Bele sameekshe do now : ರೈತ ಬಾಂಧವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು, ರೈತಮಿತ್ರರೇ ನಿಮ್ಮ ಮೊಬೈಲ್ ನಲ್ಲಿಯೇ ಬೆಳ ಸಮೀಕ್ಷೆ ಮಾಡಬಹುದು. ಹೌದು, ಕೇವಲ ಎರಡು ನಿಮಿಷದಲ್ಲಿ ಬೆಳೆ ಸಮೀಕ್ಷೆ ಮಾಡಬಹುದು.
ಬೆಳೆ ಸಮೀಕ್ಷೆ ಮಾಡದಿದ್ದರೆ, ಮುಂದೆ ನಿಮಗೆ ಬೆಳೆ ವಿಮೆ ಹಣ ಜಮೆಯಾಗುವುದಿಲ್ಲ. ಬೆಳೆ ವಿಮೆ ಹೇಗೆ ಮಾಡಬೇಕು. ಅದಕ್ಕೆ ಬೇಕಾಗುವ ದಾಖಲೆಗಳು ಯಾವುವುದು ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ.
2026-27ನೇ ಸಾಲಿನ ಮುಂಗಾರು ಹಂಗಾಮಿಗೆ ರೈತರು ಬೆಳೆ ಸಮೀಕ್ಷೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಯನ್ನು ಸ್ವಯಂ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬೆಳೆ ಸಮೀಕ್ಷೆಯ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ, ಪರಿಹಾರ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಬಳಸಲಾಗುತ್ತದೆ. ಸ್ವಯಂ ಪ್ರೇರಣೆಯಿಂದ ಮೊಬೈಲ್ ಯಾಪ್ ಮೂಲಕ ಬೆಳೆ ವಿವರ ಅಪ್ಲೋಡ್ ಮಾಡಿದರೆ ನ್ಯೂನತೆ ಕಡಿಮೆಯಾಗಿ ಎಲ್ಲಾ ಸೌಲಭ್ಯಗಳೂ ಸಕಾಲದಲ್ಲಿ ರೈತರಿಗೆ ಲಭಿಸಲಿದೆ.
Bele sameekshe do now ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವುದು ಹೇಗೆ ?
ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಬೇಕಾದರೆ ರೈತರು
https://play.google.com/store/apps/details?id=com.csk.farmer23_24.cropsurvey&hl=kn
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಂಗಾರು ರೈತರ ಬೆಳೆ ಸಮೀಕ್ಷೆ 26-27 ಕಾಣಿಸುತ್ತದೆ. ಅಲ್ಲಿ ನೀವು ಇನಸ್ಟಾಲ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಅದನ್ನು ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳಲಾದ ಒಂದು ಮಾಹಿತಿಗಳನ್ನು ಭರ್ತಿ ಮಾಡಬೇಕು.
ಒಂದು ವೇಳೆ ಮೇಲಿನ ಲಿಂಕ್ ಕೆಲಸ ಮಾಡದಿದ್ದರೆ ಪ್ಲೇ ಸ್ಟೋರ್ ನಲ್ಲಿ ಅಥವಾ ಕ್ಯೂ ಆರ್ ಕೋಡ್ ಬಳಸಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಯಾಪ್ 2026-27 ಡೌನ್ಲೋಡ್ ಮಾಡಿಕೊಳ್ಳಬೇಕು. ಇ ಕೆವೈಸಿಗಾಗಿ ಆಧಾರ್ ಸಂಖ್ಯೆ ನಮೂದಿಸಿ, ಆಧಾರ್ ಗೆ ಜೋಡಣೆಯಾದ ಮೊಬೈಲ್ ಗೆ ಬರುವ ಒಟಿಪಿ ದಾಖಲಿಸಬೇಕು. ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರೀಯಗೊಳಿಸಿದ ನಂತರ ಮತ್ತೆ ಮೊಬೈಲ್ ಓಟಿಪಿ ಮೂಲಕ ಖಚಿತಪಡಿಸಿಕೊಳ್ಳಬೇಕು.
ರೈತರು ಗುರುತಿನ ಸಂಖ್ಯೆ ಎಫ್ಐಡಿಯಲ್ಲಿ ಹಿಂದಿನ ಎಲ್ಲಾ ಪಹಣಿ, ಪಾಲಿಗಾನ್ ಮತ್ತು ಜಿಐಎಸ್ ಮ್ಯಾಪ್ ಮಾಹಿತಿ ದೊರೆಯಲಿದೆ. ಬೆಳೆ ಸಮೀಕ್ಷೆ ಪ್ರಾರಂಭಿಸಲು ಸರ್ವೆ ನಂಬರ್ ಆಯ್ಕೆ ಮಾಡಬೇಕು. ಬೆಳೆದ ಬೆಳೆಯ 2 ಚಿತ್ರ ತೆಗೆದು ವಿವರ ಸಮೇತ ಅಪ್ಲೋಡ್ ಮಾಡಬೇಕು.
ಯಾಪ್ ನ್ನು ಒಮ್ಮೆ ಲೋಡ್ ಮಾಡಿ ಯಾಕ್ಟಿವೇಟ್ ಮಾಡಿಕೊಂಡರೆ ಪ್ರತಿ ಋತುವಿನಲ್ಲೂ ಅಪ್ಲೇಡ್ ಮಾಡಿಕೊಳ್ಳಬಹುದು.
ರೈತರು ಈ ಯೋಜನೆಯ ಸದುಪಯೋಗ ಪಡೆದು ನಿಗದಿತ ಸಮಯದೊಳಗೆ ಬೆಳೆ ವಿವ ಅಪ್ಲೋಡ್ ಮಾಡಬೇಕು.
ಇದನ್ನೂ ಓದಿ ಇನ್ನೂ ಮುಂದೆ ಪಹಣಿಯಲ್ಲಿ ರೈತರ ಫೋಟೋ ವಿಳಾಸ ಇಲ್ಲಿದೆ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಟೋಲ್ ಪ್ರೀ ಸಂಖ್ಯೆ 18004253553 ಗೆ ಸಂಪರ್ಕಿಸಬಹುದು. ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಸಾಂಖ್ಯೀಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಇನ್ನೇಕೆ ತಡ ಈಗಲೇ ಬೆಳೆ ವಿಮೆ ಹಣ ಪಡೆಯಬೇಕಾದರೆ ಕೂಡಲೇ ಬೆಳೆ ಸಮೀಕ್ಷೆ ಮಾಡಿಕೊಳ್ಳಿ. ಒಂದು ವೇಳೆ ನೀವು ಬೆಳೆ ಸಮೀಕ್ಷೆ ಮಾದದಿದ್ದರೆ ಬೆಳೆ ವಿಮೆ ಹಣ ಪಡೆಯುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಇದೇ ಈಗಲೇ ಬೆಳೆ ಸಮೀಕ್ಷೆ ಮಾಡಿ.ಬೆಳೆ ಸಮೀಕ್ಷೆ ಯಾದ ನಂತರ ನೀವು ನಿಮ್ಮ ಹತ್ತಿರ ವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅಲ್ಲಿ ಕೆೇಳಲಾದ ಮಮಾಹಿತಿಯನ್ನ ಸಹ ಪಡೆದುಕಳ್ಳಬಹುದು.





