ಬರ ಪರಿಹಾರ ಜಮೆಗೆ ರೈತರ ಎಫ್ಐಡಿ ಕಡ್ಡಾಯ ನಿಮ್ಮ ಎಫ್ಐಡಿ ಇಲ್ಲಿ ಚೆಕ್ ಮಾಡಿ

Written by Ramlinganna

Published on:

Farmers FID mandatory : 2026-27ನೇ ಸಾಲಿನ ಬರಗಾಲದ ಹಿನ್ನೆಲೆ ಸರ್ಕಾರದಿಂದ ರೈತರಿಗೆ ವಿತರಿಸಲಾಗುವ ಬರ ಪರಿಹಾರ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಕ್ರಮಕೈಗೊಳ್ಳಲಾಗಿದ್ದು, ರೈತರು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತ ಗುರುತಿನ ಸಂಖ್ಯೆ (ಎಫ್.ಐ.ಡಿ) ನೋಂದಣಿ ಮಾಡಿಸಿಕೊಳ್ಳಬೇಕು.

ಫ್ರೂಟ್ಸ್ ದತ್ತಾಂಶದೊಂದಿಗೆ ಸಂಯೋಜಿಸಲಾದ ಪರಿಹಾರ ಅಪ್ಲಿಕೇಶನ್ ಮೂಲಕ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ.

ಆದ್ದರಿಂದ ಎಫ್ಐಡಿ ಸಂಖ್ಯೆ ಹೊಂದಿರುವ ರೈತರಿಗೆ ಮಾತ್ರ ಬರ ಪರಿಹಾರದ ಹಮ ಬಿಡುಗಡೆ ಮಾಡು ಕ್ರಮ ಕೈಗೊಳ್ಳಲಾಗಿದೆ. ಎಫ್ಐಡಿ ಸಂಖ್ಯೆ ಹೊಂದಿರುವ ರೈತರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ ಕೂಡಲೇ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಎಫ್ಐಡಿ ಹೊಂದಿರು ರೈತರ ವಿವರಗಳ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ.

ಈ ಪಟ್ಟಿಯಲ್ಲಿ ಹೆಸರು ಇರುವ ಹಾಗೂ ಇದುವರೆಗೆ ಎಫ್ಐಡಿ ನೋಂದಮಿ ಮಾಡಿಸದೆ ಇರುವ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನೋಂದಣಿಗಾಗಿ ರೈತರು ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಪ್ರತಿ ಹಾಗೂ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಅಗತ್ಯ ದಾಖಲೆಗಳಾಗಿ ಸಲ್ಲಿಸಬೇಕು. ಹೊಸದಾಗಿ ಎಫ್ಐಡಿ ಸಂಖ್ಯೆ  ಸೃಜಿಸಿಕೊಳ್ಳುವುದರ ಜೊತೆಗೆ, ಈಗಾಗಲೇ ಎಫ್ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್ ಗಳು ಎಫ್ಐಡಿಗೆ ಜೋಡಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ಸರ್ಕಾರದ ಬರ ಪರಿಹಾರದ ಸೌಲಭ್ಯ ಪಡೆಯುವಲ್ಲಿ ಯಾವುದೇ ತೊಂದರೆ ಉಂಟಾಗದಂತೆ ರೈತರು ಕೂಡಲೇ ಅಗತ್ಯ ಕ್ರಮಕೈಗೊಂಡು, ಎಫ್ಐಡಿ ನೋಂದಣಿ ಹಾಗೂ ಸರ್ವೆ ನಂಬರ್ ಗಳ ಜೋಡಣೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Farmers FID mandatory ಬೆಳೆವಿಮೆ, ಪಿಎಂ ಕಿಸಾನ್ ಹಣ ಸೇರಿದಂತೆ ಇತರ ಕೃಷಿ ಸೌಲಭ್ಯ ಪಡೆಯಲು ಎಫ್ಐಡಿ ಕಡ್ಡಾಯ

ರೈತರು ಬೆಳೆ ವಿಮೆ ಹಣ ಬರ ಪರಿಹಾರದೊಂದಿಗೆ ಕೃಷಿ ಇಲಾಖೆಯಿಂದ ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯ ಪಡೆಯಲು ಸಹ ಎಫ್ಐಡಿ ಕಡ್ಡಾಯವಾಗಿದೆ. ಒಂದು ವೇಳೆ ರೈತರ ಬಳಿ ಎಫ್ಐಡಿ ಸಂಖ್ಯೆ ಇಲ್ಲದಿದ್ದರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ ಈಗಲೇ ಎಫ್ಐಡಿ ಮಾಡಿಕೊಂಡು ಸರ್ಕಾದ ಸೌಲಭ್ಯ ಪಡೆಯಿರಿ.

ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಇಲ್ಲೇ ಚೆಕ್ ಮಾಡಿ

ನಿಮ್ಮ ಹೆಸರಿಗೆ ಎಪ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ರೈತರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು,

ರೈತ ಮಿತ್ರರೇ, ಕೇವಲ ಒಂದೇ ನಿಮಿಷದಲ್ಲಿ ಇದನ್ನು ಚೆಕ್ ಮಾಡಬಹುದು

ಎಫ್ಐಡಿ ಚೆಕ್ ಮಾಡುವುದು ಹೇಗೆ ?

ರೈತರು ತಮ್ಮ ಎಪ್ಐಡಿ ಚೆಕ್ ಮಾಡಲು ಈ

https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಫ್ರೂಟ್ಸ್ ಐಡಿ ಚೆಕ್ ಮಾಡುವ ಹಾಗೂ ಎಫ್ಐಡಿ ನೋಂದಣಿ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ನಂತರ ನೀವು ಪಾಸ್ವರ್ಡ್ ನಮೂದಿಸಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನಿಮಗೆ ಫ್ರೂಟ್ಸ್ ಐಡಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಎಫ್ಐಡಿ ಸೇರಿದಂತೆ ಜಮೀನಿನ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

ಒಂದು ವೇಳೆ ನಿಮಗೆ ಪಾಸ್ವರ್ಡ್ ನೆನಪಿಲ್ಲದಿದ್ದರೆ  ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Reset Password ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಪಾಸ್ವರ್ಡ್ ಕಳಿಸಲಾಗುವುದು. ಆ ಪಾಸ್ವರ್ಡ್ ನಮೂದಿಸಿ ಲಾಗಿನ್ ಮಾಡಿಕೊಳ್ಳಬೇಕು. ನಂತರ ನೀವು ಪಾಸ್ವರ್ಡ್ ನಿಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬೇಕು. ಮೊದಲು ಹಳೆಯ ಪಾಸ್ವರ್ಡ್ ಅಂದರೆ ನಿಮ್ಮ ಮೊಬೈಲಿಗೆ ಬಂದ ಪಾಸ್ವರ್ಡ್ ಹಾಕಬೇಕು. ಇದಾದ ನಂತರ ನೀವು ಹೊಸದಾಗಿ ಕ್ರಿಯೇಟ್ ಮಾಡಿದ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಆಗ ನಿಮ್ಮ ಮೊಬೈಲಿಗೆ ಮತ್ತೇ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನೀವು ಫ್ರೂಟ್ಸ್ ಐಡಿಯಲ್ಲಿ ಯಾವ ಯಾವ ಮಾಹಿತಿಗಳನ್ನು ಚೆಕ್ ಮಾಡಬಹುದು ಎಂಬ ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿಗೆ ಹೋಗಲು ಬಂಡಿದಾರಿಯಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ಸರ್ಚ್ ಮೇಲೆ ಕ್ಲಿಕ್ ಮಾಡಿ ರೆಜಿಸ್ಟ್ರೇಷನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಫ್ರೂಟ್ಸ್ ಐಡಿ ನಿಮ್ಮ ಹೆಸರು ಅಪ್ಲಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಪೇಮೆಂಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ನಿಮಗೆ ಹಣ ಜಮೆಯಾಗಿರುವ ಸ್ಟೇಟಸ್ ಕಾಣಿಸುತ್ತದೆ.

ಒಂದು ವೇಳೆ ನೀವು ಪಾಸ್ವರ್ಡ್ ಮರೆತುಹೋಗಿದ್ದರೆ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಹೊಸ ಪಾಸ್ವರ್ಡ್  ಕ್ರಿಯೇಟ್ ಮಾಡಿಕೊಳ್ಳಬಹುದು.

 

Leave a Comment