ಯಾವ ಯಾವ ಬೆಳೆಗಳಿಗೆ ಇನ್ನೂ ವಿಮೆ ಮಾಡಿಸಬಹುದು ? ಇಲ್ಲಿದೆ ಮಾಹಿತಿ

Written by Ramlinganna

Published on:

Bele vime last check here : ಮುಂಗಾರು ಹಂಗಾಮಿಗೆ ರೈತರು ಬೆಳೆ ವಿಮೆ ಮಾಡಿಸಬಹುದು. ಹೌದು, ಇನ್ನೂ ಬೆಳೆ ವಿಮೆ ಮಾಡಿಸಲು ರೈತರಿಗೆ ಕಾಲಾವಕಾಶವಿದೆ. ಕೆಲವು ಬೆಳಗಳಿಗೆ ಜುಲೈ 31 ಕೊನೆಯ ದಿನವಾದರೆ ಇನ್ನೂ ಕೆಲವು ಬೆಳೆಗಳಿಗೆ ಆಗಸ್ಟ್ ತಿಂಗಳ ಅಂತ್ಯದವರೆಗೆ ಕಾಲಾವಕಾಶವಿದೆ. ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು. ಯಾವ ಬೆಳೆಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನವಾಗಿದೆ ಎಂಬುದನ್ನು ರೈತರು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಬೆಳೆ ವಿಮೆ ಏಕೆ ಮಾಡಿಸಬೇಕು ?

ರೈತರು ಬೆಳೆ ವಿಮೆ ಮಾಡಿಸಿದರೆ ಅವರಿಗೆ ಬೆಳೆ ಹಾನಿಯಾದರೆ ಸರ್ಕಾರವು ವಿಮೆ ಹಣ ಪಾವತಿಸುವುದು. ಹೌದು, ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ ರೈತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಪರಿಹಾರ ಸಿಗುವುದು.

Bele vime last check here ಯಾವ ಯಾವ ಬೆಳೆಗಳಿಗೆ ಜುಲೈ 31 ರೊಳಗೆವಿಮೆ ಮಾಡಿಸಬಹುದು ಚೆಕ್ ಮಾಡುವುದು ಹೇಗೆ ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಯಾವ ಯಾವ ಬೆಳೆಗಳಿಗೆ ಜುಲೈ 31 ರೊಳಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುವುದು. ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ View cut of Dates ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅದರೊಂದಿಗೆ ಯಾವ ಯಾವ ಬೆಳೆಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನವಾಗಿದೆ ಎಂಬುದು ಕಾಣಿಸುತ್ತದೆ. ಇದರೊಂದಿಗೆ ವಿಮೆ ಮಾಡಿಸಲು ಇನ್ನೂ ಎಷ್ಟು ದಿನ ಬಾಕಿ ಇದೆ ಎಂಬ ಮಾಹಿತಿಯೂ ಅಲ್ಲಿ ಕಾಣಿಸುತ್ತದೆ. ಇದರೊಂದಿಗೆ ಆಗಸ್ಟ್ ತಿಂಗಳ 14 ರವರೆಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ. ಹಾಗಾಗಿ ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಬೆಳೆ ವಿಮೆ ಮಾಡಿಸಬಹುದು ಇಲ್ಲದಿದ್ದರೆ ನೀವು ಬೆಳೆ ವಿಮೆ ಪರಿಹಾರ ಪಡೆಯುವಲ್ಲಿ ವಂಚಿತರಾಗಬಹುದು.

ಬೆಳೆ ದರ್ಶಕ ಯಾಪ್ ನಲ್ಲಿ ಬೆಳೆ ಸಮೀಕ್ಷೆ ಸರಿಯಾಗಿದೆಯೇ ಇಲ್ಲೇ ಚೆಕ್ ಮಾಡಿ

ಬೆಳೆ ದರ್ಶಕ ಯಾಪ್ ನಲ್ಲಿ ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://play.google.com/store/apps/details?id=com.crop.offcskharif_2021&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಬೆಳೆ ದರ್ಶಕ್ ಯಾಪ್ ಓಪನ್ ಆಗುತ್ತದೆ. ಅಲ್ಲಿ ನೀವು install ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಬೆಳೆ ದರ್ಶಕ್ 2025-26 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಕಾಣಿಸುತ್ತದೆ. ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಿಡೆಂಟ್ಸ್  ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ರೈತ ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿಸ್ ಯಾಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಟೋ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

ಆಗ ನಿಮಗೆ ಸರ್ವೆ ನಂಬರ್ ಆಯ್ಕೆ ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾ ಮ ಕಾಣಿಸುತ್ತದೆ. ನಂತರ ಸರ್ವೆ ನಂಬರ್ ಹೀಗೆ ವಿವಿಧ ಆಯ್ಕೆಗಳು ಕಾಣಿಸುತ್ತವ. ಅದರಲ್ಲಿ ನೀವು ಒಂದೊಂದಾಗಿ ಸರಿಯಾಗಿ ಮಾಹಿತಿಗಳ್ನು ಭರ್ತಿ ಮಾಡಬೇಕಾಗುತ್ತದೆ.

Leave a Comment