Farmers land Tonch Map : ಬಹುತೇಕ ರೈತರಿಗೆ ಜಮೀನಿನ ಟೊಂಚ್ ನಕ್ಷೆ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೂ ಕೆಲವು ರೈತರಿಗೆ ಇದರ ಬಗ್ಗೆ ಕೇಳಿರುತ್ತಾರೆ. ಇದೊಂದು ನಿರ್ಧಿಷ್ಟ ಸರ್ವೆ ನಂಬರ್ ನ ಜಮೀನಿನ ಗಡಿ ಮತ್ತು ಆಕಾರವನ್ನು ಗುರುತಿಸುವ ಅಧಿಕೃತ ನಕ್ಷೆಯಾಗಿದೆ. ಬ್ರಿಟೀಷರ ಕಾಲದ ಕಂದಾಯ ವ್ಯವಸ್ಥೆಯಿಂದ ಬಂದ ಈ ಪದವು ಜಮೀನಿನ ಮೂಲ ಸರ್ವೆ ರೇಖಾಚಿತ್ರ ಅಥವಾ ಗಡಿ ನಕ್ಷೆಯನ್ನು ಸೂಚಿಸುತ್ತದೆ.
ಟೊಂಚ್ ನಕ್ಷೆಯ ಉಪಯೋಗಗಳು
ನಿಮ್ಮ ಜಮೀನಿನ ನಿಖರವಾದ ಆಕಾರ್ ಮತ್ತು ಅದರ ನಾಲ್ಕು ಕಡೆ ಇರುವ ಗಡಿ ರೇಖೆಗಳನ್ನು ಇದು ತೋರಿಸುತ್ತದೆ.
ಪಕ್ಕದ ಜಮೀನಿನವರು ನಿಮ್ಮ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಈ ನಕ್ಷೆಯ ಸಹಾಯದಿಂದ ಹದ್ದುಬಸ್ತು (ಗಡಿ ಗುರುತು) ಮಾಡಬಹುದು.
ಹೊಸದಾಗಿ ಜಮೀನು ಖರೀದಿಸುವಾಗ ಮೋಸ ಹೋಗದಂತೆ ಮೂಲಕ ಗಡಿಯನ್ನು ಪರಿಶೀಲಿಸಲು ಇದು ಅತ್ಯಗತ್ಯವಾಗಿದೆ.
ಅಣ್ಣ ತಮ್ಮಂದಿರ ನಡುವೆ ಅಥವಾ ಪಾಲುದಾರರ ನಡುವೆ ಜಮೀನನ್ನು ಭಾಗ ಮಾಡುವಾಗ (ಪೋಡಿ ಅಥವಾ ದುರಸ್ತಿ) ಟೊಂಚ್ ನಕ್ಷೆ ಮುಖ್ಯವಾದ ದಾಖಲೆಯಾಗಿರುತ್ತದೆ.
Farmers land Tonch Map ಟೊಂಚ್ ದಾಖಲೆ ಪಡೆಯುವುದು ಹೇಗೆ ?
ಟೊಂಚ್ ದಾಖಲೆಯನ್ನು ರೈತರು ಕರ್ನಟಕ ಸರ್ಕರಾದ ಭೂಮಿ ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ
https://bhoomojini.karnataka.gov.in/Service27/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ( ಮೋಜಿನಿ ಆನ್ಲೈನ್ ) ಸ್ವಾವಲಂಬಿ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ನಾಗರಿಕರಿಗೆ ಸೂಚನೆಗಳು, ಸಹಾಯಕ್ಕಾಗಿ ವೀಡಿಯೋವನ್ನು ವೀಕ್ಷಿಸಿ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಬಳಕೆದಾರರ ಮಾರ್ಗದರ್ಶಿಯನ್ನು ನೋಡಿ, ಅರ್ಜಿದಾರರು ಲಾಗಿನ್ ಆದ ನಂತರ ಸ್ವಾವಲಂಬಿ ಸೈಟ್ ಅಥವಾ ಸರ್ವೆ ಇಲಾಖೆಯ ಅಳತೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಗಳು ಕಾಣಿಸುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದರ ಮಾಹಿತಿ ಬೇಕಾದರೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಸ್ಟೆಪ್ ಬೈ ಸ್ಟೆಪ್ ಏನೇನು ಮಾಹಿತಿ ತುಂಬಬೇಕು ಎಂಬುದರ ಕುರಿತು ಮಾಹಿತಿ ನೀಡಲಾಗುತ್ತದೆ. ಆ ಆಧಾರದ ಮೇಲೆ ನೀವು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ ಮಾನಧನ್ ಯೋಜನೆಯಡಿ ರೈತರಿಗೆ ಸಿಗಲಿದೆ ತಿಂಗಳಿಗೆ 3 ಸಾವಿರ
ಅರ್ಜಿ ಸಲ್ಲಿಸಲು ಮೊದಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಇದಾದ ನಂತರ ನೀವು ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಬೇಕು. ಇದಾದ ನಂತರ ಅಪ್ಲಿಕೇಶನ್ ಫಾರ್ಮ್ ಅಥವಾ ಸ್ಕೆಚ್ ವೀಕ್ಷಣೆ ಅಥವಾ ಡೌನ್ಲೋಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ನಿಮ್ಮ ಊರು ಹಾಗೂ ನಿಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು ನಂತರ ಶುಲ್ಕ ಪಾವತಿಸಿದ ನಂತರ ನಿಮ್ಮ ಜಮೀನಿನ ಟೋಂಚ್ ಸ್ಕೆಚ್ ನಕ್ಷೆಯನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಆಫ್ಲೈನ್ ಮೂಲಕ ಪಡೆಯುವುದು ಹೇಗೆ ?
ನಿಮಗೆ ಆನ್ಲೈನ್ ಮೂಲಕ ಟೊಂಚ್ ದಾಖಲೆ ಪಡೆಯಲು ಸಮಸ್ಯೆಯಾಗುತ್ತಿದ್ದರೆ ನೀವು ನೇರವಾಗಿ ನಾಡಕಚೇರಿ ಅಥವಾ ನೆಮ್ಮದಿ ಕೇಂದ್ರದ ಮೂಲಕ ಪಡೆಯಬಹುದು. ನಿಮ್ಮ ವ್ಯಾಪ್ತಿಯ ನಾಡಕಚೇರಿ, ತಹಸೀಲ್ದಾರ್ ಕಚೇರಿ ಅಥವು ಬೆಂಗಳೂರು ಒನ್ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಜಮೀನಿನ ಟೊಂಚ್ ನಕ್ಷೆಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ನಿಮ್ಮ ಜಮೀನಿನ ಪಹಣಿ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಬೇಕು. ಶುಲ್ಕ ಪಾವತಿಸಿದ ನಂತರ ಅಧಿಕೃತ ಮುದ್ರೆ ಹಾಗೂ ಸಹಿಯಿರುವ ಟೊಂಚ್ ನಕ್ಷೆಯನ್ನು ನಿಮಗೆ ನೀಡಲಾಗುವುದು.





