Information of pahani and akarband ಜಮೀನಿಗೆ ಒಂದು ವಿಸ್ತೀರ್ಣ ಇದ್ದೇ ಇರುತ್ತದೆ. ವಿಸ್ತೀರ್ಣವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಆಕಾರಬಂದ ಸಹ ಒಂದಾಗಿದೆ. ಅಂದರೆ ಆಕಾರಬಂದ್ ಎಂದರೇನು…. ಆಕಾರಬಂದ ಮತ್ತು ಪಹಣಿಗಿರುವ ವ್ಯತ್ಯವಾಸವೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Information of pahani and akarband ಆಕಾರಬಂದ ಎಂದರೇನು?
ಯಾವುದೇ ಜಮೀನಿನ ಅಂತಿಮ ವಿಸ್ತೀರ್ಣವನ್ನೇ ಆಕಾರಬಂದ ಎನ್ನುತ್ತೇವೆ. ಆಕಾರಬಂದನಲ್ಲಿ 29 ಕಾಲಂಗಳಿರುತ್ತವೆ. ಮೊದಲನೇ ಕಾಲ ಸರ್ವೆನಂಬರ್ 3 ರಲ್ಲಿ ಹಿಸ್ಸಾ, 4 ರಲ್ಲಿ ಜಮೀನನ ವಿಸ್ತೀರ್ಮ, 5 ಖರಾಬು, 6 ಸಾಗುವಳಿ ಮತ್ತು ವಿಸ್ತೀರ್ಣ ಇರುತ್ತದೆ.
ಜಮೀನಿಗೆ ಪಹಣಿ ಅಂತಿಮ ದಾಖಲೆ ಅಲ್ಲ, ಹೊಲಕ್ಕೆ ಪಹಣಿ ಅಂತಿಮ ಡಾಕ್ಯುಮೆಂಟ್ ಅಲ್ಲ, ಜಮೀನಿಗೆ ಆಕಾರಬಂದ ಫೈನಲ್ ಡಾಕುಮೆಂಟ್ ಆಗಿರುತ್ತದೆ. ಪಹಣಿಯನ್ನು ಆಕಾರಬಂದ ಇದ್ದಂತೆ ತಿದ್ದುಪಡಿ ಮಾಡಬಹುದು.
ಇದನ್ನೂ ಓದಿ ನಿಮ್ಮ ಹೆಸರಿಗೆ ಯಂತ್ರೋಪಕರಣ ಪಡೆಯಲಾಗಿದೆಯೇ? ಚೆಕ್ ಮಾಡಿ
ಆಕಾರಬಂದ ಸಹ ತಿದ್ದುಪಡಿ ಮಾಡಬಹುದು. ಯಾವಾಗ ಎಂದರೆ ಜಮೀನು ಪಹಣಿಯಲ್ಲಿ ಜಾಸ್ತಿ ಇರುತ್ತದೆ. ಆದರೆ ಸ್ಥಳದಲ್ಲಿ ಜಮೀನು ಅಷ್ಟು ಇರುವುದಿಲ್ಲ. ಜಮೀನು ಅನುಭವ ಪ್ರಕಾರ ಆಕಾರಬಂದ ತಿದ್ದುಪಡಿ ಮಾಡಬಹುದು.
Information of pahani ಪಹಣಿ ಎಂದರನು?
