Register your property in Kaveri 2.0 ಕಾವೇರಿ -2.0 ತಂತ್ರಾಂಶದ ಮೂಲಕ ಮನೆಯಲ್ಲಿಯೇ ಕುಳಿತು ಆಸ್ತಿ ನೋಂದಣಿ ಮಾಡಿಸಬಹುದು. ಹೌದು, ಸಾರ್ವಜನಿಕರು ಇನ್ನೂ ಮುಂದೆ ಉಪ ನೋಂದಣಿ ಕಚೇರಿಯಲ್ಲಿ ತಾಸುಗಟ್ಟಲೆ ಕಾಯುವ ಅಗತ್ಯವಿಲ್ಲ. ಸಾರ್ವಜನಿಕರ ಆಸ್ತಿ ನೋಂದಣಿಯನ್ನು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಸುಲಭಗೊಳಿಸಲು ಸರ್ಕಾರ ಕಾವೇರಿ 2.0 ತಂತ್ರಾಂಶವನ್ನು ಪರಿಚಯಿಸಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಹೌದು, ಕಾವೇರಿ-2 ತಂತ್ರಾಂಶದ ಮೂಲಕ ತಾವು ಮನೆಯಲ್ಲಿಯೇ ಕುಳಿತುಕೊಂಡು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ತಂತ್ರಾಂಶದ ಮೂಲಕ ಸುಲಭವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಆಸ್ತಿ ನೋಂದಣಿಗೆ ಸಾರ್ವಜನಿಕರು ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿ ದಿನಗಟ್ಟಲೇ ಅಲೆದಾಡಬೇಕಿತ್ತು. ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಸಾರ್ವಜನಿಕರೇ ಆನ್ಲೈ ಮೂಲಕ ಆಸ್ತಿ ನೋಂದಣಿ ಮಡಿಸಬಹುದು.
ಇದನ್ನೂ ಓದಿ : ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿಕೊಳ್ಳಿ
ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಕಾವೇರಿ ತಂತ್ರಾಂಶದ ಮೂಲಕ ಆಸ್ತಿ ನೋಂದಣಿ ಮಾಡಿಸುವ ಪ್ರಕ್ರಿಯೆ ಆರಂಭವಾಗಿದೆ. ಜೂನ್ ಅಂತ್ಯದವರೆಗೆ ರಾಜ್ಯಾದ್ಯಂತ ಈ ತಂತ್ರಾಂಶ ಬಳಕೆಯಾಗಲಿದೆ. ಸಾರ್ವಜನಿಕರು ತಮ್ಮ ದಾಖಲೆಗಳನ್ನು ತಾವೇ ತಂತ್ರಾಂಶದಲ್ಲಿ ಹಾಕಿಕೊಳ್ಳಬಹುದು. ಕಚೇರಿಗೆ ತಮ್ಮ ವಿವರಗಳನ್ನು ಕಳಿಸಬಹುದು. ನೋಂದಣಿ ಅಧಿಕಾರಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತರ ತಮಗೆ ಬೇಕದ ದಿನಾಂಕವನ್ನು ತಾವೇ ಆಯ್ಕೆ ಮಾಡಿಕೊಂಡು ಅಂದು ಕೇವಲ ಹೆಬ್ಬಟ್ಟಿನ ಗುರುತು, ಫೋಟೋ, ಸಹಿಗಾಗಿ ಮಾತ್ರ ಉಪ ನೋಂದಣಿ ಕಚೇರಿಗೆ ಬರಬೇಕು.
ಎಲ್ಲಾ ವಿವರಗಳನ್ನು ತಾವೇ ನೀಡಿರುವುದರಿಂದ ಕೆಲವೇ ನಿಮಿಷದಲ್ಲಿ ತಮ್ಮ ನೋಂದಣಿ ಕಾರ್ಯ ಮುಗಿಯುತ್ತದೆ. ಸಮಯ ಮತ್ತು ಪಾರದರ್ಶಕವಾಗಿ ನೋಂದಣಿ ಕಾರ್ಯ ಮುಗಿಯುವುದರಿಂದ ಈ ತಂತ್ರಾಂಶ ಜನಸ್ನೇಹಿ ತಂತ್ರಾಂಶವಾಗಿದ್ದರಿಂದ ಸಾರ್ವಜನಿಕರು ಇದ ಸದುಪಯೋಗ ಪಡೆದುಕೊಳ್ಳಬಹುದು.
