ಬೆಳೆ ವಿಮೆ ಅರ್ಜಿ ಆಹ್ವಾನ ಯಾವ ಬೆಳೆಗೆ ಎಷ್ಟು ಜಮೆ? ಮಾಹಿತಿ ಇಲ್ಲಿದೆ

Written by Ramlinganna

Published on:

Crop insurance application invite : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನ ಅಡಿಯಲ್ಲಿ 2026-27ನೇರ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಹೋಬಳಿ, ಗ್ರಾಮ ಪಂಚಾಯ್ತಿ ಮತ್ತು ಬೆಳೆಗಳ ಬಗ್ಗೆ ಸರ್ಕಾರದ ಆದೇಶವಾಗಿದೆ.

ಈ ಯೋಜನೆಯಡಿಯಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತ, ಮುಸುಕಿನ ಜೋಳ, ರಾಗಿ, ಈರುಳ್ಳಿ, ಟೊಮ್ಯಾಟೋ, ಅರಿಶಿಣ, ಆಲೂಗಡ್ಡೆ, ಜೋಳ, ಸೂರ್ಯಕಾಂತಿ, ಸಜ್ಜೆ ಹಾಗೂ ಮಳೆ ಆಶ್ರಯದಲ್ಲಿ ಜೋಳ, ರಾಗಿ, ಉದ್ದು, ಸೂರ್ಯಕಾಂತಿ, ಮುಸುಕಿನ ಜೋಳ, ತೊಗರಿ, ನೆಲಗಡಲೆ, (ಶೇಂಗಾ) ಹೆಸರು, ಎಳ್ಳು, ಅಲಸಂಧೆ, ಹುರುಳಿ, ಹತ್ತಿ, ಸಜ್ಜೆ ಬೆಳೆಗಳನ್ನು ಬೆಳೆವಿಮೆಗೆ ಒಳಪಡಿಸಿ ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ.

ಇದನ್ನೂ ಓದಿಮಿನಿ ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನ

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಆತೆ, ಪಾಸ್ ಪುಸ್ತಕ, ಕಂದಾಯ ರಸೀದಿಗಳನ್ನು ಗುರುತಿನ ಚೀಟಿ ಸಂಖ್ಯೆ (ಎಫ್ಐಡಿ) ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಗೆ ಒಳಪಡುವ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ

Crop insurance application invite ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕು ?

ಪ್ರತಿ ಎಕರೆಗೆ ಉದ್ದು ಬೆಳೆಗೆ (ಮಳೆ ಆಶ್ರಿತ) ವಿಮಾಕ ಕಂದಾಗಿ 314 ರೂಪಾಯಿ, ಹೆಸರು ಬೆಳೆಗೆ 322 ರೂಪಾಯಿ, ಈರುಳ್ಳು (ನೀರಾವರಿ) 1900 ರೂಪಾಯಿ, ಎಳ್ಳು (ಮಳೆ ಆಶ್ರಿತ ಬೆಳೆಗೆ) 258 ರೂಪಾಯಿ, ಜೋಳ (ನೀರಾವರಿ) 426 ರೂಪಾಯಿ ಜೋಳ (ಮಳೆ ಆಶ್ರಿತ) 359 ರೂಪಾಯಿ, ಸೂರ್ಯಕಾಂತಿ (ನೀರಾವರಿ 469 ರೂಪಾಯಿ, ಸೂರ್ಯಕಾಂತಿ ಮಳೆ ಆಶ್ರಿತ 390 ರೂಪಾಯಿ ವಿಮಾ ಕಂತಾಗಿದ್ದು, ಬೆಳೆ ವಿಮೆ ನೋಂದಣಿಗೆ ಜೂನ್ 30 ಕೊನೆಯ ದಿನವಾಗಿದೆ.

ಅಲಸಂಧೆ ಬೆಳೆಗೆ (ಮಳೆ ಆಶ್ರಿತ) ವಿಮಾ ಕಂತಾಗಿ 283 ರೂಪಾಯಿ, ನೆಲಗಡೆ (ಶೇಂಗಾ), ಮಳೆ ಆಶ್ರಿತ 529 ರೂಪಾಯಿ, ಮುಸುಕಿನ ಜೋಳ (ನೀರಾವರಿ) 617 ರೂಪಾಯಿ, ಮುಸುಕಿನ ಜೋಳ (ಮಳೆ ಆಶ್ರಿತ) 546 ರೂಪಾಯಿ, ಸಜ್ಜೆ (ನೀರಾವರಿ) 350 ರೂಪಾಯಿ, ಸಜ್ಜೆ ಮಳೆ ಆಶ್ರಿತ 282 ರೂಪಾಯಿ,ಆಲೂಗಡ್ಡೆ ನೀರಾವರಿ 3466 ರೂಪಾಯಿ, ಟೊಮ್ಯಾಟೋ 3436 ರೂಪಾಯಿ ವಿಮಾ ಕಂತಾಗಿದ್ದು, ಬೆಳೆ ವಿಮೆ ನೋಂದಣಿಗೆ ಜುಲೈ 15 ಕೊನೆಯ ದಿನವಾಗಿರುತ್ತದೆ. ಹತ್ತಿ ಬೆಳೆಗೆ  ಮಳೆ ಆಶ್ರಿತ ವಿಮಾ ಕಂತಾಗಿ 1208 ರೂಪಾಯಿ, ಹುರುಳಿ  ಮಳೆ ಆಶ್ರಿತ 190 ರೂಪಾಯಿ, ಭತ್ತ ನೀರಾವರಿಗೆ 879 ರೂಪಾಯಿ, ತೊಗರಿ ಮಳೆ ಆಶ್ರಿತ 466 ರೂಪಾಯಿ, ರಾಗಿ (ನೀರಾವರಿ) 472 ರೂಪಾಯಿ ರಾಗಿ, ಮಳೆ ಆಶ್ರಿತ 404 ರೂಪಾಯಿ,ವಿಮಾ ಕಂತಾಗಿದ್ದು, ಬೆಳೆ ವಿಮೆಗೆ ಜುಲೈ 31 ಕೊನೆಯ ದಿನವಾಗಿದೆ.

ಯಾವ ಬೆಳೆಗೆ ವಿಮೆ ಮಾಡಿಸಿದರೆ ಎಷ್ಟು ಹಣ ಜಮೆಯಾಗುತ್ತದೆ ?

ಯಾವ ಬೆಳೆಗೆ ವಿಮೆ ಮಾಡಿಸಿದರೆ ಎಷ್ಟು ವಿಮೆ ಹಣ ಜಮೆಯಾಗುವುದು ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ  Premium calculation ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ಎಂಬ ಮಾಹಿತಿ ಕಾಣಿಸುತ್ತದೆ. ನಂತರ ನೀವು ಬೆಳೆ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಜಮೀನು ಎಷ್ಟು ಎಕರೆ ಇದೆ ಎಂಬುದನ್ನು ಅಲ್ಲಿ ನಮೂದಿಸಬೇಕು.ನಂತರ Show Premium ಮೇಲೆ ಕ್ಲಿಕ್ ಮಾಡದಸೆ ಸಾಕು ನಿಮಗೆ ಎಷ್ಟು ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ  ನೀವು ಕಟ್ಟು ಹಣ, ಎಷ್ಟು ಎಂಬ ಮಾಹಿತಿಯೂ ಕಾಣಿಸುತ್ತದೆ.

Leave a Comment