ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

Written by Ramlinganna

Published on:

Anganawadi naukari offline application : ವಿವಿಧ ತಾಲೂಕುಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೌದು, 2026-27ನೇ ಸಾಲಿಗೆ ಶಹಾಬಾದ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ ಒಟ್ಟು 12 ಅಂಗನವಾಡಿ ಕಂ. ಕ್ರಷ್ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ  ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಭೌತಿಕ (offline) ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಶಹಾಬಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಬಯಸುವ ಇಚ್ಛೆಯುಳ್ಳ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಸಂಬAಧಪಟ್ಟ ದಾಖಲಾತಿಗಳನ್ನು ಲಗತ್ತಿಸಿ ಶಹಾಬಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ 2026ರ ಆಗಸ್ಟ್ 31  ಗಂಟೆಯೊಳಗಾಗಿ ಕಛೇರಿ ಸಮಯದಲ್ಲಿ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.

ಕೇಂದ್ರವಾರು ಖಾಲಿಯಿರುವ ಹುದ್ದೆಗಳ ವಿವರ, ವಯೋಮಿತಿ, ವಿದ್ಯಾರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಶಹಾಬಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Anganawadi naukari offline application ಚಿಂಚೋಳಿ ಅಂಗನವಾಡಿ ಕಂ. ಕ್ರಷ್ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

2026-27ನೇ ಸಾಲಿಗೆ ಚಿಂಚೋಳಿ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಒಟ್ಟು 07 ಅಂಗನವಾಡಿ ಕಂ. ಕ್ರಷ್ ಕಾರ್ಯಕರ್ತೆಯರ ಹಾಗೂ ಒಟ್ಟು 07 ಅಂಗನವಾಡಿ ಕಂ. ಕ್ರಷ್ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಭೌತಿಕ (oಜಿಜಿಟiಟಿe) ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಚಿಂಚೋಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿಗಳನ್ನು ಸಲ್ಲಿಸಲು ಇಚ್ಛೆಯುಳ್ಳ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಚಿಂಚೋಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ 2026ರ ಅಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಖಾಲಿಯಿರುವ ಹುದ್ದೆಗಳ ವಿವರ, ವಯೋಮಿತಿ, ವಿದ್ಯಾರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಚಿಂಚೋಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಸೇಡಂ: ಅಂಗನವಾಡಿ ಕಂ. ಕ್ರಷ್ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

2026-27ನೇ ಸಾಲಿಗೆ ಸೇಡಂ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಒಟ್ಟು 10 ಅಂಗನವಾಡಿ ಕಂ. ಕ್ರಷ್ ಕಾರ್ಯಕರ್ತೆಯರ ಹಾಗೂ ಒಟ್ಟು 10 ಅಂಗನವಾಡಿ ಕಂ. ಕ್ರಷ್ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಭೌತಿಕ (offline) ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿಗಳನ್ನು ಸಲ್ಲಿಸಲು ಇಚ್ಚಿಸುವ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಸಂಬAಧಪಟ್ಟ ದಾಖಲಾತಿಗಳೊಂದಿಗೆ  ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ 2026ರ ಆಗಸ್ಟ್ 31 ರೊಳಗಾಗಿ  ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ ನಿಮ್ಮ ಜಮೀನಿನ ಪೋಡಿ ನಕ್ಷೆ ಮೊಬೈಲ್ ನಲ್ಲಿ ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ

ಖಾಲಿಯಿರುವ ಹುದ್ದೆಗಳ ವಿವರ, ವಯೋಮಿತಿ, ವಿದ್ಯಾರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಚಿತ್ತಾಪುರ: ಅಂಗನವಾಡಿ ಕಂ. ಕ್ರಷ್ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಂ. ಕ್ರಷ್ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಲಬುರಗಿ,ಆ.17.(.ಕ.ವಾ)-2026-27ನೇ ಸಾಲಿನಲ್ಲಿ ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ ಒಟ್ಟು 05 ಅಂಗನವಾಡಿ ಕಂ.ಕ್ರಷ್ ಕಾರ್ಯಕರ್ತೆಯರ ಹಾಗೂ ಒಟ್ಟು 05 ಅಂಗನವಾಡಿ ಕಂ.ಕ್ರಷ್ ಸಹಾಯಕಿಯರ ಹುದ್ದೆಗಳನ್ನು ಒಂದು ಬಾರಿಗೆ ಭೌತಿಕ (offline) ಆಫ್‌ಲೈನ್ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಅರ್ಹ ಮಹಿಳಾ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಚಿತ್ತಾಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ 2026ರ ಆಗಸ್ಟ್ 18 ರಿಂದ 31   ರೊಳಗಾಗಿ ಸಂಜೆ 5.30 ಗಂಟೆಯೊಳಗಾಗಿ ಚಿತ್ತಾಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

ಖಾಲಿಯಿರುವ ಹುದ್ದೆಗಳ ವಿವರ, ವಿದ್ಯಾರ್ಹತೆ ಹಾಗೂ ಮತ್ತಿತರ  ಹೆಚ್ಚಿನ ಮಾಹಿತಿಗಾಗಿ  ಚಿತ್ತಾಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಹಾಗೂ  ಕಚೇರಿ ದೂರವಾಣಿ ಸಂಖ್ಯೆ: 08474-236393 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment