ಇನ್ನೂ ಮುಂದೆ ಪಹಣಿಯಲ್ಲಿ ರೈತರ ಫೋಟೋ ವಿಳಾಸ ಇಲ್ಲಿದೆ ಮಾಹಿತಿ

Written by Ramlinganna

Published on:

RTC photo  and Address : ರಾಜ್ಯದ ರೈತ ಭೂಮಿಯ ಪಹಣಿಯಲ್ಲಿ (ಆರ್.ಟಿ.ಸಿ) ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಹೌದು, ಆಧಾರ್ ಕಾರ್ಡ್, ಬ್ಯಾನ್ ಕಾರ್ಡ್, ಎಲೆಕ್ಷನ್ ಕಾರ್ಡ್ ದಂತೆ ಈಗ ಪಹಣಿಯಲ್ಲಿಯೂ ರೈತರ ಫೋಟೋ, ವಿಳಾಸ ಸೇರಿದಂತೆ ಇತರ ಮಾಹಿತಿ ಇರಲಿದೆ. ಭೂ ಮಾಲಿಕರ ಫೋಟೋ, ವಿಳಾಸ, ಆಧಾರ್ ಸಂಖ್ಯೆ, ಫ್ರೂಟ್ಸ್, ಐಡಿ ಮಾಹಿತಿಗಳು ಪಹಣಿಯಲ್ಲಿ ಮುದ್ರಣವಾಗಲಿದೆ.

RTC photo  and Address ಪಹಣಿಯಲ್ಲಿ ಯಾವ ಯಾವ ಮಾಹಿತಿ ಇರಲಿದೆ

ಅಷ್ಟೇ ಅಲ್ಲ, ಜಮೀನಿಗೆ ಸಂಬಂಧಿಸಿದ ಆಕಾರ್ ಬಂದ್ ದಾಖಲೆಗಳನ್ನು ಸಹ ಪಹಣಿಯೊಂದಿಗೆ ಡಿಜಿಟಲ್ ರೂಪದಲ್ಲಿ ಜೋಡಿಸಲಾಗುತ್ತಿದೆ. ಇದರಿಂದ ನಕ್ಷೆಯಲ್ಲಿರುವ ವಿಸ್ತೀರ್ಣಕ್ಕೂ ಪಹಣಿಯಲ್ಲಿ ನಮೂದಾಗಿರುವ ವಿಸ್ತೀರ್ಣಕ್ಕೂ ವ್ಯತ್ಯಾಸವಿರುವ ಗೊಂದಲಗಳು ಬಗೆಹರಿಯಲಿದೆ. ಅಲ್ಲದೆ ಪ್ರತಿಯೊಂದು ಆರ್.ಟಿ.ಸಿ ಯಲ್ಲೂಯ ಕ್ಯೂ ಆರ್ ಕೋಡ್ ಕೂಡ ಇರಲಿದೆ. ಇದರಿಂದ ಜಮೀನಿನ ಮೇಲಿರುವ ಸಾಲ ಸೇರಿ ಇತರೆ ಅಧಿಕೃತ ಮಾಹಿತಿಗಳನ್ನು ತಕ್ಷಣವೇ ಪಡೆಯಲು ಸಹಕಾರಿಯಾಗಲಿದೆ.

ಭೂ ಮಾಲಿಕರು ಮತ್ತು ರೈತರಿಗೆ ಭೂಮಿಯ ಹಕ್ತು ಸ್ವಾಮ್ಯ ಮತ್ತು ಮಾಲೀಕತ್ವದ ಖಾತ್ರಿ ನೀಡಲು ಪಹಣಿಯನ್ನು ಆಧಾರ್ ಸಂಖ್ಯೆಗೆ ಜೋಡಿಸಿರುವ ಕಂದಾಯ ಇಲಾಖೆಯು ಇದರ ಮುಂದುವರೆದ ಭಾಗವಾಗಿ, ಸಂಬಂಧಇಸಿದ ರೈತರ ಅಥವಾ ಭೂ ಮಾಲಿಕರ ಫೋಟೋ, ವಿಳಾಸ, ಆಧಾರ್ ಸಂಖ್ಯೆ, ಏಕೀಕೃತ  ಫಲಾನುಭವಿ ಮಾಹಿತಿ ವ್ಯವಸ್ಥೆಯ (ಫ್ರೂಟ್ಸ್) ದತ್ತಾಂಶಗಳನ್ನು ಹೊಂದಿರುವ ಕಾರ್ಯ ಕೈಗೆತ್ತಿಕೊಳ್ಳಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂರ್ಣ ಹಕ್ಕು ನೀಡಲು ಬದಲಾವಣೆ

