SSLC centum answer papers : ಎಸ್ಎಸ್ಎಲ್ಸಿ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿದೆ. ಹೌದು, 10ನೇ ಪರೀಕ್ಷೆಗೆ ಇನ್ನೂ 15 ದಿನಗಳು ಮಾತ್ರ ಬಾಕಿ ಉಳಿದಿವೆ. ಕನ್ನಡ ಇಂಗ್ಲೀಶ್ ಹಾಗೂ ಹಿಂದಿ, ಸಮಾಜ. ವಿಜ್ಞಾನ ಹಾಗೂ ಗಣಿತ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕಗಳು ಪಡೆದ ಕೆಲವು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ
SSLC centum answer papers ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು
10ನೇ ತರಗತಿಯಲ್ಲಿ ಎಲ್ಲಾ ಪತ್ರಿಕೆಗಳನ್ನು ಅಂದರೆ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಡೌನ್ಲೋಡ್ ಮಾಡಲು ಈ
https://kseab.karnataka.gov.in/new-page/Centum%20Papers/kn
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಶೇಕಡಾ 100 ಅಂಕ ಪಡೆದ ಉತ್ತರ ಪತ್ರಿಕೆಗಳು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ First Language ಕನ್ನಡ, Second Language ಇಂಗ್ಲೀಷ್,
Second Language ಕನ್ನಡ, First Language ಇಂಗ್ಲೀಷ್ Third Language ಹಿಂದಿ ಸೇರಿದಂತೆ Mathematics, Science, Social Science ಭಾಷೆಯ ಮೂರು ಮೂರು ಪತ್ರಿಕೆಗಳು ಕಾಣಿಸುತ್ತವೆ. ನಿಮಗೆ ಯಾವ ವಿಷಯ ಬೇಕೋ ಅದರ ಮುಂದುಗಡೆ ಇರುವ ಕೋಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಉತ್ತರ ಪತ್ರಿಕೆ ಡೌನ್ಲೋಡ್ ಆಗುತ್ತದೆ. 100 ಕ್ಕೆ 100 ಅಂಕಗಳನ್ನು ಪಡೆದ ವಿದ್ಯಾರ್ಥಿ ಯಾವ ರೀತಿ ಬರೆದಿದ್ದಾರೆ ಎಂಬುದನ್ನು ನೋಡಿಕೊಂಡು ನೀವು ಸಹ ಪರೀಕ್ಷೆಯಲ್ಲಿ ಅದೇ ರೀತಿ ಬರೆಯಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾರಿಗೆ ಯಾವಾಗ ಜಮೆ? ಇಲ್ಲಿದೆ ಮಾಹಿತಿ
ಒಂದು ವಾಕ್ಯದಲ್ಲಿ ಹೇಗೆ ಉತ್ತರಿಸಬೇಕು. ಎರಡು ಮೂರು ವಾಕ್ಯದಲ್ಲಿ,ಎಂಟು ಹತ್ತು ವಾಕ್ಯದಲ್ಲಿ ಸಂದರ್ಭ ಸ್ವಾರಸ್ಯ ಹೇಗೆ ಉತ್ತರಿಸಬೇಕು ಎಂಬುದು ಕಾಣಿಸುತ್ತದೆ. ಏನೇನು ಬರೆದರೆ ಅಂಕ ಕೊಡಲಾಗತ್ತದೆ ಎಂಬುದನ್ನು ಮಾದಿರಿಯಾಗಿ ಇಟ್ಟುಕೊಳ್ಳಬಹುದು. ಇದರೊಂದಿಗೆ ಪತ್ರ ಲೇಖನ, ಗಾದೆ ಮಾತು ವಿವರಣೆ, ಪ್ರಬಂಧ ಲೇಖನ ಹೇಗಿರಬೇಕು. ಪೀಠಿಕೆಯಲ್ಲಿ ಏನು ಬರೆಯಬೇಕು. ವಿಷಯ ವಿವರಣೆಯಲ್ಲಿ ಏನು ಬರೆಯಬೇಕು ಹಾಗೂ ಉಪ ಸಂಹಾರದಲ್ಲಿ ಏನೇನು ಬರೆಯಬೇಕು ಎಂಬುದನ್ನು ನೋಡಿಕೊಳ್ಳಬಹುದು. ಇದರೊಂದಿಗೆ ಪದ್ಯದ ಸಾರಾಂಶ, ಅಲಂಕಾರ ಹೀಗೆ ಎಲ್ಲಾ ಮಾದರಿಯ ಉತ್ತರಗಳನ್ನು ಹೇಗೆ ಬರೆಯಬೇಕು ಎಂಬ ಮಾಹಿತಿ ಕಾಣಿಸುತ್ತದೆ. ಇದು ಕನ್ನಡ ಅಷ್ಟೇ ಅಲ್ಲ, ಇಂಗ್ಲೀಷ್, ಹಿಂದಿ ಹಾಗೂ ಇತರ ವಿಷಯಗಳನ್ನು ಉತ್ತರ ಹೇಗೆ ಬರೆಯಬೇಕು ಅಂಕಗಳನ್ನು ಹೇಗೆ ಕೊಡಲಾಗುತ್ತದೆ ಎಂಬುದನ್ನು ನೀವು ಇಲ್ಲಿ ಚೆಕ್ ಮಾಡಬಹುದು.
ಮಾಡಲ್ ಪತ್ರಿಕೆಗಳ ಕೀ ಉತ್ತರಗಳು
ಎಸ್ಎಸ್ಎಲ್ಸಿ ಎಲ್ಲಾ ವಿಷಯಗಳ ಮಾಡಲ್ ಪ್ರಶ್ನೆ ಪತ್ರಿಕೆ, ಉತ್ತರಸಹಿತ ಕೀ ಉತ್ತರಗಳನ್ನು ಸಹ ನೋಡಬಹುದು. ಕಳೆದ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಮೂರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀವು ಪ್ರಾಕ್ಟಿಸ್ ಮಾಡಿದರೆ ಸಾಕು ನಿಮಗೆ ಕನಿಷ್ಟ 60 ರಿಂದ 70 ಅಂಕಗಳು ಬರುತ್ತವೆ. ಇದರೊಂದಿಗೆ ಆಂತರಿಕ ಅಂಕಗಳು ಸೇರಿ ನೀವು 80ಕ್ಕಿಂ ಹೆಚ್ಚು ಅಂಕಗಳನ್ನು ಸುಲಭವಾಗಿ ಪಡೆಯಬಹುದು.
ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಮಾದರಿ ಪ್ರಶ್ನೆಗಳನ್ನು ಬಿಡಿಸಿ ಪ್ರಾಕ್ಟಿಸ್ ಮಾಡಿಕೊಳ್ಳಬೇಕು. ನಿಮಗೆ ಏನಾದರೂ ಡೌನ್ಲೋಡ್ ಮಾಡುವಲ್ಲಿ ಸಮಸ್ಯೆಯಾಗುತ್ತಿದ್ದರೆ ಕೂಡಲೇ ಕಾಮೆಂಟ್ ಮಾಡಬಹುದು. ನಿಮಗೆ ವ್ಯಾಟ್ಸ್ ಅಪ್ ನಲ್ಲಿ ಉತ್ತರ ನೀಡಲಾಗುವುದು.





