ರೈತರು ಈಗ ರಸಗೊಬ್ಬರಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಿಲ್ಲ. ಗೊಬ್ಬರದ ಚೀಲದ ಬದಲಾಗಿ ಈಗ 240 ರೂಪಾಯಿಗೆ ಅರ್ಧ ಲೀಟರ್ ನ್ಯಾನೋ ಯೂರಿಯಾ (Nano urea fertilizer) ಮಾರುಕಟ್ಟೆಗೆ ಬರುತ್ತಿದೆ. ಹೌದು, ಜೂನ್ 15ಕ್ಕೆ ನ್ಯಾನೋ ಯೂರಿಯಾ ಮಾರುಕಟ್ಟೆಗೆ ಬರಲಿದೆ.
ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಪಡಿಸಿದ ನ್ಯಾನೋ-ಯೂರಿಯಾ ರಸಗೊಬ್ಬರವು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
Nano urea fertilizer ನ್ಯಾನೋ ಯೂರಿ ಬದಲಿಗೆ ಈಗ ಅರ್ಧ ಲೀಟರ್ ನ್ಯಾನೋ ರಸಗೊಬ್ಬರ ಇದ ಬೆಲೆ
ಅವರು ನ್ಯಾನೋ ಯೂರಿಯಾ ಉಪಯೋಗದ ಬಗ್ಗೆ ಶನಿವಾರ ಇಫ್ಕೋ ಸಂಸ್ಥೆ ಏರ್ಪಡಿಸಿದ್ದ ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿ, 240 ರೂಪಾಯಿ ಬೆಲೆಯಲ್ಲಿ ಅರ್ಧ ಲೀಟರ್ ನ್ಯಾನೋ ಯೂರಿಯಾ 45 ಕೆಜಿ ಯೂರಿಯಾಗಿ ಸಮನಾಗಿದ್ದು, ಆತ್ಮ ನಿರ್ಭರ್ ಭಾರತ ಯೋಜನೆಯಡಿ ರೂಪುಗೊಂಡ ನ್ಯಾನೋ ಯೂರಿಯಾ ಜೂನ್ 15 ರಿಂದ ಅನ್ನದಾತರಿಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದರು. ಇದು ಪರಿಸರ ಸ್ನೇಹಿಯಾಗಿದ್ದು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ ನಿಮ್ಮ ಜಮೀನಿಗೆ ಮುಟೇಶನ್ ಆಗಿದೆಯೇ? ಇಲ್ಲೇ ಚೆಕ್ ಮಾಡಿ
ಅರ್ಧ ಲೀಟರ್ ನ ಈ ಒಂದು ಬಾಟಲ್ ದ್ರವರೂಪಪದ ಯೂರಿಯಾ ಒಂದು ಚೀಲ ಯೂರಿಯಾ ಗೊಬ್ಬರದಷ್ಟೇ ಸಮನಾಗಿ ಟಾನಿಕ್ ರೂಪದಲ್ಲಿ ಕೆಲಸ ಮಾಡಲಿದೆ. ಬೆಳೆಗಳ ಉತ್ತಮ ಬೆಳವಣಿಗೆ ಹಾಗೂ ಉತ್ಪಾದಕತೆ ಹೆಚ್ಚಿಸಲೆಂದು ಕರ್ನಾಟಕದಲ್ಲಿ ವಾರ್ಷಿಕ 14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬಳಕೆಯಾಗುತ್ತಿದ್ದು, ನ್ಯಾನೋ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ದ್ರಾವಣ ರೂಪದ ಯೂರಿಯಾ ರಸಗೊಬ್ಬರವು 5 ಲಕ್ಷ ಮೆಟ್ರಿಕ್ ಟನ್ ಬಳಕೆ ತಗ್ಗಿಸಲಿದೆ ಎಂದರು.
1 ಚೀಲ (50) ಕೆಜಿ ಯೂರಿಯಾಗೆ ಅರ್ಧ ಲೀಟರ್ ನ್ಯಾನೋ ಗೊಬ್ಬರ ಸಮನಾಗಿದ್ದು, ಬೆಳೆ ನಾಟಿಯಾಗಿ 30 ದಿನಗಳಾದ ಬಳಿಕೆ 1 ಲೀಟರ್ ನೀರಿನಲ್ಲಿ 4 ಮಿಲಿ ಲೀಟರ್ ನ್ಯಾನೋ ಗೊಬ್ಬರ ದ್ರಾವಣ ಸಿಂಪಡಿಸಬೇಕು. 15 ದಿನಗಳ ನಂತರ ಮತ್ತೊಮ್ಮೆ ಸಿಂಪಡಿಸಿದರೆ ಸಾಕು, ಅಗತ್ಯವಿರುವ ಪೋಷಕಾಂಶಗಳು ದೊರೆತು ನಿರೀಕ್ಷಿತ ಇಳುವರಿ ರೈತರ ಕೈಗೆ ದಕ್ಕಲಿದೆ. ಕೊಂಡೊಯ್ಯುವುದು ಸುಲಭ, ಖರ್ಚು ಕಡಿಮೆ, ಬಹುಪಯೋಗಿ ಹಾಗೂ ಅಧಿಕ ಆದಾಯವನ್ನು ನ್ಯಾನೋ ಗೊಬ್ಬರ ತಂದುಕೊಡಲಿದೆ ಎಂದರು.
ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಶೇ 60 ರಷ್ಟು ಪ್ರೋತ್ಸಾಹಧನದಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ ಪಟ್ಟಿ ಇಲ್ಲಿದೆ
ಇಫ್ಕೋ ನಿರ್ದೇಶಕ (ಮಾರುಕಟ್ಟೆ) ಯೋಗೇಂದ್ರ ಕುಮಾರ ಮಾತನಾಡಿ, ಆರಂಭಿಕವಾಗಿ 28 ಕೋಟಿ ಬಾಟಲಿ (500 ಎಂಎಲ್) ನ್ಯಾನೋ ಯೂರಿಯಾ ಉತ್ಪಾದಿಸಲಾಗುತ್ತಿದೆ. ಇದರ ಬೆಲೆ ಬಾಟಲಿಗೆ 240 ರೂಪಾಯಿ ಇದೆ. ಯಾವುದೇ ಕಾಗದಪತ್ರವಿಲ್ಲದೆ ಯಾವ ರೈತರು ಬೇಕಾದರೂ ಖರೀದಿಸಬಹುದು ಎಂದು ತಿಳಿಸಿದ್ದಾರೆ.
ನ್ಯಾನೋ ಯೂರಿಯಾ ಖರೀದಿಸುವ ಮುನ್ನು ಬಳಕೆ ಹೇಗೆ ಮಾಡಬೇಕೆಂಬುದರ ಕುರಿತು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು.