ಬೆಳೆ ಸಮೀಕ್ಷೆ ಹೀಗೆ ಮಾಡಿ ಬೆಳೆ ವಿಮೆ ಪರಿಹಾರ ಪಡೆಯಿರಿ ಇಲ್ಲಿದೆ ಮಾಹಿತಿ

Written by Ramlinganna

Published on:

Bele sameekshe do here : ರೈತ ಮಿತ್ರರೇ, ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ನೀವು ಬೆಳೆ ವಿಮೆ ಮಾಡಿಸಿದ ನಂತರ ಮಾಡಲೇಬೇಕಾದ ಕೆಲಸ ಏನೆಂದರೆ ಬೆಳೆ ಸಮೀಕ್ಷೆ ಮಾಡುವುದು. ಹೌದು, ಮಿತ್ರರೇ ನೀವು ಬೆಳೆ ಸಮೀಕ್ಷೆ ಮಾಡಲೇಬೇಕಾಗುತ್ತದೆ. ಬೆಳೆ ವಿಮೆ ಹಣ ಬೆಳೆ ಹಾನಿ ಪರಿಹಾರ ಹಣ ನಿಮ್ಮ ಖಾತೆಗೆ ಜಮೆಯಾಗಬೇಕಾದರೆ ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯವಾಗಿದೆ. ಇನ್ನೇಕೆ ತಡ ಬೆಳೆ ಸಮೀಕ್ಷೆ ಮಾಡುವದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಬೆಳೆ ಸಮೀಕ್ಷೆ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಬೆಳೆ ಸಮೀಕ್ಷೆ ಮಾಡಬಹುದು. ಇದರೊಂದಿಗೆ ಬೆಳೆ ಸಮಿಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು. ಬೆಳೆ ಸಮೀಕ್ಷೆ ನಡೆಸಿ ವಿವರಗಳನ್ನು ಅಪ್ಲೋಡ್ ಮಾಡಬಹುದು. ಇದಕ್ಕಾಗಿ ನೀವು ಅಧಿಕಾರಿಗಳಿಗಾಗಿ ಕಾಯಬೇಕಿಲ್ಲ. ಅಧಿಕಾರಿಗಳು ತಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದಾರೆ ಎಂಬ ಸಂಶಯವೂ ಬೇಡ.

ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣ ಪಡೆಯಬೇಕಾದರೆ ರೈತರು ಬೆಳೆ ವಿವರಗಳನ್ನು ದಾಖಲು ಮಾಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ರೈತರು ಬೆಳೆ ವಿಮಾ ಹಾಗೂ ಬೆಳೆ ಹಾನಿ ಪರಿಹಾರದಿಂದ ವಂಚಿತರಾಗುತ್ತಾರೆ.

ಮುಂಗಾರು ಹಂಗಾಮಿನಲ್ಲಿ ಬೆಳೆದ ಬಹುತೇಕ ರೈತರ ಬೆಳೆ ಹಾನಿಯಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ರೈತರ ನೆರವಿಗೆ ಬಂದು ಬೆಳೆ ಹಾನಿ ಪರಿಹಾರ ಘೋಷಿಸಿದೆ.

Bele sameekshe do here  ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವುದು ಹೇಗೆ ?

ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಬೇಕಾದರೆ ರೈತರು

https://play.google.com/store/apps/details?id=com.csk.farmer23_24.cropsurvey&hl=kn

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಂಗಾರು ರೈತರ ಬೆಳೆ ಸಮೀಕ್ಷೆ 26-27 ಕಾಣಿಸುತ್ತದೆ. ಅಲ್ಲಿ ನೀವು ಇನಸ್ಟಾಲ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಅದನ್ನು ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳಲಾದ ಒಂದು ಮಾಹಿತಿಗಳನ್ನು ಭರ್ತಿ ಮಾಡಬೇಕು.

ಒಂದು ವೇಳೆ ಮೇಲಿನ ಲಿಂಕ್ ಕೆಲಸ ಮಾಡದಿದ್ದರೆ ಪ್ಲೇ ಸ್ಟೋರ್ ನಲ್ಲಿ ಅಥವಾ ಕ್ಯೂ ಆರ್ ಕೋಡ್ ಬಳಸಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಯಾಪ್ 2026-27 ಡೌನ್ಲೋಡ್ ಮಾಡಿಕೊಳ್ಳಬೇಕು. ಇ ಕೆವೈಸಿಗಾಗಿ ಆಧಾರ್ ಸಂಖ್ಯೆ ನಮೂದಿಸಿ, ಆಧಾರ್ ಗೆ ಜೋಡಣೆಯಾದ ಮೊಬೈಲ್ ಗೆ ಬರುವ ಒಟಿಪಿ ದಾಖಲಿಸಬೇಕು. ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರೀಯಗೊಳಿಸಿದ ನಂತರ ಮತ್ತೆ ಮೊಬೈಲ್ ಓಟಿಪಿ ಮೂಲಕ ಖಚಿತಪಡಿಸಿಕೊಳ್ಳಬೇಕು.