ಜಮೀನಿನ ಮೂಲಕ ದಾಖಲೆಯಾದ ಆರ್.ಟಿ.ಸಿ (ಪಹಣಿ)ಯನ್ನು  ಆಧಾರ್ ಸಂಖ್ಯೆಗೆ ಜೋಡಿಸುವ ಜೊತೆಗೆ ಜಿಯೆ ರೆಫರೆನ್ಸಡ್ ಮತ್ತ ಓಪನ್ ಲೊಕೇಶನ್ ಕೋಡ್ ಗಳೊಂದಿಗೆ ಡಿಜೀಟಲೀಕರಣಗೊಳಿಸಿ ನವೀಕೃತ ರೂಪದಲ್ಲಿ ವಿತರಿಸಲು ಇಲಾಖೆ ನಿರ್ಧರಿಸಿದೆ. ಜಮೀನಿನ ಪಹಣಿಯಲ್ಲಿ ಹೆಸರು ಇರುವುದು ಎಂದರೆ ಭೂಮಿಯ ಸಂಪೂರ್ಣ ಮಾಲೀಕತ್ವ ಎಂದರ್ಥವಲ್ಲ, ಎಂಬ ಸಮಸ್ಯಗೆ ಅಂತ್ಯ ಹಾಡಿ ದಾಖಲೆಯಿಂದ ಪೂರ್ಣ ಹಕ್ಕು ನೀಡಲು ಈ ತಂತ್ರಜ್ಞಾನ ಆಧಾರಿತ ಬದಲಾವಣೆ ತರಲಾಗಿದೆ.

ಇದನ್ನೂ ಓದಿ ನಿಮ್ಮ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಜಮೀನಿದೆ ಇಲ್ಲೇ ಚೆಕ್ ಮಾಡಿ

ಮುಂಬರುವ ಮೂರು ನಾಲ್ಕು ತಿಂಗಳುಗಳಲ್ಲಿ ಕನಿಷ್ಠ 25 ಲಕ್ಷ ಇಂಥಹ ನವೀಕೃತ ಆರ್.ಟಿ.ಸಿ ಗಳನ್ನು ಸಾರ್ವಜನಿಕರಿಗೆ ವಿತರಿಸುವ ಗುರಿ ಇದೆ. ಇದರಿಂದ ನಕಲಿ ದಾಖಲೆಗಳ ಸೃಷ್ಟಿ ಮತ್ತು ಅಕ್ರಮ ಜಮೀನು ಕಸಿಯುವ ಯತ್ನಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಆರಂಭಿಕ ಹಂತದಲ್ಲಿ ಏಕಮಾಲೀಕತ್ವ ಹೊಂದಿರುವ ಆರ್.ಟಿ.ಸಿ ಗಳಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಜಂಟಿ ಮಾಲೀಕತ್ವ ದ ಆರ್. ಟಿ.ಸಿ ಗಳಿಗೆ ಮಾಲೀಕರು ವಿವಿಧ ಕಂದಾಯ ಸೇವೆಗಳನ್ನು ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಹೊಸ ಮಾದರಿಯ ಪಹಣಿಗಳನ್ನು ವಿತರಿಸಲು ಇಲಾಖೆ ನಿರ್ಧರಿಸಿದೆ.

25 ವರ್ಷ ಹಳೆಯ ಪಹಣಿ ಚೆಕ್ ಮಾಡುವುದು ಹೇಗೆ?

25 ವರ್ಷದ ಹಳೆಯ ಪಹಣಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://www.landrecords.karnataka.gov.in/service2/RTC.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು Old Year ಮೇಲೆ ಕ್ಲಿಕ್ ಮಾಡಬೇಕು. ಇದಾದಮೇಲೆ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಂಡು ನೀವು ಯಾವ ಸರ್ವೆ ನಂಬರ್ ಹಳೆಯ ಪಹಣಿ ನೋಡಬೇಕೆಂದುಕೊಂಡಿದ್ದೀರೋ ಅದನ್ನು ಅಲ್ಲಿ ನಮೂದಿಸಬೇಕು.  ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹಿಸ್ಸಾ ನಂಬರ್ ನಲ್ಲಿ ನಿಮ್ಮ ಹಿಸ್ಸಾ ನಂಬರ್ ಆಯ್ಕೆಮಾಡಿಕೊಳ್ಳಬೇಕು. ನಂತರ ಯಾವ ವರ್ಷದಿಂದ ಪಹಣಿ ನೋಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕ ಮಾಡಿಕೊಳ್ಳಬೇಕು. ನಂತರ Year ನಲ್ಲಿ ಎಷ್ಟು ವರ್ಷದಿಂದ ನೀವು ಪಹಣಿ ನೋಡಬಹುದು ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ನೀವು 2000 ಇದ್ದರೆ 2000 ಒಂದುವೇಳೆ 2001 ಇದ್ದರೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಎಷ್ಟು ವರ್ಷ ಹಳೆಯ ಪಹಣಿ ನೋಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರು ನಿಮ್ಮ ತಂದೆಯ ಹೆಸರು ಕಾಣಿಸುತ್ತದೆ. ನಂತರ ನಿಮ್ಮ ಖಾತಾ ನಂಬರ್ ಕಾಣಿಸುತ್ತದೆ. ಅದರ ಮುಂದೆ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದೇ ನಿಮ್ಮ ಜಮೀನಿನ 20 ವರ್ಷ ಹಳೆಯ ಪಹಣಿಯಾಗಿರುತ್ತದೆ. ಅಲ್ಲಿ ನಿಮ್ಮ ಹೆಸರು ತಂದೆಯ ಹೆಸರು, ಮುಟೇಶನ್ ನಂಬರ್, ನಿಮ್ಮ ಜಮೀನಿನ ಮಣ್ಣಿನ ನಮೂನೆಯ ಮಾಹಿತಿ, ಪಟ್ಟಾ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಗಳು ಕಾಣಿಸುತ್ತದೆ.

Leave a Comment