ಬೆಳೆ ಸಮೀಕ್ಷೆಯಾದರೆ ಮಾತ್ರ ಬೆಳೆ ಪರಿಹಾರ ಸಿಗಲಿದೆ ಇಲ್ಲಿದೆ ಮಾಹಿತಿ

Written by Ramlinganna

Published on:

crop survey information checking : ರೈತ ಮಿತ್ರರೇ,  ಬೆಳೆ ವಿಮೆ ಮಾಡಿಸಿದರೂ ಬೆಳೆ ಸಮೀಕ್ಷೆ ಆಗುವುದು ಅತೀ ಮಹತ್ವದ್ದಾಗಿದೆ. ಹೌದು, ರೈತರು ಬೆಳೆ ಸಮೀಕ್ಷೆ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಬೆಳೆ ಸಮೀಕ್ಷೆ ಮಾಡಬಹುದು. ಇದರೊಂದಿಗೆ ಬೆಳೆ ಸಮಿಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು. ಬೆಳೆ ಸಮೀಕ್ಷೆ ನಡೆಸಿ ವಿವರಗಳನ್ನು ಅಪ್ಲೋಡ್ ಮಾಡಬಹುದು. ಇದಕ್ಕಾಗಿ ನೀವು ಅಧಿಕಾರಿಗಳಿಗಾಗಿ ಕಾಯಬೇಕಿಲ್ಲ. ಅಧಿಕಾರಿಗಳು ತಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದಾರೆ ಎಂಬ ಸಂಶಯವೂ ಬೇಡ.

ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣ ಪಡೆಯಬೇಕಾದರೆ ರೈತರು ಬೆಳೆ ವಿವರಗಳನ್ನು ದಾಖಲು ಮಾಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ರೈತರು ಬೆಳೆ ವಿಮಾ ಹಾಗೂ ಬೆಳೆ ಹಾನಿ ಪರಿಹಾರದಿಂದ ವಂಚಿತರಾಗುತ್ತಾರೆ. ಮುಂಗಾರು ಹಂಗಾಮಿನಲ್ಲಿ ಬೆಳೆದ ಬಹುತೇಕ ರೈತರ ಬೆಳೆ ಹಾನಿಯಾಗಿದೆ.

crop survey information checking ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಹೀಗೆ ಚೆಕ್ ಮಾಡಿ

ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಇಲ್ಲವೋ ಎಂಬುದನ್ನು ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ  ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಮಾಡಿಸಿದ ನಂತರ ರೈತರು ತಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://play.google.com/store/apps/details?id=com.crop.offcskharif_2021&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಬೆಳೆ Bele Darshak App  ಓಪನ್ ಆಗುತ್ತದೆ. ನಂತರ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಇದಾದನಂತರ ಬೆಳೆ ದರ್ಶಕ್ 2025-2026 ಕಾಣಿಸುತ್ತದೆ.  ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಿಡೆಂಟ್ಸ್ ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ರೈತರ ಮೇಲೆ ಕ್ಲಿಕ್ ಮಾಡಬೇಕು. ನಂತರ while using this App ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು. ಇದಾದನಂತರ ನಿಮಗೆ ಸರ್ವೆ ನಂಬರ್ ಆಯ್ಕೆ ಕೆಳಗಡೆ ಹಲವು ಆಯ್ಕೆಗಳು ಕಾಣಿಸುತ್ತವೆ. ವರ್ಶ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಹೀಗೆ ಆಯ್ಕೆಗಳು ಕಾಣಿಸುತ್ತವೆ. ಅಗ ನೀವು ವರ್ಶ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್ ಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ನಂತರ ಋತು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಸರ್ವೆ ನಂಬರ್ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡ ನಂತರ ಮಾಲಿಕ ವಿವರ ಮೇಲೆ ಕ್ಲಿಕ್ ಮಾಡಬೇಕು. ಆಗ ಮಾಲಿಕರ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರು ಕಾಣಿಸುತ್ತದೆ. ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ಅಪ್ಲೋಡ್ ಮಾಡಿದ ಎಲ್ಲಾ ಮಾಹಿತಿಗಳು ಕಾಣಿಸುತ್ತವೆ. ನೀವು ನೀಡಿದ ಮಾಹಿತಿ ಎಲ್ಲವೂ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ ಗ್ರಾಮೀಣ ಆಸ್ತಿಗಳಿಗೆ ಇ ಸ್ವತ್ತು ನೀಡುವುದು ಹೇಗೆ ? ಇಲ್ಲಿದೆ ಮಾಹಿತಿ

ಒಂದು ವೇಳೆ ನೀವು ಸಲ್ಲಿಸಿದ ಮಾಹಿತಿ ಸರಿಯಿಲ್ಲವಾದರಲ್ಲಿ ಬೆಳೆ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಮಾಹಿತಿ ಕಾಣಿಸುತ್ತದೆ. ಹಾಗಾಗಿ ಒಮ್ಮೆ ನೀವು ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

Leave a Comment