ರೈತರು ಗುರುತಿನ ಸಂಖ್ಯೆ ಎಫ್ಐಡಿಯಲ್ಲಿ ಹಿಂದಿನ ಎಲ್ಲಾ ಪಹಣಿ, ಪಾಲಿಗಾನ್ ಮತ್ತು ಜಿಐಎಸ್ ಮ್ಯಾಪ್ ಮಾಹಿತಿ ದೊರೆಯಲಿದೆ. ಬೆಳೆ ಸಮೀಕ್ಷೆ ಪ್ರಾರಂಭಿಸಲು ಸರ್ವೆ ನಂಬರ್ ಆಯ್ಕೆ ಮಾಡಬೇಕು. ಬೆಳೆದ ಬೆಳೆಯ 2 ಚಿತ್ರ ತೆಗೆದು ವಿವರ ಸಮೇತ ಅಪ್ಲೋಡ್ ಮಾಡಬೇಕು.

ಯಾಪ್ ನ್ನು ಒಮ್ಮೆ ಲೋಡ್ ಮಾಡಿ ಯಾಕ್ಟಿವೇಟ್ ಮಾಡಿಕೊಂಡರೆ ಪ್ರತಿ ಋತುವಿನಲ್ಲೂ ಅಪ್ಲೇಡ್ ಮಾಡಿಕೊಳ್ಳಬಹುದು.

ರೈತರು ಈ ಯೋಜನೆಯ ಸದುಪಯೋಗ ಪಡೆದು ನಿಗದಿತ ಸಮಯದೊಳಗೆ ಬೆಳೆ ವಿವ ಅಪ್ಲೋಡ್ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಟೋಲ್ ಪ್ರೀ ಸಂಖ್ಯೆ 18004253553 ಗೆ ಸಂಪರ್ಕಿಸಬಹುದು. ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಸಾಂಖ್ಯೀಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಮುಂಗಾರು ಬೆಳೆ ವಿಮೆ ನೋಂದಣಿ ಆರಂಭ

2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಶಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಎಲ್ಲಾ ಅರ್ಹ ರೈತರು (ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು) ನಿಗದಿತ ಅವಧಿಯೊಳಗೆ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು.

ಜೋಳ, ಸೂರ್ಯಕಾಂತಿ, ಹತ್ತಿ, ಕೆಂಪು ಮೆಣಸಿನ ಕಾಯಿ, ಈರುಳ್ಳಿ, ಭತ್ತ, ತೊಗರಿ, ರಾಗಿ, ನವಣೆ, ಹುರುಳಿ, ಸಜ್ಜೆ, ನೆಲಗಡಲೆ, ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಅವಕಾಶವಿದೆ.

ಇದನ್ನೂ ಓದಿ 585 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರು : ಬೆಳೆ ವಿಮೆ ಸ್ಟೇಟಸ್ ಇಲ್ಲೇ ಚೆಕ್ ಮಾಡಿ

ಕೃಷಿ ಇಲಾಖೆಯ ನಿಯಮಾವಳಿಗಳ ಪ್ರಕಾರ ಭತ್ತ (ನೀರಾವರಿ) ಮುಸುಕಿನ ಜೋಳ ಗ್ರಾಪಂ ಮಟ್ಟದ ಬೆಳೆ, ಇನ್ನುಳಿದ ಬೆಳೆಗಳನ್ನು ಹೋಬಳಿ ಮಟ್ಟದ ಬೆಳೆಗಳೆಂದು ಪರಿಗಣಿಸಲಾಗಿದೆ.

ಅರ್ಹ ರೈತರು ತಮ್ಮ ಹತ್ತಿರದ ಯಾವದೇ ಸ್ಥಳೀಯ ಬ್ಯಾಂಕುಗಳು, ಸಾರ್ವಜನಿಕ ಸೇವಾ ಕೇಂದ್ರಗಳು, ಗ್ರಾಪಂ ಮಟ್ಟದಲ್ಲಿ ಹೊಸದಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ವಿಮೆ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಶಿ ನಿರ್ದೇಶಕರ ಕಟೇರಿಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment