SSLC exam Blue Print : ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ಅದೇನಪಾ ಅಂದರೆ. ರಾಜ್ಯಸರ್ಕಾರವು ಎಲ್ಲಾ ವಿಷಯಗಳ ಬ್ಲೂ ಪ್ರಿಂಟ್ ಬಿಡುಗಡೆ ಮಾಡಿದೆ. ಅಂದರೆ ವಾರ್ಷಿಕ ಪರೀಕ್ಷೆಯಲ್ಲಿ ಯಾವ ಪಾಠದಿಂದ ಯಾವ ಪ್ರಶ್ನೆಗಳು ಬರುತ್ತದೆ. ಯಾವ ಪಾಠದಿಂದ ಸಂದರ್ಭದ ಪ್ರಶ್ನೋತ್ತರಗಳು ಬರುತ್ತವೆ. ಯಾವ ಪಾಠದಿಂದ ಎಂಟತ್ತು ವಾಕ್ಯದಲ್ಲಿ ಉತ್ತರಿಸಿ ಸೇರಿದಂತೆ 80 ಅಂಕಗಳು ಯಾವ ಯಾವ ಪಾಠದಿಂದ ಬರುತ್ತವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದರೊಂದಿಗೆ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಇಲ್ಲಿ ನೀಡಲಾಗಿದೆ. ಈ ಆಧಾರದ ಮೇಲೆ ನೀವು ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು.
SSLC exam Blue Print ಒಂದು ವಾಕ್ಯದಲ್ಲಿ ಉತ್ತರ ಯಾವ ಯಾವ ಪಾಠ ಪ್ರಶ್ನೆ ಬರುತ್ತವೆ.
ಒಂದು ವಾಕ್ಯದಲ್ಲಿ 1 ಅಸಿ ಮಸಿ, ಕೃಷಿ, ಗಾನ ಯೋಗಿ ಪಂಡಿತ ಪುಟ್ಟರಾಜಗವಾಯಿ, ಹಕ್ಕಿ ಗೂಡುಗಳ ನಿಗೂಢ ಜಗತ್ತು, ಗಂಗೆಯಲ್ಲಿ ದೀಪಮಾಲೆ, ನನ್ನ ಗೋಪಾಲ, ಸೌಜನ್ಯ, ಸವಿಚೈತ್ರ, ಸದ್ದು ಮಾಡದಿರು, ಮೂಡಲ್ ಕುಣಿಗಲ್ ಕೆರೆ, ವಚನಗಳು ಹಾಗೂ ನಿಟ್ಟೋಟದಲ್ಲಿ ಹಾಯ್ದನು ಬಿಟ್ಟ ಮಂಡೆಯಲ್ಲಿ ಪಾಠದಿಂದಲೇ ಬರುತ್ತವೆ ಈ ಪಾಠದ ಒಂದು ವಾಕ್ಯದಲ್ಲಿ ಪ್ರಶ್ನೆಗಳನ್ನು ಓದಿಕೊಂಡರೆ ಸಾಕು ಆರಾಮವಾಗಿ ನೀವು ಉತ್ತರ ಬರೆಯಬಹುದು. .
ಯಾವ ಯಾವ ಫಾಠದಿಂದ ಮೂರು ನಾಲ್ಕು ವಾಕ್ಯದಲ್ಲಿ ಪ್ರಶ್ನೆಗಳು ಬರುತ್ತವೆ ?
ಅಸಿ ಮಸಿ, ಕೃಷಿ, ಹಕ್ಕಿ ಗೂಡುಗಳ ನಿಗೂಢ ಜಗತ್ತು, ಗಂಗೆಯಲ್ಲಿ ದೀಪಮಾಲೆ, ಸೌಜನ್ಯ, ಮೂಡಲ್ ಕುಣಿಗಲ್ ಕೆರೆ, ವಚನಗಳು, ಕಳ್ಳರ ಗುರು ಅಥವಾ ಪಂಪಾತೀರದ ಪುಷ್ಪಗಳು, ಹೊಂಗೆ ಬೇವುಗಳ ಹಾಡು ಅಥವಾ ಕನ್ನಡ ನಾಡು ನುಡಿ ಜನ ಪಾಠದಿಂದ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿರಿ ಪ್ರಶ್ನೆಗಳು ಬರುತ್ತವೆ.
ಯಾವ ಪಾಠದಿಂದ ಸಂದರ್ಭ ಸ್ವಾರಸ್ಯ ಪ್ರಶ್ನೆಗಳು ಬರುತ್ತವೆ.?
ಒಣ ಮರದ ಗಿಳಿ, ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ, ಕಾಫೀ ಕಪ್, ನನ್ನ ಗೋಪಾಲ, ಸವಿಚೈತ್ರ, ಸದ್ದು ಮಾಡದಿರು, ನಿಟ್ಟೋಟದಲ್ಲಿ ಹಾಯ್ದನು ಬಿಟ್ಟಮಂಡೆಯಲಿ ಪದ್ಯದಿಂದ ಪ್ರಶ್ನೆಗಳಉ ಬರುತ್ತವೆ.