ಉಪನೋಂದಣಿ ಕಚೇರಿಯಲ್ಲಿ ನಗದು ವ್ಯವಹಾರ ಇರುವುದಿಲ್ಲ. ಸರ್ಕಾರದ ಶುಲ್ಕವನ್ನು ತಮ್ಮ ಖಾತೆಯ ಮೂಲಕವೇ ನೋಂದಣಿ ಕಚೇರಿ ಖಾತೆಗೆ ನೇರವಾಗಿ ಯುಪಿಎ ಅಥವಾ ಇತರ ಸೌಲಭ್ಯಗಳ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು. ಬ್ಯಾಂಕ್ ನವರೇ ನಮಗೆ ಚಲನ್ ಕಳಿಸುತ್ತಾರೆ. ಇದರಿಂದ ನಗದುರಹಿತ ವಹಿವಾಟು ಆಗಲಿದೆ.
ಇದನ್ನೂ ಓದಿ : ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಈ ಬಗ್ಗೆ ಸಾರ್ವಜನಿಕರಿಗೆ ಯಾವ ರೀತಿ ತಂತ್ರಾಂಶವನ್ನು ಬಳಕೆ ಹೇಗೆ ಮಾಡಬೇಕೆಂಬ ಮಾಹಿತಿಯನ್ನು ಯೂ ಟೂಬ್ ಚಾನೆಲ್ ನಲ್ಲಿ ಹಂತ ಹಂತವಾಗಿ ಉಪಯೋಗಿಸುವ ವೀಡಿಯೋಗಳನ್ನು ಹಾಕಲಾಗಿದೆ. ಇದರ ಜೊತೆಗೆ ಕಾಲ್ ಸೆಂಟರ್ ಕೂಡ ತೆರೆಯಲಾಗಿದೆ. ಸಾರ್ವಜನಿಕರು ಕರೆ ಮಾಡಿ ವಿವರಗಳನ್ನು ಪಡೆದುಕೊಳ್ಳಬಹುದು.
ಕಾವೇರಿ 2.0 ಬಳಕೆಯಿಂದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅಧಿಕಾರಿಗಳ, ಸಿಬ್ಬಂದಿಯ ಕಾರ್ಯವೈಖರಿಯೂ ಸಂಪೂರ್ಣ ಬದಲಾಗಲಿದೆ. ಜೊತೆಗೆ ಆಸ್ತಿ ನೋಂದಣಿ ಪ್ರಕ್ರಿಯೆ ಸರಳ ಮತ್ತು ಸುಸೂತ್ರವಾಗಲಿದೆ. ನಕಲಿ ದಾಖಲೆಗಳ ಮೂಲಕ ವಂಚನೆ ಮಾಡುವ ಮತ್ತಿತರ ಅಕ್ರಮಗಳನ್ನುತಡೆಯುವ ಉದ್ದೇಶದಿಂದ ಈ ಹೊಸ ತಂತ್ರಾಂಶವನ್ನು ಜಾರಿಗೆ ತರಲಾಗಿದೆ.
Register your property in Kaveri 2.0 ನಗದು ರೂಪದಲ್ಲಿ ಶುಲ್ಕ ಪಾವತಿ ಇಲ್ಲ
ಎಲ್ಲಿಯೂ ನಗದು ರೂಪದಲ್ಲಿ ಶುಲ್ಕ ಪಾವತಿಗೆ ಅವಕಾಶವಿಲ್ಲ. ಆನ್ಲೈನ್ ಪೇಮೆಂಟ್, ಯುಪಿಐ, ಕ್ರೆಡಿಟ್, ಡೆಬಿಟ್ ಕಾರ್ಡ್, ಚೆಕ್ ಡಿಡಿ ಮೂಲಕವೇ ಶುಲ್ಕ ಪಾವತಿಸಬೇಕು.
ಕಾವೇರಿ 2.0 ತಂತ್ರಾಂಶದಲ್ಲಿ ಆಸ್ತಿಯ ಸರ್ವೆ ನಂಬರ್ ದಾಖಲಿಸುತ್ತಿದ್ದಂತೆ ಆಸ್ತಿಯ ನಿಖರ ಮಾಹಿತಿ ಕ್ಷಣಾರ್ಧದಲ್ಲಿ ಪತ್ತೆಯಾಗಲಿದೆ. ಭೂ ದಾಖಲೆಗೆ ಸಂಬಂಧಿಸಿದ ಎಲ್ಲಾ ತಂತ್ರಾಂಶಗಳೊಂದಿಗೆ ಜೋಡಣೆಯಾಗಿದೆ. ಹೀಗಾಗಿ ಆಸ್ತಿಯ ಆ ಕ್ಷಣದ ಸ್ಥಿತಿಗತಿಯ ಮಾಹಿತಿ ತಕ್ಷಣ ಗೊತ್ತಾಗಲಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಕೊನೆಯ ಕ್ಷಣದವರೆಗೂ ಆಸ್ತಿಯ ಸ್ಥಿತಿಗತಿಯನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುವ ವ್ಯವಸ್ಥೆ ಇದಾಗಿದೆ.