲೆಂದು ತಾತ್ಕಾಲಿಕವಾಗಿ ಎರಡು ಸಾವಿರ ರೂಪಾಯಿ ನೀಡಲು ಘೋಷಣೆ ಮಾಡಿದ ನಂತರ ಇತ್ತೀಚೆಗೆ 105 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅತೀ ಶೀಘ್ರದಲ್ಲಿ ರೈತರ ಖಾತೆಗೆ ಬರಗಾಲ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ.
ಯಾವ ಬೆಳೆಗೆ ಎಷ್ಟು ಬರಗಾಲ ಪರಿಹಾರ ಹಣ ಘೋಷಣೆಯಾಗಿದೆ?
ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ಪರಿಹಾರ ನೀಡಲು ನಿಗದಿಪಡಿಸಲಾಗಿದೆ. ಅದೇ ರೀತಿ ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ಪರಿಹಾರ ನೀಡಲು ನಿಗದಿ ಮಾಡಲಾಗಿದೆ.
ಬರ ಪರಿಹಾರ ನೀಡಲು ಯಾವ ಯಾವ ಷರತ್ತುಗಳಿವೆ?
ಬರ ಪರಿಹಾರ ನೀಡಲು ಕೆಲವು ಷರತ್ತುಗಳನ್ನು ನೀಡಲಾಗಿದೆ. ಬೆಳೆ ಹಾನಿ ಪರಿಹಾರ ನೀಡಲು ಯಾವುದೇ ರೈತರಿಂದ ಅರ್ಜಿ ಆಹ್ವಾನಿಸುಂತಿಲ್ಲ. ಫ್ರೂಟ್ಸ್ (ಎಫ್.ಆರ್.ಐ.ಟಿ.ಎಸ್) ದತ್ತಾಂಶದ ಮತ್ತು ಕಂದಾಯ ಇಲಾಖೆಯ 2023ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆ ದತ್ತಾಂಶದ ಪರಿಹಾರ ನೀಡಲಾಗುವುದು.
ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ರೈತರ ಐಡಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಅರ್ಹ ರೈತರ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುವುದು.