ರಾಜ್ಯದಲ್ಲಿ ಘೋಷಣೆಯಾಗಿರುವುದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಯಾವ ಯಾವ ರೈತರಿಗೆ Baragala hana ಜಮೆಯಾಗುತ್ತದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಬರಗಾಲ ಘೋಷಣೆಯಾದ ತಾಲೂಕುಗಳ ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮಗೆ ಬೆಳೆ ಹಾನಿ ಪರಿಹಾರ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಅತೀ ಸುಲಭವಾಗಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ರೈತರು ನನ್ನ ಬೆಳೆ ನನ್ನ ಹಕ್ಕು ಆಶಯದಡಿಯಲ್ಲಿ ಸಮೀಕ್ಷೆ ಮಾಡಲು ಕೋರಲಾಗಿತ್ತು. ರೈತರು ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಅವರುಗೆ ಬೆಳೆ ವಿಮೆ, ಬೆಳೆ ಹಾನಿ ಸೇರಿದಂತೆ ಸರ್ಕಾರದ ವತಿಯಿಂದ ಜಮೀನಿನ ಮೇಲೆ ಸೌಲಭ್ಯ ಸಿಗುತ್ತದೆ. ಈಗಾಗಲೇ ಸರ್ಕಾರದ ವತಿಯಿಂದ ರಾಜ್ಯದಲ್ಲಿ 216 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ತಾಲೂಕುಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಈ ತಾಲೂಕಿನಲ್ಲಿ ಅಧಿಕಾರಿಗಳಿಂದ ಪಾರದರ್ಶಕತೆಯಿಂದ ಸಮೀಕ್ಷೆ ಮಾಡಿ ನೊಂದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಸಹ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ನಿಮ್ಮತಾಲೂಕಿನಲ್ಲಿ ಬೆಳೆ ಹಾನಿಯಾಗಿರುವ ಕುರಿತು ಸಮೀಕ್ಷೆಯಾಗಿದೆಯೇ? ಚೆಕ್ ಮಾಡಿ
Baragala hana ಜಮೆಯಾಗಲು ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ? ಚೆಕ್ ಮಾಡಿ
ನಿಮ್ಮ ಬೆಳೆ ಸಮೀಕ್ಷೆಯಾಗಿದೆಯೋ ನಿಮಗೆ ಜಮೆಯಾಗುತ್ತೋ ಇಲ್ಲವೋ ಚೆಕ್ ಮಾಡಲು ಈ
https://play.google.com/store/apps/details?id=com.crop.offcskharif_2021
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಬೆಳೆ ದರ್ಶಕ್ ಎಂಬ ಆ್ಯಪ್ ಕಾಣಿಸುತ್ತದೆ. ಅಲ್ಲಿ ನೀವು Install ಮೇಲೆ ಕ್ಲಿಕ್ ಮಾಡಬೇಕು. ನಂತರ open ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಬೆಳೆ ದರ್ಶಕ್ 23-24 ಕಾಣಿಸುತ್ತದೆ.
ಅದರ ಕೆಳಗಡೆ ನಿಮಗೆರಡು ಆಯ್ಕಗಳು ಕಾಣಿಸುತ್ತವೆ. ಅದರಲ್ಲಿ ನೀವುರೈತ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಿ ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ವರ್ಷ 2023-2024 ಆಯ್ಕೆ ಮಾಡಿಕೊಳ್ಳಬೇಕರು. ನಂತರ ಋತು ಮುಂಗಾರು ಆಯ್ಕೆಮಾಡಿಕೊಳ್ಳಬೇಕು.
ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಸರ್ವೆ ನಂಬರ್ ಹಿಸ್ಸಾ ವಿವರದಲ್ಲಿನಿಮ್ಮ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಮಾಲಿಕರ ವಿವರಕ್ಕಾಗಿ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಿದ ನಂತರ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾವ ಯಾವ ಮಾಲಿಕರು ಬರುತ್ತಾರೆ ಅವರ ಹೆಸರು ಕಾಣಿಸುತ್ತದೆ.
ಇದನ್ನೂ ಓದಿ : ಹಿಂಗಾರು ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆ- ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮೂರಿನ ಬೆಳೆಗಳ ಲಿಸ್ಟ್
ನಂತರ ಸಮೀಕ್ಷೆಯ ವಿವರಗಳನ್ನು ಪಡೆಯಿರು ಮೇಲೆ ಕ್ಲಿಕ್ ಮಾಡಿದಾಗ ನಿಮ್ಮಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.