do this for crop insurance : ರೈತಬಾಂಧವರೇ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ನೀವು ಬೆಳೆ ವಿಮೆ ಮಾಡಿಸಿದರೂ ನಿಮಗೇಕೆ ಬೆಳೆ ವಿಮೆ ಹಣ ಜಮೆಯಾಗುತ್ತಿಲ್ಲ, ಬೆಳೆ ವಿಮೆ ಜಮಯೆಯಾಗಬೇಕಾದರೆ ನೀವೇನು ಮಾಡಬೇಕು, ಬೆಳೆ ವಿಮೆ ಹಣ ಯಾವಾಗ ಜಮೆಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
do this for crop insurance ನಿಮಗೇಕೆ ಬೆಳೆ ವಿಮೆ ಹಣ ಜಮೆಯಾಗುತ್ತಿಲ್ಲ?
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿದ ನಂತರ ಕೆಲವು ರೈತರಿಗೆ ಜಮೆಯಾಗುತ್ತದೆ ಕೆಲವು ರೈತರಿಗೆ ವಿಮೆ ಹಣ ಜಮೆಯಾಗುವುದಿಲ್ಲ. ಆದರೆ ಯಾವ ಕಾರಣಕ್ಕಾಗಿ ಬೆಳೆ ವಿಮೆ ಹಣ ಜಮೆಯಾಗುವುದಿಲ್ಲ ಎಂಬುದರ ಮಾಹಿತಿ ಅವರಿಗೆ ಗೊತ್ತಿರುವುದಿಲ್ಲ. ಈ ಕುರಿತು ಯಾರಿಗೆ ಕರೆ ಮಾಡಬೇಕು ಎಂಬ ಮಾಹಿತಿಯೂ ಅವರಿಗೆ ಗೊತ್ತಿರುವುದಿಲ್ಲ. ಇನ್ನೂ ಕೆಲವು ರೈತರಿಗೆ ವಿಮೆ ಯಾವ ವಿಮಾ ಕಂಪನಿಗೆ ವಿಮೆ ಹಣ ಪಾವತಿಸಿದ್ದಾರೆ ಎಂಬ ಮಾಹಿತಿಯೂ ಗೊತ್ತಿರುವುದಿಲ್ಲ. ಅಂತಹ ರೈತರಿಗೆ ಇಲ್ಲಿದೆ ನೋಡಿ ಮಾಹಿತಿ.
ಬೆಳೆ ವಿಮೆ ಹಣ ಯಾವಾಗ ಎಷ್ಟು ಜಮೆಯಾಗುತ್ತದೆ?
ಪ್ರಾಕೃತಿಕ ವಿಕೋಪದಿಂದಾಗಿ ಅಂದರೆ ಮಳೆ ಅಭಾವ, ಅತೀವೃಷ್ಠಿ, ಅನಾವೃಷ್ಟಿ, ಭೂ ಕುಸಿತು ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ರೈತರಿಗೆ ಬೆಳೆ ವಿಮೆ ಹಣ ಸಿಗುತ್ತದೆ.
ಹೌದು, ರೈತ ಮಿತ್ರರೇ, ಪ್ರತಿಕೂಲ ಹವಾಮಾನ ವಿಕೋಪದಿಂದಾಗಿ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ಬೀಜಗಳು ಮೊಳಕೆಯೊಡೆಯುವುದು ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಪರಿಹಾರ ಹಣ ನೀಡಲಾಗುವುದು.
ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲದಿಂದ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯುವ ಶೇ. 50 ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25 ರಷ್ಟು ಹಣ ನೀಡಲಾಗುವುದು.
ವಿಮೆ ಮಾಡಿಸಿದ ನಂತರ ಬೆಳೆ ವಿಮೆ ಹಣ ಜಮೆಯಾಗಲು ರೈತರೇನು ಮಾಡಬೇಕು?
ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ದೂರು ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುವರು. ನಂತರ ಬೆಳೆ ಹಾನಿಯಾದ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವರು. ನಂತರ ವಿಮಾ ಕಂಪನಿಯು ಹಂತ ಹಂತವಾಗಿ ಬೆಳೆ ವಿಮೆ ಹಣ ಬಿಡುಗಡೆ ಮಾಡುತ್ತದೆ. ನಂತರ ರೈತರ ಖಾತೆಗೆ ವಿಮೆ ಹಣ ಜಮೆಯಾಗುತ್ತದೆ.
ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ ಯಾರಿಗೆ ಕರೆ ಮಾಡಬೇಕು ?
ಬಹುತೇಕ ರೈತರಿಗೆ ತಾವು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ್ದಾರೆ ಎಂಬುದೇ ಗೊತ್ತಿರುವುದಿಲ್ಲ. ಅಂತಹ ರೈತರಿಗೆ ಇಲ್ಲಿದೆ ನೋಡಿ ಮಾಹಿತಿ. ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೆ ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಓಪನ್ ಆಗುವ ಸಂರಕ್ಷಣೆ ಪೇಜ್ ನಲ್ಲಿ ಮುಂದೆ Go ಮೇಲೆ ಕ್ಲಿಕ್ ಮಾಡಬೇಕು. Farmers ಕೆಳಗಡೆ Know Your Insurance co. ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆಗಳ ಹೆಸರು ಕಾಣಿಸುತ್ತದೆ. ಅದರ ಮುಂದೆ ಆಯಾ ಜಿಲ್ಲೆಗಳಿಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದು ಕಾಣಿಸುತ್ತದೆ. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದನ್ನು ಬರೆದುಕೊಂಡುನಂತರ
https://www.samrakshane.karnataka.gov.in/HomePages/ContactUs.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ವಿಮಾ ಕಂಪನಿಗಳ ಹೆಸರು ಕಾಣಿಸುತ್ತದೆ. ಅದರ ಎದುರುಗಡೆ ಆ ಕಂಪನಿಗಳ ಸಹಾಯವಾಣಿ ನಂಬರ್ ಕಾಣಿಸುತ್ತದೆ
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ – 1800 425-0505 ಗೆ ಸಂಪರ್ಕಿಸಬಹುದು. ಅದೇ ರೀತಿ ಯುನಿವರ್ಸಲ್ ಸ್ಯಾಂಪು – 1800 2005142 ಗೆ ಸಂಪರ್ಕಿಸಬಹುದು. ಎಸ್.ಬಿ.ಐ 1800 180 1551,ಹೆಚ್.ಡಿಎಪ್.ಸಿ 1800266 0700 ಫ್ಯೂಚರ್ ಜನರಲ್ – 1800 266 4141, ಐಸಿಐಸಿ ಲೊಂಬೋಡೋ 1800 103 7712, ಬಜಾಜ್ ಅಲೈಯನ್ಸ್ 1800209 5959, ರಿಲೈಯನ್ಸ್ ಜನರಲ್ ಇನ್ಸುರೆನ್ 1800 102 4088, ಓರಿಯಂಟಲ್ ಜನರಲ್ ಇನ್ಸುರೆನ್ಸ್ ಕಂಪನಿ 1800 425 6678, ಇಫ್ಕೋ ಜನರಲ್ ಇನ್ಸುರೆನ್ಸ್ ಕಂಪನಿ 1800 103 5940 ಗೆ ಸಂಪರ್ಕಿಸಲು ಕೋರಲಾಗಿದೆ.





