ರೈತ ಬಾಂದವರೇ ಕೂಡಲೇ ಈ ಕೆಲಸ ಮಾಡಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ

Written by Ramlinganna

Published on:

PM kisan ekyc proecess : ಪಿಎಂ ಕಿಸಾನ್ ಫಲಾನುಭವಿಗಳು ಕೂಡಲೇ ಇಲ್ಲಿ ನೀಡಿದ ಮಾಹಿತಿಯಂತೆ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಕಂತು ಅಂದರೆ 24ನೇ ಕಂತಿನ ಹಣ ನಿಮಗೆ ಜಮೆ ಮಾಡಲ್ಲ, ಇಕೆವೈಸಿ ಮಾಡಿಸಿದರೆ ಮಾತ್ರ ನಿಮಗೆ ಹಣ ಜಮೆ ಮಾಡಲಾಗುವುದು. ಹಾಗಾದರೆ ಪಿಎಂ ಕಿಸಾನ್ ಇಕೆವೈಸಿ ಎಲ್ಲಿ ಮಾಡಿಸಬೇಕು. ಅದಕ್ಕೆ ಬೇಕಾಗುವ ದಾಖಲೆಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಇಕೆವೈಸಿ ಪ್ರಕ್ರಿಯೆ ?

ಇಕೆವೈಸಿ ಎಂದರೆ ಎಲೆಕ್ಟ್ರಾನಿಕ್ ನೋ ಯುವರ್ ಕನ್ಸುಮರ್ ಅಥವಾ ಎಲೆಕ್ಟ್ರಾನಿಕ್ ಮೂಲಕ ಗ್ರಾಹಕರನ್ನು ಗುರುತಿಸುವ ಪ್ರಕ್ರಿಯೆಯಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಹೊಸ ಸಿಮ್ ಕಾರ್ ಪಡೆಯಲು ಅಥವಾ ಯಾವುದು ಹಣಕಾಸು ಸೇವೆಗಳನ್ನು ಬಳಸಲು ನಿಮ್ಮ ಗುರುತು ಮತ್ತು ವಿಳಾಸವನ್ನು ಡಿಜಿಟಲ್ ರೂಪದಲ್ಲಿ ದೃಢೀಕರಿಸುವ ಸುಲಭ ವಿಧಾನ ಇದಾಗಿದೆ.

PM kisan ekyc proecess ಇಕೆವೈಸಿ ಹೇಗೆ ಕೆಲಸ ಮಾಡುತ್ತದೆ ?

ಇಕೆವೈಸಿ ಭಾರತದಲ್ಲಿ ಸಾಮಾನ್ಯವಾಗಿ ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಥವು ನಿಮ್ಮ ಹೆಬ್ಬರಳಿರುವ ಗುರುತು ಬಳಸಿ ಇದನ್ನು ಮಾಡಲಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಇಕೆವೈಸಿ ಮಾಡಿಸಬೇಕು

ಹೌದು, ಪಿಎಂ ಕಿಸಾನ್ ಮುಂದಿನ ಕಂತು ಜಮೆಯಾಗಬೇಕಾದರೆ ಇಕೆವೈಸಿ ಮಾಡಿಸಲೇ ಬೇಕು. ಇಲ್ಲದಿದ್ದರೆ ನೀವು ಎಲ್ಲಾ ಅರ್ಹತೆ ಪಡೆದಿದ್ದರೂ ಸಹ ನಿಮಗೆ ಮುಂದಿನ ಕಂತು ಜಮೆಯಾಗುವುದಿಲ್ಲ.

ಇಕೆವೈಸಿ ಎಲ್ಲಿ ಮಾಡಿಸಬೇಕು ?

ಪಿಎಂ ಕಿಸಾನ್ ಇಕೆವೈಸಿಯನ್ನು ರೈತರು ತಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಸಿಎಸ್.ಸಿ ಕೇಂದ್ರಗಳಲ್ಲಿ ಮಾಡಿಸಬೇಕು

ಇದನ್ನೂ ಓದಿ ನೀವು ಎಲ್ಲೇ ನಿಂತುಕೊಳ್ಳಿ ಆ ಜಮೀನಿನ ಮಾಲಿಕರು ಯಾರು? ಹೀಗೆ ಚೆಕ್ ಮಾಡಿ

ಇದಕ್ಕೆ ನಿಮ್ಮ ಆಧಾರ್ ಕಾರ್ಡ್ ಬೇಕಾಗುತ್ತದೆ. ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.