ಜಮೀನು ಯಾರ ಹೆಸರ ಮೇಲೆ ಇದೆ ಎಂಬುದನ್ನು ತಿಳಿಸುವ ದಾಖಲೆ ಪತ್ರವೇ ಪಹಣಿ. ಜಮೀನಿನಲ್ಲಿ ಯಾವ ಬೆಳೆ ಬೆಳೆಯಲಾಗಿದೆ. ವರ್ಗಾವಣೆ ಹೇಗೆ ಆಗಿದೆ ಎಂಬದು ತಿಳಿಸುತತ್ದೆ. ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಎಂಬುದನ್ನು ತಿಳಿಸುತ್ತದೆ. ಪಹಣಿಯಲ್ಲಿ 16 ಕಾಲಂಗಳಿರುತ್ತವೆ. ಕಾಲಂ 3 ರಲ್ಲಿ ಜಮೀನು ಒಟ್ಟು ವಿಸ್ತೀರ್ಣ ಇರುತ್ತದೆ. ಕಾಲಂ 9 ರಲ್ಲಿ ಖರಾಬು ಕಳೆದ ಮೇಲೆ ಉಳಿದ ಜಮೀನು ಇರುತ್ತದೆ. ಹಿಸ್ಸಾ, ಊರು. ತಾಲೂಕು, ಜಿಲ್ಲೆಯ ಹೆಸರು ಇರುತ್ತದೆ.
what is Tippani ಟಿಪ್ಪಣಿ ಎಂದರೇನು?
ಮೈಸೂರು ಸಂಸ್ಥಾನ ಮತ್ತು ನಿಜಾಮರ ಕಾಲದಲ್ಲಿ ಭೂಮಿ ಅಳತೆ ಮಾಡಿರುವುದನ್ನು ಮೂಲ ಸರ್ವೆ ಎಂದು ಕರೆಯುತ್ತಾರೆ. ಸ್ವಾತಂತ್ರ್ಯ ಬಂದನಂತರ ಭೂ ಮಾಪನ ಮಾಡಿರುವುದನ್ನು ಹಿಸ್ಸಾ ಸರ್ವೆ ಎಂದು ಕರೆಯುವರು.
ಜಮೀನು ಮೂಲ ಸರ್ವೆ ಸಮಯದಲ್ಲಿ ಟಿಪ್ಪಣಿ ರಚಿಸಲು ಆಗಲಾರದ ಸಂದರ್ಭದಲ್ಲಿ ಹಿಸ್ಸಾ ಸರ್ವೆ ಕಾಲಂನಲ್ಲಿ ಟಿಪ್ಪಣಿ ರಚಿಸುತ್ತಾರೆ. ರಚಿಸಿದ ಪ್ರತಿಯೊಂದು ಹಿಸ್ಸಾ ಸರ್ವೇಕಾಲದಲ್ಲಿ ರಚಿಸಿದ ಪ್ರತಿಯೊಂದು ಜಮೀನಿನ ನಕ್ಷೆಯೇ ಟಿಪ್ಪಣಿ ಎನ್ನುವರು.
ಇದನ್ನೂ ಓದಿ: ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ಹೋಗುವ ದಾರಿ, ಕೆರೆಕಟ್ಟೆ, ನಿಮ್ಮ ಸರ್ವೆನಂಬರ್ ನೋಡಬೇಕೆ… ಇಲ್ಲಿದೆ ಮಾಹಿತಿ
ಎಲ್ಲಾ ಜಮೀನಿನ ಟಿಪ್ಪಣಿಗಳು ತಹಶೀಲ್ದಾರ್ ಕಚೇರಿಯಲ್ಲಿ ಭೂ ಮಾಪನ ಇಲಾಖೆಯಲ್ಲಿ 10 ರುಪಾಯಿ ಶುಲ್ಕ ಸಲ್ಲಿಸಿದ ನಂತರ 7 ದಿನಗಳ ನಂತರ ಟಿಪ್ಪಣಿ ಕೊಡುತ್ತಾರೆ.ಟಿಪ್ಪಣಿ ಇಲ್ಲದಿದ್ದರೆ 11 ಇ ಅಥವಾ ಪೋಡಿಗೆ ಅರ್ಜಿ ಸಲ್ಲಿಸಿ ಹೊಸ ಟಿಪ್ಪಣಿ ಮಾಡಿಸಬಹುದು. ಸರ್ಕಾರ ಭೂ ಮಾಪಕರು ಹೊಸ ಟಿಪ್ಪಣಿ ರಚಿಸಿ ಕೊಡುತ್ತಾರೆ