ಯಾವ ಪಾಠದಿಂದ ಪದ್ಯ ಬರುತ್ತದೆ.?
ಗುರಿ ಹಾಗೂ ಬೋಧಿ ವೃಕ್ಷದ ಹಾಡು ಪದ್ಯದಿಂದ ಪದ್ಯ ಬರುತ್ತದೆ.
ಯಾವ ಪಾಠದಿಂದ ಎಂಟು ಹತ್ತು ವಾಕ್ಯದಲ್ಲಿ ಪ್ರಶ್ನೆ ಬರುತ್ತವೆ ?
ಬೋಧಿ ವೃಕ್ಷದ ಹಾಡು ಅಥವಾ ಗುರಿ ಪಾಠದಿಂದ ಎಂಟು ಹತ್ತು ವಾಕ್ಯದಲ್ಲಿ ಪ್ರಶ್ನೆಗಳು ಬರುತ್ತವೆ.
ನಿಮಗೆ ಬ್ಲೂ ಪ್ರಿಂಟ್ ಬೇಕಾ
ಎಸ್.ಎಸ್ಎಲ್.ಸಿ ಆಂಗ್ಲಮಾಧ್ಯಮದ ಕನ್ನಡ ದ್ವಿತೀಯ ಭಾಷೆಯಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ಬ್ಲೂ ಪ್ರಿಂಟ್ ಪಡೆಯಲು ಈ
https://kseeb.karnataka.gov.in/KOSMIG/
ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ 2026-27ನೇ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯ ವಿಷಯವಾರು ನೀಲನಕಾಶೆ ಮುಂದುಗಡೆ Click here ಮೇಲೆ ಕ್ಲಿಕ್ ಮಾಡಬೇಕು. ಆಗ ಎಲ್ಲಾ ವಿಷಯಗಳ ಬ್ಲೂ ಪ್ರಿಂಟ್ ಅಲ್ಲಿ ಕಾಣಿಸುತ್ತದೆ. ನೀವು ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಯಾಗಿದ್ದರೆ ಕ್ರಮ ಸಂಖ್ಯೆ 11 Second Language Kannada 33 K ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬ್ಲೂ ಪ್ರಿಂಟ್ ಓಪನ್ ಆಗುತ್ತದೆ. ಆ ಆಧಾರದ ಮೇಲೆ ನೀವು ಓದಿಕೊಳ್ಳಬಹುದು.
ಮಾದರಿ ಪ್ರಶ್ನೋತ್ತರಗಳು
ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಪ್ರಿಪೇಟರಿ ಪರೀಕ್ಷೆಯ ಪ್ರಶ್ನೋತ್ತರಗಳೊಂದಿಗೆ ಮಾದರಿ ಉತ್ತರ ಪತ್ರಿಕೆಗಳನ್ನು ಸಹ ಇಲ್ಲಿ ನೀಡಲಾಗಿದೆ.
ಮಾದರಿ ಉತ್ತರ ನೋಡಲು ಈ
https://kseeb.karnataka.gov.in/KOSMIG/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ 2026-27ನೇ ಸಾಲಿನ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪೇಜ್ ತೆರೆದುಕೊಳ್ಳುತ್ತದೆ. ಅದರ ಕೆಳಗಡೆ ನಿಮಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕಾಣಿಸುತ್ತವೆ.
ಇದನ್ನೂ ಓದಿ : ಗ್ರಾಮೀಣ ಆಸ್ತಿಗಳ ಫಾರ್ಮ್ 9 ಮತ್ತು 11 ನೋಡುವುದು ಹೇಗೆ? ಇಲ್ಲಿದೆ ಮಾಹಿತಿ
6ನೇ ಕ್ರಮಾಂಕದಲ್ಲಿ 2026-27ರ ಎಸ್ಎಸ್ಎಲ್ಸಿ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಮಾದರಿ ಉತ್ತರಗಳು ಕಾಣಿಸುತ್ತದೆ. ಅದರ ಎದುರಿರುವ click here ಮೇಲೆ ಕ್ಲಿಕ್ ಮಾಡಬೇಕು. ಆಂಗ್ಲ ಮಾದ್ಯಮದವರಿಗೆ Second language ಮುಂದುಗಡೆ ಮೂರು ಮಾದರಿ ಪ್ರಶ್ನೋತ್ತರಗಳು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮಾದರಿ ಪ್ರಶ್ನೋತ್ತರ ಪತ್ರಿಕೆ ತೆರೆದುಕೊಳ್ಳುತ್ತದೆ. ಅದನ್ನು ನೀವು ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆಯಬಹುದು.





