ಜುಲೈ 10 ರಂದು ಮಿನಿ ಉದ್ಯೋಗ ಮೇಳ

Written by Ramlinganna

Published on:

job fair now in gulbarga : ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಪಾಸಾದ ಅಭ್ಯರ್ಥಿಗಳಿಗೆ ವಿವಿಧ ಉದ್ಯೋಗಾವಕಾಶ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ 2026ರ ಜುಲೈ 10ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐ.ಟಿ.ಐ. ಕಾಲೇಜು ಹಿಂದುಗಡೆಯಿರುವ  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳÀವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

job fair now in gulbarga ಯಾವ ಯಾವ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ?

ಶ್ರೀ ಸಾಯಿ ಅರ್ಥ ಮೂವರ್ಸ್ದಲ್ಲಿ ಸೇಲ್ಸ್ ಎಕ್ಸಿಕ್ಯೊಟಿವ್ ಸರ್ವಿಸ್ ಇಂಜಿನಿಯರ್ ಹುದ್ದೆಗೆ ಎಮ್.ಬಿ.ಎ/ ಐಟಿಐ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವರ್ಷದೊಳಗಿರಬೇಕು.

ಮಹಿಂದ್ರಾ  ಆಂಡ್ ಮಹಿಂದ್ರಾದಲ್ಲಿ ಟೆಕ್ನಿಷಿಯನ್ (ಆಪ್ರೆಂಟಿಶಿಪ್) ಹುದ್ದೆಗೆ  ಪಿಯುಸಿ, ಐಟಿಐ/ ಡಿಪ್ಲೋಮಾ/ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಟಾಟಾ ಮೊಟರ‍್ಸ್ ಟೆಕ್ನಿಷಿಯನ್ (ಆಪ್ರೆಂಟಿಶೀಪ್) ಹುದ್ದೆಗೆ ಪಿಯುಸಿ, ಐಟಿಐ/ ಡಿಪ್ಲೋಮಾ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಹೊಂಡೈ ಟೆಕ್ನಿಷಿಯನ್ (ಆಪ್ರೆಂಟಿಶೀಪ್) ಹುದ್ದೆಗೆ ಪಿಯುಸಿ ಐಟಿಐ/ ಡಿಪ್ಲೋಮಾ/ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 30 ವರ್ಷದೊಳಗಿರಬೇಕು.

ಶ್ರೀ ರಾಮ ಲೈಫ್ ಇನ್ಸುರೆನ್ಸ್ಸ್ದಲ್ಲಿ ಯು.ಎಮ್/ ಬಿ.ಡಿ.ಎಮ್ ಹುದ್ದೆಗೆ ಪಿಯುಸಿ / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 30 ರಿಂದ 40 ವರ್ಷದೊಳಗಿರಬೇಕು.

ಮುತ್ತೂಟ್ ಪೈನಾನ್ಸ್ದಲ್ಲಿ ಇಂಟರ್ನ್ ಅಸೋಸಿಯೇಟ್ಸ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವರ್ಷದೊಳಗಿರಬೇಕು.

ಇದನ್ನೂ ಓದಿ ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು? ಮೊಬೈಲ್ ನಲ್ಲಿ ಚೆಕ್ ಮಾಡಿ

ಲಾಹೋಟಿ ಮೊಟರ‍್ಸ್ದಲ್ಲಿ ರಿಲೇಷನ್‌ಶಿಫ್ ಮ್ಯಾನೇಜರ್, ಕಮರ್ಶಿಯಲ್ ಎಕ್ಸಿಕ್ಯೊಟಿವ್, ರಿಸೆಪ್ಯನಿಷ್ಟ್ / ಶೊ-ರೂಮ್ ಹೊಸ್ಟ್, ಇನ್ಸೂರೆನ್ಸ್ ಎಕ್ಸಿಕ್ಯೊಟಿವ್, ಬ್ಯಾಕ್ ಎಂಡ್ ಟೇಲಿಕಾಲರ್, ಟ್ರೂವ್ಯಾಲ್ಯೂ ಇವಾಲ್ಯುವೆಟರ್ ಹುದ್ದೆಗಳಿಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು.

ಎಸ್.ಬಿ.ಐ ಲೈಫ್ ಇನ್ಸುರೆನ್ಸ್ದಲ್ಲಿ ಗ್ರಾö್ಯಜುವೆಟ್ ಸೇಲ್ಸ್ ಟ್ರೆöÊನಿ/ ಸೇಲ್ಸ್ ಆಫೀಸರ್ /  ಡೆವಲಪಮೇಂಟ್ ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 40 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ) ಭಾವಚಿತ್ರಗಳು ಹಾಗೂ ಆಧಾರ್‌ಕಾರ್ಡ್ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಉದ್ಯೋಗಮೇಳದಲ್ಲ್ಲಿ ಭಾಗವಹಿಸಬೇಕು.

ಉದ್ಯೋಗ ಮೇಳÀದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9036069143 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment