ಇಂದು ಇಲ್ಲಿ ಹೆಸರಿರುವ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ

Written by Ramlinganna

Published on:

Today pm kisan release : ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳಿಗಿಲ್ಲಿದೆ ಗುಡ್ ನ್ಯೂಸ್. ಇಂದು ಸಾಯಂಕಾಲ ಪಿಎಂ ಕಿಸಾನ್ ಯೋಜನೆಯ ಹಣ ರೈತರ ಖಾತೆಗೆ ಜಮೆಯಾಗಲಿದೆ. ಹಾಗಾದರೆ ಈ ಸಲ ಅಂದರೆ 22ನೇ ಕಂತಿನ ಹಣ ಯಾವ ರೈತರಿಗೆ ಜಮೆಯಾಗಲಿದೆ. ಇಕೆವೈಸಿ ಮಾಡಿಸುವುದು ಹೇಗೆ ಇಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಇಂದು ಸಾಯಂಕಾಲ ಅಸ್ಸಾಂ ರಾಜ್ಯ ಗೌಹಾಟಿಯಿಂದ ಬಿಡುಗಡೆಯಾಗಲಿದೆ.ಗೌಹಾಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಅಸ್ಸಾಂನ ಗುಹಾಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು 9.32 ಕೋಟಿ ರೈತರಿಗೆ ವರ್ಗಾವಣೆ ಮಾಡಲಿದ್ದಾರೆ.

ಅಗತ್ಯ ಕಂಡುಬಂದರೆ ಇ ಕೆವೈಸಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿ. ಆಗ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವು ರೈತರ ಖಾತೆಗೆ ಸರಾದ ಸಮಯಕ್ಕೆ ಜಮೆ ಆಗುತ್ತದೆ ಎಂದು ಕೃ ಷಿ ಸಚಿವ ಶಿವರಾಜ ಸಿಂಗ್ ಚೌಹಾಣ ಅವರು ತಿಳಿಸಿದ್ದಾರೆ.

ಅರ್ಹ ಫಲಾನುಭವಿ ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ನಿಮ್ಮ ಸ್ಥಿತಿ ತಿಳಿಯಿರಿ ( ) ಸೌಲಭ್ಯವನ್ನು ಪೋರ್ಟಲ್ ನಲ್ಲಿ ನೀಡಲಾಗಿದೆ. ಇದರ ಮೂಲಕ ಪಾವತಿ ಸ್ಥಿತಿ, ಅರ್ಹತೆ, ಆಧಾರ್ ಜೋಡಣೆ ಮತ್ತು ಇಕೆವೈಸಿ ಸ್ಥಿತಿಯನ್ನು ತಿಳಿಯಬಹುದು.

ರೈತರು ಇಕೆವೈಸಿ ಪ್ರಕ್ರಿಯಯನ್ನು ಮನೆಗಳಿಂದಲೇ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವ ಯಾಪ್ ಒಂದನ್ನು ಕೂಡ ಕೇಂದ್ರವು ಬಿಡುಗಡೆ ಮಾಡಿದೆ.

ಇಕೆವೈಸಿ ಆಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆ ಎಫ್ಐಡಿಗೆ ಇಕೆವೈಸಿ ಆಗಿದೆಯೋ ಇಲ್ಲವೋ ಚೆಕ್ ಮಾಡಲು ಈ

https://pmkisan.gov.in/BeneficiaryStatus_New.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Enter Registration No ನಮೂದಿಸಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚಾ ಕೋಡ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಓಟಿಪಿ ನಮೂದಿಸಿದ ನಂತರ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. . ನಿಮ್ಮ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ಗೊತ್ತಿಲ್ಲದಿದ್ದರೆ Know Your Registration No ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಜ್ಯಾ ಕೋಡ್ ನಮೂದಿಸಬೇಕು. ನಂತರ ಗೆಟ್ ಮೊಬೈಲ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಓಟಿಪಿ ನಮೂದಿಸಿ ಸ್ಟೇಟಸ್ ಚೆಕ್ ಮಾಡಬಹುದು.

Today pm kisan release  ಪಿಎಂ ಕಿಸಾನ್ ನೋಂದಣಿಗೆ ಫಾರ್ಮರ್ ಐಡಿ ಕಡ್ಡಾಯ

ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನೋಂದಣಿಗೆ ಫಾರ್ಮರ್ ಐಡಿಯನ್ನು ಕಡ್ಡಾಯಗೊಳಿಸಿದೆ.ಪ್ರಸ್ತುತ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಿರುವ ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತಿಸಗಢ, ಗುಜರಾತ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಹಾಗೂ ಉತ್ತರ ಪ್ರದೇಶದ ಸೇರಿದಂತೆ ಒಟ್ಟು 14 ರಾಜ್ಯಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವವರು ಫಾರ್ಮರ್ ಐಡಿ ಒದಗಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವ ಪಾಠಗಳಿಂದ ಪ್ರಶ್ನೆ ಬರುತ್ತವೆ? ಇಲ್ಲಿದೆ ಮಾಹಿತಿ

ಇನ್ನುಳಿದ ರಾಜ್ಯಗಳಲ್ಲಿ ನೋಂದಣ ಕಾರ್ಯ ಇನ್ನೂ ಶುರುವಾಗದ ಕಾರಣ ಅಲ್ಲಿ ಈ ಐಡಿ ಕಡ್ಡಾಯವಾಗಿದೆ. ಇನ್ನುಳಿದ ರಾಜ್ಯಗಳಲ್ಲಿ ನೋಂದಣಿ ಕಾರ್ಯ ಇನ್ನೂ ಶುರುವಾಗದ ಕಾರಣ ಅಲ್ಲ ಈ ಐಡಿ ಕಡ್ಡಾಯಾಗಿಲ್ಲ. ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯು ಸಣ್ಣ ಮತ್ತು ಅತೀ ಸಣ್ಣ ರೈತರ ಬದುಕಿಗೆ ಆಸರೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ದೊಡ್ಡ ಮಟ್ಟದ ಉತ್ತೇಜನ ನೀಡುತ್ತಿದೆ.

Leave a Comment