ಹಸು ಎಮ್ಮೆ ಶೆಡ್ ನಿರ್ಮಾಣಕ್ಕೆ 57 ಸಾವಿರ ರೂಪಾಯಿ ಸಬ್ಸಿಡಿ ಇಲ್ಲಿ ಸಿಗಲಿದೆ

Written by Ramlinganna

Published on:

cow unit subsidy get : ರೈತರು ತಮ್ಮ  ಬಳಿಯಿರುವ ಜಾನುವಾರುಗಳಿಗಾಗಿ ಶೆಡ್ ನಿರ್ಮಾಣಕ್ಕೆ 57 ಸಾವಿರ ರೂಪಾಯಿ ಸಬ್ಸಿಡಿ ಪಡೆಯಬಹುದು.

ಹೌದು, ರೈತ ಮಿತ್ರರೇ ಮನರೇಗಾ ಯೋಜನೆ ಅಡಿಯಲ್ಲಿ ಹಸು ಎಮ್ಮೆಗಳ ಶೆಡ್ ನಿರ್ಮಾಣಕ್ಕೆ 57 ಸಾವಿರ ರೂಪಾಯಿ ಸಹಾಯಧನ ಸಿಗಲಿದೆ. ಅರ್ಜಿ ಎಲ್ಲಿ ಸಲ್ಲಿಸಬೇಕು ಯಾರಿಗೆ ಸಬ್ಸಿಡಿ ನೀಡಲಾಗುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಾನುವಾರುಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿದೆ.  ಇದರಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಾನುವಾರುಗಳ ಶೆಡ್ ನಿರ್ಮಾಣಕ್ಕೆ 57ಸಾವಿರ ರೂಪಾಯಿಗಳ ಸಹಾಯಧನ ಪಡೆಯಬಹುದು.

ಹಸು ಮತ್ತು ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೆ 57 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಈ ಮೊತ್ತದಲ್ಲಿ ಸುಮಾರು 10556 ರೂಪಾಯಿ ಕೂಲಿಗಾಗಿ ಹಾಗೂ ಉಳಿದ 46644 ರೂಪಾಯಿ ಸಾಮಗ್ರಿ ಸಹಾಯಧನಕ್ಕಾಗಿ ಸಿಗುತ್ತದೆ. ಇದೇ ರೀತಿ ಕೋಳಿ, ಹಂದಿ, ಕುರಿ ಶೆಡ್ ನಿರ್ಮಾಣಕ್ಕೂ ಸಬ್ಸಿಡಿ ಸಿಗಲಿದೆ.

ಒಂದು ಕುಟುಂಬವು ಜೀವಿತಾವಧಿಯಲ್ಲಿ ನರೇಗಾ ವೈಯಕ್ತಿಕ ಕಾಮಗಾರಿಗಳ ಅಡಿಯಲ್ಲಿ 5 ಲಕ್ಷ ರೂಪಾಯಿಯವರೆಗೆ ಸಹಾಯಧನ ಸಿಗುತ್ತದೆ. ಇದೇ ರೀತಿ ಕೃಷಿ ಹೊಂಡ, ತೋಟಗಾರಿಕೆ ಬೆಳೆ, ಕ್ಷೇತ್ರ ಬದು ಇತ್ಯಾದಿ ವೈಯಕ್ತಿಕ ಕಾಮಗಾರಿಗಳಿಗೂ ನೆರವು ಸಿಗುತ್ತದೆ.

cow unit subsidy get ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ?

ನರೇಗಾ ಯೋಜನೆಯ ಲಾಭ ಪಡೆಯಲು ಮೊದಲು ಜಾಬ್ ಕಾರ್ಡ್ ಹೊಂದಿರಬೇಕು.. ನೀವು ನಿಮ್ಮ ಜಾನುವಾರುಗಳಿಗೆ ಶೆಡ್ ನಿರ್ಮಾಣಕ್ಕೆ ಸಬ್ಸಿಡಿ ಪಡೆಯಲು ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ ದೃಢೀಕರಣ ಪತ್ರ ನೀಡಬೇಕು. ಎಲ್ಲಾ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲನೆ ಮಾಡಿದ ನಂತರ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಕ್ಕೆ ಅನುಮತಿ ಸಿಗುತ್ತದೆ.

ಶೆಡ್ ನಿರ್ಮಾಣಕ್ಕೆ ಸಬ್ಸಿಡಿ ಪಡೆಯಲು ಬೇಕಾಗುವ ದಾಖಲೆಗಳು ಯಾವುವು ?

ಶೆಡ್ ನಿರ್ಮಾಣಕ್ಕೆ ಸಬ್ಸಿಡಿ ಪಡೆಯಲು ಜಾಬ್ ಕಾರ್ಡ್ ಪ್ರತಿ ಇರಬೇಕು. ಆಧಾರ್ ಕಾರ್ಡ್ ಇರಬೇಕು. ಭೂಮಿಯ ದಾಖಲಾತಿ (ಪಹಣಿ ) ಇರಬೇಕು ಬ್ಯಾಂಕ್ ಖಾತೆ ಇರಬೇಕು. ಪಶು ಇಲಾಖೆಯ ಪಶು ವೈದ್ಯಾಧಿಕಾರಿಗಳ ದೃಢೀಕರಣ ಪತ್ರ ಹೊಂದಿರಬೇಕು. ಅರ್ಜಿ ಸಲ್ಲಿಸಿದ ನಂತರ ಲಭ್ಯತೆಯ ಆಧಾರದ ಮೇಲೆ ಸಬ್ಸಿಡಿ ನೀಡಲಾಗುವುದು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ

2025-26ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತ ಮಹಿಳೆಯರಿಗೆ ಕೃಷಿ ಉತ್ಪನ್ನಗಳ ಮೌಲ್ಯವರ್ದನೆ ಮತ್ತು ಸಂಸ್ಕರಣೆ ಕುರಿತು ಫೆಬ್ರವರಿ 25 ರಿಂದ 27 ರವರೆಗೆ ಮೂರು ದಿನಗಳ ತರಬೇತಿಯನ್ನು ಕಲಬುರಗಿ ಕೋಟನೂರು (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಕೋಟನೂರು (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ SSLC ಮಾದರಿ ಉತ್ತರ ಪತ್ರಿಕೆ ಬಿಡುಗಡೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಆಸಕ್ತಿಯುಳ್ಳ ಪರಿಶಿಷ್ಟ ಜಾತಿ ರೈತ ಮಹಿಳೆಯರು ಸಹಾಯಕ ಕೃಷಿ ನಿರ್ದೇಶಕರಾದ ನೀಲಕ್ಕಾ ನರಸಲಗಿ ಇವರು ಮೊಬೈಲ್ ನಂಬರ್ 9845350226 ಹಾಗೂ ಕೃಷಿ ಅಧಿಕಾರಿಗಳಾದ ಪ್ರಿಯಾಂಕ್ ಕುಲ್ಕರ್ಣಿ 8277935625 ಹಾಗೂ ಯಾಸ್ಮೀನ್ 9901604822 ಇವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಫ್ಐಡಿ ಹೊಂದಿರುವ ಆಸಕ್ತ ರೈತ ಮಹಿಳೆಯರು ನೋಂದಾಯಿಸಿಕೊಳ್ಳಬೇಕು. ಎಫ್ಐಡಿ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕೆಂದು ಅವರು ತಿಳಿಸಿದ್ದಾರೆ.

Leave a Comment