ಇಕೆವೈಸಿ ಆಗಿದೆಯೋ ಇಲ್ಲವೋ ?

ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ನಿಮ್ಮ ರೈತ ಸಂಪರ್ಕ ಕೇಂದ್ರದಲ್ಲಿ ಗೊತ್ತಾಗುತ್ತದೆ. ಹೌದು, ಅಲ್ಲಿ ಯಾರ ಯಾರ ಇಕೆವೈಸಿ ಆಗಿಲ್ಲವೋ ಅಲ್ಲಿ ಸೂಚನಾ ಫಲಕದಲ್ಲಿ  ಪಟ್ಟಿ ಅಂಟಿಸಲಾಗಿರುತ್ತದೆ. ಅದನ್ನು ನೋಡಿ ನೀವು ನಿಮ್ಮ ಹೆಸರು ಚೆಕ್ ಮಾಡಬಹುದು. ನಂತರ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಪಿಎಂ ಕಿಸಾನ್ ಹಣ ಯಾವಾಗ ಜಮೆಯಾಗುತ್ತದೆ ?

ಪಿಎಂ ಕಿಸಾನ್ ಹಣ ಅಂದರೆ ಮುಂದಿನ ಕಂತು ಯಾವಾಗ ಜಮೆಯಾಗುತ್ತದೆ ಎಂಬ ಮಾಹಿತಿ ತಿಳಿಯಲು ಈ

https://pmkisan.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮುಂದಿನ ಕಂತು ಅಂದರೆ ಪಿಎಂ ಕಿಸಾನ್ 24ನೇ ಕಂತು ಯಾವಾಗ ಜಮೆಯಾಗುತ್ತದೆ ಎಂಬ ಸಂದೇಶ ಕಾಣಿಸುತ್ತದೆ. ಇಲ್ಲದಿದ್ದರೆ ಹಿಂದಿನ ಕಂತು ಅಂದರೆ 23ನೇ ಕಂತು ಯಾವಾಗ ಜಮೆಯಾಗಿತ್ತು ಎಂಬ ಸಂದೇಶ ಅಲ್ಲಿ ಕಾಣಿಸುತ್ತದೆ.

ಪಿಎಂ ಕಿಸಾನ್ ಯೋಜನೆ ಮುಂದಿನ ಕಂತು ಯಾವಾಗ ಜಮೆಯಾಗುತ್ತದೆ ?

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಇದೇ ತಿಂಗಳಲ್ಲಿ ಜಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಇಕೆವೈಸಿ ಯನ್ನು ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಕಂತಿನಿಂದ ನೀವು ವಂಚಿತರಾಗುವ ಸಾಧ್ಯತೆಯಿದೆ. ಈ ಕುರಿತು ಕೃಷಿ ಇಲಾಖೆಯು ರೈತರಿಗೆ ಇಕೆವೈಸಿ ಮಾಡಿಸಿಕೊಳ್ಳಲು ತಿಳಿಸುತ್ತಿದೆ. ಆದರೆ ಸಹಿತ ಬಹಳಷ್ಟು ರೈತರು ಇನ್ನೂ ಇಕೆವೈಸಿ ಮಾಡಿಸಿಲ್ಲ. ರೈತರು ಯೋಜನೆಯಿಂದ ವಂಚಿರಾಗಬಾರದೆಂದು ಉದ್ದೇಶದಿಂದ ಮತ್ತೆ ಮತ್ತೇ ಪ್ರಕಟಣೆಗಳ ಮೂಲಕ ರೈತರಲ್ಲಿ ಮನವಿ ಮಾಡುತ್ತಿದೆ. ಇನ್ನೂ ತಡ ಮಾಡದೆ ಕೂಡಲೇ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.

Leave a Comment